ಫೆಬ್ರವರಿ 27 ರಂದು ವಿಶ್ವ ಎನ್ ಜಿಒ ದಿನ : ಬಡಜನರ ಕಷ್ಟಕ್ಕೆ ಸ್ಪಂದಿಸುವ ಎನ್ ಜಿಒದ ನಿಸ್ವಾರ್ಥ ಸೇವೆಗೊಂದು ಸಲಾಂ

| Updated By: ಅಕ್ಷತಾ ವರ್ಕಾಡಿ

Updated on: Feb 24, 2024 | 6:36 PM

ಅಭಿವೃದ್ಧಿಯನ್ನು ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳಲ್ಲಿ ಪ್ರಗತಿ ಯೆನ್ನುವುದು ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸರ್ಕಾರೇತರ ಸಂಸ್ಥೆಗಳ ಪಾತ್ರವು ಬಹುದೊಡ್ಡದಿದೆ. ನಿರ್ಗತಿಕರಿಗೆ, ಕೈಯಲಾಗದವರಿಗೆ ಸಹಾಯ ಹಸ್ತ ನೀಡುವ ಮೂಲಕ ಅವರಿಗೊಂದು ಬದುಕು ಕಟ್ಟಿಕೊಡುವ ಕೆಲಸವನ್ನು ಎನ್ ಜಿಒಗಳು ಮಾಡುತ್ತವೆ. ಎನ್‌ಜಿಒಗಳ ಬಗ್ಗೆ ಅಗತ್ಯವಿರುವವರಿಗೆ ಅರಿವನ್ನು ಮೂಡಿಸುವುದು ಹಾಗೂ ಎನ್‌ಜಿಒಗಳ ಕೆಲಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಫೆಬ್ರವರಿ 27 ರಂದು ವಿಶ್ವ ಎನ್ ಜಿ ಒ ದಿನವನ್ನು ಆಚರಿಸಲಾಗುತ್ತದೆ.

ಫೆಬ್ರವರಿ 27 ರಂದು ವಿಶ್ವ ಎನ್ ಜಿಒ ದಿನ : ಬಡಜನರ ಕಷ್ಟಕ್ಕೆ ಸ್ಪಂದಿಸುವ ಎನ್ ಜಿಒದ ನಿಸ್ವಾರ್ಥ ಸೇವೆಗೊಂದು ಸಲಾಂ
World NGO Day
Follow us on

ಎನ್ ಜಿ ಒ ಗಳು ಸರ್ಕಾರೇತರ ಸಂಸ್ಥೆಯಾಗಿದ್ದು, ಇದು ಸರ್ಕಾರ ಅಥವಾ ಉದ್ಯಮಿಗಳ ಲಾಭಕ್ಕಾಗಿ ಕೆಲಸ ಮಾಡುವುದಿಲ್ಲ. ಸಾರ್ವಜನಿಕ ಸೇವೆಯನ್ನು ಮಾಡುವ ಮೂಲಕ ಬಡವರು ಮತ್ತು ನಿರ್ಗತಿಕರ ನೋವು ಮತ್ತು ಸಂಕಟಗಳನ್ನು ಅರ್ಥಮಾಡಿಕೊಳ್ಳುವುದು, ಅಗತ್ಯವಿರುವವರಿಗೆ ಸಹಾಯ ಮಾಡುವುದು, ನಿರ್ಗತಿಕರಿಗೆ ಆಸರೆಯಾಗುವ ಮೂಲಕ ಸಮಾಜದಲ್ಲಿನ ಜನರ ಕಲ್ಯಾಣಕ್ಕೆ ಕಾರಣವಾಗಿದೆ. ಇಂತಹ ಎನ್ ಜಿ ಒ ನಿಸ್ವಾರ್ಥ ಸೇವೆಗಳನ್ನು ಜನರಿಗೆ ತಿಳಿಸುವುದು ಹಾಗೂ ಎನ್ ಜಿಒ ಗಳ ಕೆಲಸವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿಶ್ವ ಎನ್ ಜಿ ಒ ದಿನವನ್ನು ಪ್ರಪಂಚದಾದಂತ್ಯ ಆಚರಿಸಲಾಗುತ್ತದೆ.

ವಿಶ್ವ ಎನ್‌ಜಿಒ ದಿನದ ಇತಿಹಾಸ:

ವಿಶ್ವ ಎನ್‌ಜಿಒ ದಿನವನ್ನು ಪ್ರತಿ ವರ್ಷ ಫೆಬ್ರವರಿ 27 ರಂದು ಆಚರಿಸಲಾಗುತ್ತದೆ. 2010 ರಲ್ಲಿ ಬಾಲ್ಟಿಕ್ ಪೂರ್ವ ರಾಜ್ಯಗಳಲ್ಲಿ ಬಾಲ್ಟಿಕ್ ಸಮುದ್ರದ NGO ಫೋರಮ್‌ನ ಪ್ರತಿನಿಧಿಯಿಂದ NGO ದಿನವನ್ನು ಘೋಷಣೆ ಮಾಡಲಾಯಿತು. ನಂತರದಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಫೆಬ್ರವರಿ ಮೊದಲ ವಾರವನ್ನು ವಿಶ್ವ ಎನ್‌ಜಿಒ ವೀಕ್ ಎಂದು ಘೋಷಿಸಲಾಯಿತು. ಫೆಬ್ರವರಿ 27, 2014 ರಂದು ಮೊದಲ ಬಾರಿಗೆ ವಿಶ್ವ ಎನ್‌ಜಿಒ ದಿನವನ್ನು ಆಚರಣೆ ಮಾಡಲಾಯಿತು.

ಇದನ್ನೂ ಓದಿ: ಕಾಫಿ ವರ್ಸಸ್ ಟೀ; ನಿಮ್ಮ ಚರ್ಮಕ್ಕೆ ಯಾವುದರ ಸೇವನೆ ಒಳ್ಳೆಯದು?

ವಿಶ್ವ ಎನ್ ಜಿಒ ದಿನದ ಮಹತ್ವ:

ಸರ್ಕಾರೇತರ ಸಂಸ್ಥೆಗಳಿಗೆ ತಮ್ಮ ಗುರಿಗಳನ್ನು ಪೂರೈಸಲು ಆರೋಗ್ಯಕರ ಸಾರ್ವಜನಿಕ ಸಂಪರ್ಕಗಳು ಬೇಕಾಗುತ್ತವೆ ಮತ್ತು ಹಣವನ್ನು ಸಂಗ್ರಹಿಸಲು ಮತ್ತು ಸರ್ಕಾರಗಳೊಂದಿಗೆ ವ್ಯವಹರಿಸಲು ಅತ್ಯಾಧುನಿಕ ಸಾರ್ವಜನಿಕ ಸಂಪರ್ಕ ಅಭಿಯಾನಗಳನ್ನು ಬಳಸುವ ಮೂಲಕ ಡಿಕ್ಕಿ ದೆಸೆಯಿಲ್ಲದವರಿಗೆ ಆಧಾರ ಸ್ತಂಭವಾಗಿ ನಿಲ್ಲುತ್ತದೆ. ಎಂತಹ ಸರ್ಕಾರೇತ್ತರ ಸಂಸ್ಥೆಗಳ ಕೆಲಸವನ್ನು ಹಾಗೂ ಕೊಡುಗೆಯನ್ನು ಶ್ಲಾಘಿಸುವ ಮೂಲಕ ವಿಶ್ವ ಎನ್ ಜಿ ಒ ದಿನವನ್ನು ಆಚರಿಸಲಾಗುತ್ತದೆ. ಸರ್ಕಾರ ಮತ್ತು ಸಾರ್ವಜನಿಕರ ನಡುವಿನ ಕೊಂಡಿಯಾಗಿ ಎನ್‌ಜಿಒ ಕೆಲಸ ಮಾಡುತ್ತದೆ. ಎನ್ ಜಿ ಒಗಳಲ್ಲಿ ಹೆಚ್ಚು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮತ್ತು ಈ ಸಾರ್ವಜನಿಕ ಸೇವೆ ಸಂಸ್ಥೆಗಳಲ್ಲಿ ಜನರನ್ನು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದಾಗಿದೆ. ಈ ದಿನದಂದು ಎಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಬಡಜನರಿಗೆ ಸಹಾಯ ಮಾಡಲು ನಿಧಿ ಸಂಗ್ರಹವನ್ನು ಮಾಡಲಾಗುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ