
ಪರಿಸರ ಸಮತೋಲನಕ್ಕೆ ಈ ಸೃಷ್ಟಿಯಲ್ಲಿರುವ ಜೀವಿಗಳ ಪಾತ್ರ ಕೊಡುಗೆ ಬಹುದೊಡ್ಡದು. ಪ್ರಾಣಿ ಸಂಕುಲದಲ್ಲಿರುವ ಒಂದೇ ಒಂದು ಜೀವಿಯೂ ಅಳಿವಿನಂಚಿಗೆ ತಲುಪಿದರೂ ಇಡೀ ಪರಿಸರ ವ್ಯವಸ್ಥೆಯೇ ಸಮತೋಲನ ಕಳೆದುಕೊಳ್ಳುತ್ತವೆ. ಹೌದು, ಸಾಮಾನ್ಯವಾಗಿ ಈ ಹಿಪೋಪೊಟಮಸ್ ಅಥವಾ ನೀರ್ಗುದುರೆಯನ್ನು ಮೃಗಾಯಲದಲ್ಲಿ ನೋಡಿರುತ್ತೇವೆ. ಪೀಯಾಯಿ ಆಕಾದರದ ತಲೆ, ಅಗಾಧ ಗಾತ್ರದ ಬಾಯಿ ಮತ್ತು ಹಲ್ಲುಗಳು, ಕೂದಲುಗಳಿಲ್ಲದ ಶರೀರ, ಮೋಟು ಮೋಟಾದ ಕಾಲುಗಳು, 1,500 ಕೆಜಿ ತೂಕ ಹೊಂದಿರುವ ದೈತ್ಯ ಗಾತ್ರದ ಹಿಪ್ಪೋಗಳು ನೀರಿನಲ್ಲೇ ಹೆಚ್ಚು ಸಮಯ ಕಳೆಯುತ್ತವೆ. ಆದರೆ, ಇದು ಭೂಮಿ ಮತ್ತು ನೀರಿನಲ್ಲಿ ವಾಸಿಸುವುದರಿಂದ ಇದನ್ನು ಅರೆ-ಜಲವಾಸಿ ಎನ್ನಲಾಗುತ್ತದೆ. ನದಿಗಳು, ಸರೋವರಗಳು ಮತ್ತು ಮ್ಯಾಂಗ್ರೂವ್ ಚೌಗು ಪ್ರದೇಶಗಳಲ್ಲಿ ವಾಸಿಸುವ ಈ ಜೀವಿಗಳ ಸಂತತಿಯೂ ನಶಿಸಿಹೋಗುತ್ತಿವೆ. ಪ್ರಕೃತಿಯ ಅಪರೂಪದ ಪ್ರಾಣಿಯಾಗಿರುವ ಇದನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತಿದೆ. ಇಂದು ಇವುಗಳು ಅಳಿವಿನಂಚಿಗೆ ಸರಿಯುತ್ತಿರುವ ಕಾರಣ ಈ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಸಂತತಿಯನ್ನು ಸಂರಕ್ಷಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರವರಿ 15 ರಂದು ವಿಶ್ವ ಹಿಪ್ಪೋ ದಿನವನ್ನು ಆಚರಿಸಲಾಗುತ್ತದೆ.
ಆಫ್ರಿಕಾದಲ್ಲಿ ಹಿಪ್ಪೋಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2006 ರಲ್ಲಿ, ಅಂತಾರಾಷ್ಟ್ರೀಯ ಪ್ರಕೃತಿ ಸಂರಕ್ಷಣಾ ಒಕ್ಕೂಟ (IUCN) ಹಿಪ್ಪೋಗಳನ್ನು ದುರ್ಬಲ ಪ್ರಭೇದಗಳೆಂದು ಪಟ್ಟಿ ಮಾಡಿತು. ಹಿಂದಿನ ಇಪ್ಪತ್ತು ವರ್ಷಗಳಲ್ಲಿ ಅವುಗಳ ಸಂಖ್ಯೆಯು 20% ರಷ್ಟು ಕಡಿಮೆಯಾಗಿದೆ ಎನ್ನಲಾಗಿತ್ತು. ಬರಗಾಲವು ಆವಾಸಸ್ಥಾನ ನಷ್ಟಕ್ಕೆ ಕಾರಣವಾಗಿದೆ.
ಮಾಂಸ ಹಾಗೂ ದಂತಗಳಿಗಾಗಿ ಹಿಪ್ಪೋಗಳನ್ನು ಬೇಟೆಯಾಡಲಾಗುತ್ತಿದ್ದು, ಅವುಗಳ ಸಂರಕ್ಷಣೆಗಾಗಿ ಈ ದಿನವನ್ನು ಆಚರಿಸಲಾಯಿತು. ಈ ದಿನದಂದು, ಹಿಪ್ಪೋಗಳ ಸಂರಕ್ಷಣೆ ಹಾಗೂ ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸಂಸ್ಥೆಗಳು, ಅಧ್ಯಯನ ಸಂಸ್ಥೆಗಳು ಮತ್ತು ಹವಾಮಾನ ಸಂರಕ್ಷಣಾ ಗುಂಪುಗಳು ಜಾಗೃತಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ