
ಮಕ್ಕಳು ಮಾತ್ರವಲ್ಲ ಚಾಕೊಲೇಟನ್ನು (Chocolate) ದೊಡ್ಡವರು ಸಹ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಹೀಗೆ ಸಿಹಿಯಾದ, ರುಚಿಕರವಾಗ ಈ ಚಾಕೊಲೇಟ್ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಈ ಚಾಕೊಲೇಟ್ ಸಿಹಿ, ಖುಷಿಯನ್ನು ಹಂಚುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ವಿಶೇಷವಾಗಿ ಡಾರ್ಕ್ ಚಾಕೊಲೇಟ್ ಹಲವು ಪ್ರಯೋಜನಗಳನ್ನು ಹೊಂದಿವೆ. ಹೌದು ಇದು ಮನಸ್ಥಿತಿಯನ್ನು ಸುಧಾರಿಸಲು, ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸಲು, ಹೃದಯದ ಆರೋಗ್ಯಕ್ಕೆ, ಒತ್ತಡವನ್ನು ನಿರ್ವಹಿಸಲು ಸಹಕಾರಿ. ಚಾಕೊಲೇಟ್‌ನ ಈ ಪ್ರಯೋಜನಗಳು ಮತ್ತು ಮಹತ್ವದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಪ್ರತಿವರ್ಷ ಜುಲೈ 07 ರಂದು ವಿಶ್ವ ಚಾಕೊಲೇಟ್ (World Chocolate Day) ದಿನವನ್ನು ಆಚರಿಸಲಾಯಿತು. ಈ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು ಎಂಬುದನ್ನು ನೋಡೋಣ ಬನ್ನಿ.
ವಿಶ್ವ ಚಾಕೊಲೇಟ್ ದಿನವನ್ನು ಜುಲೈ 7, 2009 ರಂದು ಪ್ರಾರಂಭಿಸಲಾಯಿತು. 16 ನೇ ಶತಮಾನದಲ್ಲಿ ಅಂದ್ರೆ, ಜುಲೈ 07, 1550 ರಂದು ಯುರೋಪಿನಲ್ಲಿ ಚಾಕೊಲೇಟನ್ನು ಪರಿಚಯಿಸಲಾಯಿತು ಎಂದು ನಂಬಲಾಗಿದೆ. ಈ ದಿನದ ನೆನಪಿಗಾಗಿ 2009 ರಲ್ಲಿ ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಈ ವಿಶೇಷ ದಿನವನ್ನು ಆಚರಿಸಲಾಗುತ್ತಿದೆ.
ಚಾಕೊಲೇಟನ್ನು ಹೆಚ್ಚಾಗಿ ಸಂತೋಷ, ಖುಷಿ ಸಂದರ್ಭಗಳಲ್ಲಿ ಸಿಹಿಯ ರೂಪದಲ್ಲಿ ತಿನ್ನಲಾಗುತ್ತದೆ. ಜನರು ಪರಸ್ಪರ ಚಾಕೊಲೇಟ್‌ಗಳನ್ನು ನೀಡುವ ಮೂಲಕ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಾರೆಯಾಗಿ ಚಾಕೊಲೇಟ್ ಸಂತೋಷ ಮತ್ತು ಆಚರಣೆಯ ಸಂಕೇತವಾಗಿದೆ. ಇಷ್ಟು ಮಾತ್ರವಲ್ಲದೆ ಚಾಕೊಲೇಟ್ ಹಲವಾರು ಆರೋಗ್ಯ ಪ್ರಯೋಜನಗಳು ಸಹ ಹೊಂದಿವೆ. ಹೌದು ಚಾಕೊಲೇಟ್ ತಿನ್ನುವುದರಿಂದ ಕೇವಲ ಒಂದಲ್ಲ, ಹಲವು ಪ್ರಯೋಜನಗಳಿವೆ. ಇದು ಹೃದಯವನ್ನು ಆರೋಗ್ಯವಾಗಿರಿಸುತ್ತದೆ, ಅದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಅಲ್ಲದೆ ಚಾಕೊಲೇಟ್ ತಿನ್ನುವುದರಿಂದ ಮನಸ್ಥಿತಿಯೂ ಸುಧಾರಿಸುತ್ತದೆ. ಚಾಕೊಲೇಟ್‌ನ ಈ ಪ್ರಯೋಜನಗಳು ಮತ್ತು ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಈ ವಿಶೇಷ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಈ ಮೂರು ಆಹಾರಗಳು
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ