AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Heritage Day 2024 : ಗತಕಾಲದ ವೈಭವಕ್ಕೆ ಸಾಕ್ಷಿ ಈ ಐತಿಹಾಸಿಕ ಸ್ಮಾರಕಗಳು!

ವಿಶ್ವದಲ್ಲಿ ಹಲವಾರು ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳಿವೆ. ಅದಲ್ಲದೇ, ಸ್ಮಾರಕಗಳ ಇತಿಹಾಸ ಹಾಗೂ ಪಾರಂಪರಿಕ ತಾಣಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆ ದಿನ ಎಂದು ಆಚರಣೆ ಮಾಡಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

World Heritage Day 2024 : ಗತಕಾಲದ ವೈಭವಕ್ಕೆ ಸಾಕ್ಷಿ ಈ ಐತಿಹಾಸಿಕ ಸ್ಮಾರಕಗಳು!
World Heritage Day 2024
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on:Apr 18, 2024 | 9:37 AM

Share

ವಿಶ್ವದಲ್ಲಿ ನೂರಾರು ಪಾರಂಪರಿಕ, ಐತಿಹಾಸಿಕ, ಸಾಂಸ್ಕೃತಿಕ ಮಹತ್ವಪೂರ್ಣ ತಾಣಗಳು ಇವೆ. ಇದು ನಮ್ಮ ಸಾಂಸ್ಕೃತಿಕ ವೈವಿದ್ಯತೆಯನ್ನು ತೋರಿಸುತ್ತವೆ. ಈ ತಾಣಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಈಗಾಗಲೇ ಯುನೆಸ್ಕೋವು 167 ದೇಶಗಳಲ್ಲಿ ಒಟ್ಟು 1155 ಸ್ಮಾರಕಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗೊತ್ತುಪಡಿಸಿದೆ. ಅದಲ್ಲದೇ ನಮ್ಮ ಮುಂದಿನ ಪೀಳಿಗೆಯವರಿಗೆ ಈ ತಾಣಗಳು ಹಾಗೂ ಸ್ಮಾರಕಗಳ ಮಹತ್ವವನ್ನು ತಿಳಿಸುವ ಉದ್ದೇಶವನ್ನು ವಿಶ್ವ ಪರಂಪರೆಪರೆ ದಿನವು ಹೊಂದಿದೆ.

ವಿಶ್ವ ಪರಂಪರೆ ದಿನದ ಇತಿಹಾಸ:

1982 ರಲ್ಲಿ, ಸ್ಮಾರಕಗಳು ಮತ್ತು ತಾಣಗಳ ಇಂಟರ್ನ್ಯಾಷನಲ್ ಕೌನ್ಸಿಲ್ (ICOMOS) ಏಪ್ರಿಲ್ 18 ಅನ್ನು ವಿಶ್ವ ಪರಂಪರೆಯ ದಿನವಾಗಿ ಆಚರಿಸಲು ನಿರ್ಧರಿಸಿತು. ಆ ಬಳಿಕ ಯುನೆಸ್ಕೋ 1983 ರಲ್ಲಿ 22 ನೇ ಸಾಮಾನ್ಯ ಸಮ್ಮೇಳನದಲ್ಲಿ ಅನುಮೋದನೆಯನ್ನು ನೀಡಿತು. ಅಂದಿನಿಂದ ಪ್ರತಿ ವರ್ಷ ಏಪ್ರಿಲ್ 18 ರಂದು ವಿಶ್ವ ಪರಂಪರೆ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: Red Banana: ಹಳದಿ ಬಾಳೆಹಣ್ಣಿಗಿಂತಲೂ ಕೆಂಪು ಬಾಳೆ ಹಣ್ಣು ಆರೋಗ್ಯಕರವೇ?

ವಿಶ್ವ ಪರಂಪರೆ ದಿನದ ಮಹತ್ವ ಹಾಗೂ ಆಚರಣೆ:

ವಿಶ್ವ ಪರಂಪರೆಯ ದಿನದ ಮುಖ್ಯ ಉದ್ದೇಶವೆ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಸ್ಮಾರಕಗಳ ಬಗ್ಗೆ ಜ್ಞಾನವನ್ನು ಹೆಚ್ಚಿಸುವುದು ಹಾಗೂ ಆ ತಾಣಗಳಜು ಸಂರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ. ಅದಲ್ಲದೇ, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು, ಭೂಗೋಳಶಾಸ್ತ್ರಜ್ಞರು, ಸಿವಿಲ್ ಎಂಜಿನಿಯರ್‌ಗಳು, ಕಲಾವಿದರು ಹಾಗೂ ಪುರಾತತ್ತ್ವ ಶಾಸ್ತ್ರಜ್ಞರು ಪರಂಪರೆಯನ್ನು ಸಂರಕ್ಷಿಸಲು ಕೊಡುಗೆ ನೀಡಿದ ಎಲ್ಲರನ್ನು ಗುರುತಿಸುವ ಕೆಲಸವನ್ನು ಈ ದಿನ ಮಾಡಲಾಗುತ್ತದೆ. ಈ ದಿನದಂದು ಪಾರಂಪರಿಕ ತಾಣಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಸಮ್ಮೇಳನಗಳು, ಉಪನ್ಯಾಸಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:05 pm, Wed, 17 April 24