World Travel and Tourism Festival 2025 : ಪ್ರಯಾಣದ ವೇಳೆ ಡಿಜಿಟಲ್ ಪೇಮೆಂಟ್ಗಳಲ್ಲಿ ಭಾರೀ ಬದಲಾವಣೆಯ ನಿರೀಕ್ಷೆ, 2 ವರ್ಷಕ್ಕೆ 3 ಪಟ್ಟು ಹೆಚ್ಚಳ
ಟಿವಿ9 ನೆಟ್‌ವರ್ಕ್ ಹಾಗೂ ರೆಡ್ ಹ್ಯಾಟ್ ಕಮ್ಯುನಿಕೇಷನ್ಸ್ ಜಂಟಿಯಾಗಿ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಆಯೋಜಿಸಿದ್ದು, ಇದೀಗ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದಂದು ಈ ಮೆಗಾ ಉತ್ಸವದಲ್ಲಿ ಪೇಯುನ ಸಹಾಯಕ ನಿರ್ದೇಶಕಿ ಪರಿಮಳ್ ರಾಜ್ ಡಿಜಿಟಲ್ ಪಾವತಿಗಳು ಭಾರತೀಯ ಪ್ರಯಾಣವನ್ನು ಹೇಗೆ ಪರಿವರ್ತಿಸುತ್ತಿವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿಯ ಐಕಾನಿಕ್ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟ್ರಾವೆಲ್ ಅಂಡ್ ಟೂರಿಸಂ ಫೆಸ್ಟಿವಲ್ 2025 ಮೂರು ದಿನಗಳ ಉತ್ಸವಕ್ಕೆ ನಿನ್ನೆ ಚಾಲನೆ ದೊರೆತಿದೆ. ಟಿವಿ9 ನೆಟ್‌ವರ್ಕ್ ಮತ್ತು ರೆಡ್ ಹ್ಯಾಟ್ ಕಮ್ಯುನಿಕೇಷನ್ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ಈ ಮೆಗಾ ಉತ್ಸವವು ಫೆಬ್ರವರಿ 16 ರವರೆಗೆ ನಡೆಯಲಿದೆ. ಮೊದಲ ದಿನದಂದು, ಪೇಯು ಅಸೋಸಿಯೇಟ್ ಡೈರೆಕ್ಟರ್ ಪರಿಮಳ್ ರಾಜ್, ಪ್ರವಾಸೋದ್ಯಮದಲ್ಲಿ ಡಿಜಿಟಲ್ ಪಾವತಿಗಳಲ್ಲಿ ಕ್ರಾಂತಿಯನ್ನುಂಟುಮಾಡುವಲ್ಲಿ ಕಂಪನಿಯ ಪ್ರಮುಖ ಪಾತ್ರದ ಬಗ್ಗೆ ಚರ್ಚಿಸಿದ್ದಾರೆ.
ಈ ವೇಳೆಯಲ್ಲಿ ಭಾರತೀಯ ಪ್ರಯಾಣಿಕರು ಡಿಜಿಟಲ್ ಪಾವತಿಯಂತಹ ವ್ಯವಸ್ಥೆಗೆ ಹೇಗೆ ಸಂಪೂರ್ಣವಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ವಿಮಾನ ಬುಕಿಂಗ್ ಯಿಂದ್ ಹಿಡಿದು ವಿವಿಧ ಅನುಭವಗಳನ್ನು ಪಡೆಯುವ ಪಾವತಿಯವರೆಗೆ ಎಲ್ಲವು ಇದರಲ್ಲೂ ಒಳಗೊಂಡಿದೆ. ಪ್ರಯಾಣದ ವೇಳೆ ಡಿಜಿಟಲ್ ಪಾವತಿ ಮಾಡಲು ಅವಕಾಶಗಳು ಹೆಚ್ಚಿವೆ ಎಂದು ಪೇಯು ಅಸೋಸಿಯೇಟ್ ಡೈರೆಕ್ಟರ್ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಅನುಗುಣವಾಗಿ, ಹಣ, ಮಾರ್ಗದರ್ಶನ ಹಾಗೂ ತಂತ್ರಜ್ಞಾನ ನೆರವಿನ ಮೂಲಕ ಪ್ರವಾಸದಲ್ಲಿ ನವೋದ್ಯಮಗಳನ್ನು ಬೆಂಬಲಿಸಲು ಪೇಯು ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸಿದ್ದು, ಲೇಜಿಪೇ ಮೂಲಕ “ಈಗ ಖರೀದಿಸಿ, ನಂತರ ಪಾವತಿಸಿ” ಸೇವೆಗಳ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಇದು ಪ್ರಯಾಣಿಕರಿಗೆ ಪಾವತಿಗಳನ್ನು ಸುಲಭ ಇಎಂಐಗಳಾಗಿ ವಿಭಜಿಸಲು ಅನುವು ಮಾಡಿಕೊಡುತ್ತದೆ, ಅದಲ್ಲದೆ, ರಜಾದಿನಗಳಲ್ಲಿ ಪ್ರವಾಸ ಕೈಗೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಡತನವನ್ನು ಮೆಟ್ಟಿನಿಂತು ಸಹೋದರಿಯರ ಸಾಧನೆ; ಅಕ್ಕ IAS, ತಂಗಿ IPS ಅಧಿಕಾರಿ
ಜಾಗತಿಕವಾಗಿ ವಹಿವಾಟುಗಳನ್ನು ಸುಗಮಗೊಳಿಸಲು ರಾಯಭಾರ ಕಚೇರಿಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುವುದು, ಗಡಿಯಾಚೆಗಿನ ಪಾವತಿಗಳಿಗೆ ಪೇಯುನ ವಿಸ್ತರಿಸಲಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿಗಳು ಕೇವಲ ಶೇಕಡಾ 34 ರಷ್ಟಿದ್ದರೂ, ಈ ವಲಯದಲ್ಲಿ ಡಿಜಿಟಲ್ ಪಾವತಿ ವಹಿವಾಟುಗಳು ಮುಂದಿನ ಎರಡು ವರ್ಷಗಳಲ್ಲಿ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




