World Music Day 2023: ಸಂಗೀತ ದಿನದ ಇತಿಹಾಸ, ಮಹತ್ವ, ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ!

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 21, 2023 | 7:03 AM

ವಿಶ್ವ ಸಂಗೀತ ದಿನದ ಇತಿಹಾಸದಿಂದ ಆಚರಣೆಗಳವರೆಗೆ, ಈ ವಿಶೇಷ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ.

World Music Day 2023: ಸಂಗೀತ ದಿನದ ಇತಿಹಾಸ, ಮಹತ್ವ, ಆಚರಣೆಗಳ ಬಗ್ಗೆ ಇಲ್ಲಿದೆ ಮಾಹಿತಿ!
ಸಾಂದರ್ಭಿಕ ಚಿತ್ರ
Follow us on

ಸಂತೋಷದ ಸಮಯವಾಗಲಿ ಅಥವಾ ಕಷ್ಟದ ಸಮಯವಾಗಲಿ, ಒಂಟಿತನದ ಇದ್ದಾಗಲಿ ಅಥವಾ ಸ್ನೇಹಿತರೊಂದಿಗೆ ಆನಂದಿಸುವ ಸಮಯವಾಗಲಿ, ಪ್ರಯಾಣಿಸುವಾಗ ಅಥವಾ ಮನೆಯಲ್ಲಿ ಕೆಲಸ ಮಾಡುವಾಗ, ಸಂಗೀತವು ನಮ್ಮ ಜೀವನದ ಪ್ರತಿಯೊಂದು ಭಾಗದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಗೀತ ನಮ್ಮ ಮನಸ್ಸು ಕದಡಿದಾಗ ಶಾಂತಗೊಳಿಸಲು ಅಥವಾ ಕೆಲವೊಮ್ಮೆ ಸಂತೋಷವನ್ನು ಯಾವುದೇ ಕಟ್ಟುಪಾಡಿಲ್ಲದೇ ಅನುಭವಿಸಲು ಮತ್ತು ನಮ್ಮ ಜೀವನವನ್ನು ನಾವೇ ಪ್ರಶಂಸಿಸಲು ನಮಗೆ ಸಹಾಯ ಮಾಡುತ್ತದೆ. ಯಾವುದೇ ಕಲಾ ಪ್ರಕಾರವಿರಲಿ, ಸಂಗೀತವು ಯಾವುದೇ ಅಡೆತಡೆ ಇದ್ದರು ಅದನ್ನು ಸರಿಪಡಿಸಿ ಹೆಚ್ಚು ಸುಂದರವಾಗಿಸುತ್ತದೆ. ಸಂಗೀತಕ್ಕಿರುವ ಶಕ್ತಿಯೇ ಅದು. ಹಾಗಾಗಿ ಪ್ರತಿ ವರ್ಷ, ಸಂಗೀತದ ಸೌಂದರ್ಯವನ್ನು ಆಲಿಸಲು ಮತ್ತು ಈ ಸುಂದರವಾದ ಕಲೆಯನ್ನು ನಿಯಮಿತವಾಗಿ ನಮಗೆ ಉಡುಗೊರೆಯಾಗಿ ನೀಡುವ ಸಂಗೀತಗಾರರನ್ನು ಗೌರವಿಸಲು ಪ್ರತಿ ವರ್ಷ ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸಂಗೀತ ದಿನವು ಪ್ರಪಂಚದಾದ್ಯಂತ ಒಂದು ದೊಡ್ಡ ಆಚರಣೆಯಾಗಿದ್ದು ವಿಶೇಷ ದಿನದ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ:

ಯಾವಾಗ ಆಚರಿಸಲಾಗುತ್ತದೆ?

ಪ್ರತಿ ವರ್ಷ ಜೂನ್ 21 ರಂದು ವಿಶ್ವ ಸಂಗೀತ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಸುಮಾರು 120 ದೇಶಗಳಲ್ಲಿ, ವಿಶ್ವ ಸಂಗೀತ ದಿನವನ್ನು ಸಂಗೀತ ಕಚೇರಿಗಳು, ಸಂಗೀತ ಪ್ರದರ್ಶನಗಳು ಮತ್ತು ಇತರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.

ವಿಶ್ವ ಸಂಗೀತ ದಿನದ ಇತಿಹಾಸ:

1982 ರಲ್ಲಿ ಫ್ರಾನ್ಸ್ನಲ್ಲಿ ಪ್ರಾರಂಭವಾದ ಫೆಟೆ ಡಿ ಲಾ ಮ್ಯೂಸಿಕ್ ಎಂಬ ಸಂಗೀತ ಉತ್ಸವದಿಂದಾಗಿ ವಿಶ್ವ ಸಂಗೀತ ದಿನವು ಅಸ್ತಿತ್ವಕ್ಕೆ ಬಂದದ್ದು ಎಂದು ನಂಬಲಾಗಿದೆ. 1981ರಲ್ಲಿ ಫ್ರೆಂಚ್ ಕಲಾ ಮತ್ತು ಸಂಸ್ಕೃತಿ ಸಚಿವ ಶ್ರೀ ಜ್ಯಾಕ್ ಲ್ಯಾಂಗ್ ಮತ್ತು ಪ್ರಸಿದ್ಧ ಫ್ರೆಂಚ್ ಸಂಯೋಜಕ ಮಾರಿಸ್ ಫ್ಲೆರೆಟ್ ಸಂಗೀತದ ಮಹತ್ವದ ಬಗ್ಗೆ ತಿಳಿಸಲು ಒಂದು ದಿನವನ್ನು ಆಯ್ಕೆ ಮಾಡಿಕೊಂಡರು. ಈಗ ಆ ದಿನದಂದೇ ಸಂಗೀತ ದಿನವನ್ನು ಆಚರಿಸಲಾಗುತ್ತಿದೆ. ಮತ್ತೊಂದು ಸಿದ್ಧಾಂತದ ಪ್ರಕಾರ, 1976 ರಲ್ಲಿ, ಜೋಯಲ್ ಕೋಹೆನ್ ಬೇಸಿಗೆಯ ಅಯನ ಸಂಕ್ರಾಂತಿಯ ಪ್ರಾರಂಭವನ್ನು ಗುರುತಿಸಲು ಇಡೀ ರಾತ್ರಿ ಸಂಗೀತ ಆಚರಣೆಯ ಕಲ್ಪನೆಯನ್ನು ಪ್ರಸ್ತಾಪಿಸಿದರು, ಮತ್ತು ಅಂದಿನಿಂದ, ವಿಶ್ವ ಸಂಗೀತ ದಿನವನ್ನು ಜೂನ್ 21 ರಂದು ಆಚರಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ:World Refugee Day 2023: ವಿಶ್ವ ನಿರಾಶ್ರಿತರ ದಿನದ ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

ವಿಶ್ವ ಸಂಗೀತ ದಿನದ ಪ್ರಾಮುಖ್ಯತೆ:

ವಿಶ್ವ ಸಂಗೀತ ದಿನವು ಸಂಗೀತವನ್ನು ಒಂದು ಕಲಾ ಪ್ರಕಾರವಾಗಿ ಯುವ ಪೀಳಿಗೆಗೆ ಹೆಚ್ಚು ಉಪಯುಕ್ತವಾಗಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಸಂಗೀತದ ವಿವಿಧ ಪ್ರಕಾರಗಳನ್ನು ಗುರುತಿಸಿ ಅದನ್ನು ಕರಗತ ಮಾಡಿಕೊಳ್ಳಲು ಜನರನ್ನು ಒತ್ತಾಯಿಸಲು ಮತ್ತು ಹೊಸ ತಲೆಮಾರುಗಳು ನೀಡುವ ಕಲೆಯನ್ನು ಸ್ವಾಗತಿಸಲು ಸಹ ಈ ದಿನವನ್ನು ಆಚರಿಸಲಾಗುತ್ತದೆ.

ಆಚರಣೆ ಹೇಗೆ?

ಸಂಗೀತಗಾರರು ಮತ್ತು ಗಾಯಕರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಪ್ರೇಕ್ಷಕರಿಗೆ ಸಂಗೀತ ಪ್ರದರ್ಶನ ನೀಡುವ ಮೂಲಕ ಸಂಗೀತಕ್ಕೆ ಗೌರವ ಸಲ್ಲಿಸಿ ಆ ಮೂಲಕ ಈ ದಿನವನ್ನು ಆಚರಿಸುತ್ತಾರೆ. ಜೊತೆಗೆ ಹಬ್ಬದ ರೀತಿಯಲ್ಲಿ ಪ್ರಪಂಚದಾದ್ಯಂತ ಸಂಗೀತ ಕಚೇರಿಗಳು, ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: