ವಿಶ್ವ ಹಾಲು ದಿನ
Image Credit source: png magic
ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು, ವಿಟಮಿನ್ ಬಿ 12, ವಿಟಮಿನ್ ಡಿ ಮತ್ತು ಹೇರಳವಾದ ಪ್ರೋಟೀನ್‌ಗಳಂತಹ ಖನಿಜಗಳಿಂದ ತುಂಬಿದ ಹಾಲು (Milk) ಒಂದು ಸಂಪೂರ್ಣ ಆಹಾರವಾಗಿದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ದೊರೆಯುತ್ತದೆ. ಹೀಗೆ ಹಾಲಿನ ಆರೋಗ್ಯ ಪ್ರಯೋಜನಗಳು, ಹೈನುಗಾರಿಕೆ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳ ಅರಿವು ಮೂಡಿಸಲು ಮತ್ತು ಬೆಂಬಲವನ್ನು ಉತ್ತೇಜಿಸಲು ಪ್ರತಿವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿದುಕೊಳ್ಳಿ.
ವಿಶ್ವ ಹಾಲು ದಿನದ ಇತಿಹಾಸವೇನು?
ಡೈರಿ ಉದ್ಯಮವನ್ನು ಗುರುತಿಸಲು ಮತ್ತು ಹಾಲಿನ ಪ್ರಯೋಜನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಆಚರಣೆಯು 2001 ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ವಿಶ್ವ ಹಾಲು ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ಹಾಲು ದಿನದ ಮಹತ್ವವೇನು?
- ಹಾಲು ದಿನವನ್ನು ಆಚರಿಸುವ ಉದ್ದೇಶವು ಜನರಿಗೆ ಅದರ ಪ್ರಯೋಜನಗಳು ಮತ್ತು ಮಹತ್ವವನ್ನು ಅರ್ಥಮಾಡಿಸುವುದು ಹಾಗೂ ಹಾಲು ಸ್ಥಳೀಯ ಆರ್ಥಿಕತೆ ಮತ್ತು ಸಮುದಾಯಗಳಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಜನರಿಗೆ ತಿಳಿಸುವುದಾಗಿದೆ.
- ಹಾಗಾಗಿ ಜಗತ್ತಿನಲ್ಲಿ ಡೈರಿ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಅವುಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಒದಗಿಸುಲು ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಿಸಲಾಗುತ್ತದೆ.
- ಹಾಲಿನ ಪೌಷ್ಟಿಕಾಂಶದ ಮೌಲ್ಯ, ಡೈರಿ ಉದ್ಯಮದ ಸಾಮಾಜಿಕ-ಆರ್ಥಿಕ ಪ್ರಾಮುಖ್ಯತೆ ಮತ್ತು ಆಹಾರ ಭದ್ರತೆಯಲ್ಲಿ ಅದರ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಇದನ್ನೂ ಓದಿ: ಆಲೂಗಡ್ಡೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳೇನು?
ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳೇನು?
- ಪ್ರತಿದಿನ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದರಿಂದ ನಿಮಗೆ ಹೆಚ್ಚು ಸಮಯ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಇದು ಆಗಾಗ್ಗೆ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
- ರಾತ್ರಿ ಒಂದು ಲೋಟ ಬೆಚ್ಚಗಿನ ಹಾಲು ಕುಡಿಯುವುದು ಅತ್ಯಗತ್ಯ. ಇದು ದೇಹ ಮತ್ತು ಮನಸ್ಸನ್ನು ಶಮನಗೊಳಿಸುತ್ತದೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ
- ಹಾಲಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದೆ, ಇದು ಉತ್ತಮ ನಿದ್ರೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ರಾತ್ರಿಯಲ್ಲಿ ಬೇಗನೆ ನಿದ್ರಿಸಲು ಕಷ್ಟಪಡುತ್ತಿದ್ದರೆ, ಒಂದು ಗ್ಲಾಸ್ ಬೆಚ್ಚಗಿನ ಹಾಲು ಕುಡಿಯಿರಿ.
- ಹಾಲಿನಲ್ಲಿರುವ ಕ್ಯಾಲ್ಸಿಯಂ ಮೂಳೆಗಳನ್ನು ಬಲಪಡಿಸುತ್ತದೆ. ಬೆಚ್ಚಗಿನ ಹಾಲು ಕುಡಿಯುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚಾಗುತ್ತದೆ ಮತ್ತು ನಿಮ್ಮ ದೇಹವು ಮೊದಲಿಗಿಂತ ಬಲಶಾಲಿಯಾಗುತ್ತದೆ.
- ಮಲಗುವ ಮುನ್ನ ಪ್ರತಿದಿನ ರಾತ್ರಿ ಬೆಚ್ಚಗಿನ ಹಾಲು ಕುಡಿಯುವುದರಿಂದ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
- ಹಾಲಿನಲ್ಲಿ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುವ ಸಂಯುಕ್ತಗಳಿವೆ. ರಾತ್ರಿಯಲ್ಲಿ ಹಾಲು ಕುಡಿಯುವುದರಿಂದ ನಿಮ್ಮ ನರಮಂಡಲಕ್ಕೆ ವಿಶ್ರಾಂತಿ ಸಿಗುತ್ತದೆ. ಇದು ಆಯಾಸವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ, ಬೆಳಿಗ್ಗೆ ನಿಮ್ಮನ್ನು ಉಲ್ಲಾಸ ಮತ್ತು ಒತ್ತಡರಹಿತವಾಗಿ ಅನುಭವಿಸುವಂತೆ ಮಾಡುತ್ತದೆ.
- ರಾತ್ರಿ ಹಾಲು ಕುಡಿಯುವುದರಿಂದ ಬೆಳಿಗ್ಗೆ ಒತ್ತಡ ಮುಕ್ತವಾಗಿರಲು ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಅಮೈನೋ ಆಮ್ಲಗಳು ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ