Mulberry Benefits: ಕೂದಲು ಸೊಂಪಾಗಿ ಬೆಳೆಯಲು ಹಿಪ್ಪು ನೇರಳೆ ಬಳಸಿ
Hair Growth Tips: ಮಲ್ಬೆರಿಯನ್ನು ವೈಜ್ಞಾನಿಕವಾಗಿ ಮೋರಸ್ ಆಲ್ಬಾ ಎಂದು ಕರೆಯಲಾಗುತ್ತದೆ. ಇದನ್ನು ಸ್ಥಳೀಯವಾಗಿ ಹಿಪ್ಪು ನೇರಳೆ, ಅಂಬಾರಲ ಹಣ್ಣು ಎಂದು ಕೂಡ ಕರೆಯುತ್ತಾರೆ. ಇದನ್ನು ರೇಷ್ಮೆ ಗಿಡ ಎಂದು ಕೂಡ ಕರೆಯಲಾಗುತ್ತದೆ. ಮಲ್ಬೆರಿ ಹಣ್ಣು ಮೊರೇಸಿ ಕುಟುಂಬಕ್ಕೆ ಸೇರಿದೆ. ಇದು ಔಷಧಿಗಳು ಮತ್ತು ಪರಿಹಾರಗಳ ಮೂಲವಾಗಿ ಬಳಸಲಾಗುವ ಪ್ರಮುಖ ಗಿಡಮೂಲಿಕೆ ಸಸ್ಯಗಳಲ್ಲಿ ಒಂದಾಗಿದೆ. ಕೂದಲಿನ ಬೆಳವಣಿಗೆಗೆ ಮಲ್ಬೆರಿ ಬಹಳ ಪ್ರಯೋಜನಕಾರಿಯಾಗಿದೆ.
ಮಲ್ಬೆರಿ ಹಣ್ಣು (Mulberry) ಅಥವಾ ಹಿಪ್ಪು ನೇರಳೆ ಹೆಚ್ಚಾಗಿ ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಬೆಳೆಯುತ್ತದೆ. ರೇಷ್ಮೆ ಬೆಳೆಯುವ ಸ್ಥಳಗಳಲ್ಲೂ ರೇಷ್ಮೆ ಹುಳಗಳಿಗೆ ಆಹಾರವಾಗಿ ಈ ಗಿಡಗಳನ್ನು ಬೆಳೆಯಲಾಗುತ್ತದೆ. ಭಾರತ, ಚೀನಾ, ಜಪಾನ್, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ದಕ್ಷಿಣ ಯುರೋಪ್‌ನಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಮಲ್ಬೆರಿ ಹಣ್ಣನ್ನು ಬೆಳೆಯಲಾಗುತ್ತದೆ. ಮಲ್ಬರಿ ಎಲೆಗಳು ರೇಷ್ಮೆ ಹುಳುಗಳಿಗೆ ಆಹಾರದ ಏಕೈಕ ಮೂಲವಾಗಿದೆ. ಈ ಎಲೆಗಳು ಔಷಧೀಯ, ಸೌಂದರ್ಯವರ್ಧಕಗಳು ಮತ್ತು ಆಹಾರ ಉದ್ಯಮಗಳಲ್ಲಿ ಬಹಳ ಉಪಯುಕ್ತವಾಗಿವೆ.
ಮಲ್ಬೆರಿ ಅಥವಾ ಹಿಪ್ಪು ನೇರಳೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ ಮತ್ತು ಪ್ರಮುಖ ಖನಿಜಗಳಾದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೋಡಿಯಂ ಅಂಶಗಳು ಅಧಿಕವಾಗಿವೆ. ಮಲ್ಬೆರಿ ಹಣ್ಣುಗಳಲ್ಲಿ ವಿಟಮಿನ್ ಇ ಮತ್ತು ವಿವಿಧ ರೀತಿಯ ಕ್ಯಾರೊಟಿನಾಯ್ಡ್ ಅಂಶಗಳು ಇರುತ್ತವೆ. ಹಿಪ್ಪು ನೇರಳೆ ಬೇರಿನ ತೊಗಟೆಯ ಸಾರವು ಸೋಂಕನ್ನು ತಡೆಗಟ್ಟುತ್ತದೆ ಮತ್ತು ನೆತ್ತಿಯ ರಂಧ್ರಗಳನ್ನು ತಡೆಯುತ್ತದೆ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.
ಇದನ್ನೂ ಓದಿ: ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವ 8 ದೇಸಿ ಗಿಡಮೂಲಿಕೆಗಳಿವು
ಮಲ್ಬೆರಿಯಲ್ಲಿರುವ ಕ್ಯಾರೊಟಿನಾಯ್ಡ್ ಅಂಶಗಳು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಕೂದಲು ಸೊಂಪಾಗಿ ಬೆಳೆಯಲು ಮಲ್ಬೆರಿ ಹೇರ್ ಮಾಸ್ಕ್ ಕೂಡ ಬಳಸಬಹುದು. ಒಣಗಿದ ಮಲ್ಬೆರಿ ಎಲೆಗಳನ್ನು ನಯವಾದ ಪೇಸ್ಟ್ ಆಗಿ ಮಿಶ್ರಣ ಮಾಡಿ. ಇದನ್ನು ಮೊಸರು ಅಥವಾ ತೆಂಗಿನ ಹಾಲು ಮುಂತಾದ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಮತ್ತು 30 ರಿಂದ 60 ನಿಮಿಷಗಳ ಕಾಲ ಬಿಡಿ. ಅದನ್ನು ನೀರಿನಿಂದ ತೊಳೆಯಿರಿ.
ಇದನ್ನೂ ಓದಿ: Hair Care: ನಟಿ ಸಾಯಿ ಪಲ್ಲವಿಯ ಉದ್ದ ಕೂದಲಿನ ರಹಸ್ಯವೇನು?
ಸ್ವಲ್ಪ ಹಿಪ್ಪು ನೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ. ಹಿಪ್ಪುನೇರಳೆ ಹೇರ್ ವಾಶ್ ತಯಾರಿಸಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಇದನ್ನು ಸೋಸಿ, ಶಾಂಪೂವಿನೊಂದಿಗೆ ನಿಮ್ಮ ಕೂದಲನ್ನು ತೊಳೆದ ನಂತರ ಕಂಡೀಷನರ್ ರೀತಿ ಬಳಸಿ. ಮಲ್ಬೆರಿ ಮತ್ತು ಅಲೋವೆರಾ ಹೇರ್ ಜೆಲ್ಮಲ್ಬೆರಿ ಮತ್ತು ಅಲೋವೆರಾ ಹೇರ್ ಜೆಲ್ಮಲ್ಬೆರಿಗಳನ್ನು ಅಲೋವೆರಾ ಜೆಲ್ನೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. 30ರಿಂದ 40 ನಿಮಿಷಗಳ ನಂತರ ಅದನ್ನು ತೊಳೆಯಿರಿ.
ಹಿಪ್ಪು ನೇರಳೆಯನ್ನು ಕೂದಲಿಗೆ ಬಳಸಿದ ನಂತರ ಏನಾದರೂ ಸಮಸ್ಯೆ ಎದುರಾದರೆ ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಕೆಲವರು ಮಲ್ಬೆರಿಗಳಲ್ಲಿನ ಕೆಲವು ಸಂಯುಕ್ತಗಳಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಬಹುದು. ಇದು ನೆತ್ತಿಯ ಕಿರಿಕಿರಿ ಅಥವಾ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ