
ಅರಣ್ಯ ನಾಶ, ನಗರೀಕರಣದಂತಹ ಮಾನವನ ಚಟುವಟಿಕೆಗಳು ಮತ್ತು ಹವಾಮಾನ ಬದಲಾವಣೆ (Climate change), ಜಾಗತಿಕ ತಾಪಮಾನದ ಕಾರಣದಿಂದಾಗಿ ಭೂಮಿ ಬರಡಾಗುತ್ತಿದ್ದು, ಫಲವತ್ತತೆ ಅವನತಿಯ ಹಂತ ತಲುಪುತ್ತಿದೆ. ಬಹಳಷ್ಟು ಪ್ರದೇಶಗಳು ಮರುಭೂಮಿಗಳಾಗಿ ಬದಲಾಗುವ ಅಂಚಿಗೆ ತಲುಪಿವೆ. ಇದಕ್ಕೆ ಉದಾಹರಣೆಯೆಂಬಂತೆ ಮುಂಗಾರು ಆರಂಭವಾಗಿ ಒಂದೆರಡು ವಾರ ಕಳೆದ್ರೂ ಈ ಬಾರಿ ದೇಶದ ಹಲವು ಭಾಗಗಳಲ್ಲಿ ನಿರೀಕ್ಷೆಯಂತೆ ಮಳೆಯಾಗುತ್ತಿಲ್ಲ. ಡ್ಯಾಮ್‌ಗಳೆಲ್ಲಾ ಬರಿದಾಗುತ್ತಿದ್ದು, ಬರದ ಛಾಯೆ ಮೂಡುತ್ತಿದೆ. ಈ ಬರಗಾಲ ಪರಿಸ್ಥಿತಿ ಜಗತ್ತಿಗೆ ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ, ಬರಗಾಲ ಮತ್ತು ಮರುಭೂಮೀಕರಣದ ಪರಿಣಾಮಗಳನ್ನು ತಡೆಗಟ್ಟಲು ಪ್ರತಿವರ್ಷ ಜೂನ್ 17 ರಂದು ವಿಶ್ವ ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುತ್ತದೆ.
ಮರುಭೂಮೀಕರಣ ಮತ್ತು ಬರಗಾಲ ಸಮಸ್ಯೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 1994 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಹವಾಮಾನ ಬದಲಾವಣೆಯಿಂದ ಉಂಟಾಗುತ್ತಿರುವ ಪರಿಸರ ಅವನತಿ ಮತ್ತು ಮರುಭೂಮೀಕರಣವನ್ನು ಎದುರಿಸಲು ವಿಶ್ವಸಂಸ್ಥೆಯ ಸಮಾವೇಶವನ್ನು (UNCCD) ಅಂಗೀಕರಿಸಿತು. ಆ ದಿನದಂದು ಜೂನ್ 17 ರಂದು ಮರುಭೂಮೀಕರಣ ಮತ್ತು ಬರಗಾಲ ತಡೆ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಈ ದಿನವನ್ನು ಮೊದಲು 1995 ರಲ್ಲಿ ಆಚರಿಸಲಾಯಿತು. ಮತ್ತು ಅಂದಿನಿಂದ ಈ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ.
ಇದನ್ನೂ ಓದಿ: ವಿಶ್ವ ಪವನ ದಿನಾಚರಣೆಯ ಉದ್ದೇಶವೇನು?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ