Health Tips: ಮಲ್ಬೆರಿ ಹಣ್ಣನ್ನು ಯಾರು ಸೇವಿಸಬಾರದು?
ಹಿಪ್ಪುನೇರಳೆ ತಿನ್ನುವವರು ಮಿತ ಪ್ರಮಾಣದಲ್ಲಿ ಸೇವಿಸಿದರೆ ಪರವಾಗಿಲ್ಲ. ಆದರೆ, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ವೈದ್ಯರು ಸೂಚಿಸಿದರೆ ಮಾತ್ರ ಈ ಅವಧಿಯಲ್ಲಿ ಮಲ್ಬೆರಿ ಹಣ್ಣನ್ನು ಸೇವಿಸಬೇಕು.
ಹಿಪ್ಪುನೇರಳೆ ಹಣ್ಣು ಅಥವಾ ಮಲ್ಬೆರಿ ಅನೇಕ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಹಣ್ಣಾಗಿದೆ. ಆದರೆ, ಇದನ್ನು ಸೇವಿಸುವುದರಿಂದ ಕೆಲವರಿಗೆ ಕೆಲವು ರೀತಿಯ ಅಡ್ಡ ಪರಿಣಾಮಗಳು ಕೂಡ ಉಂಟಾಗುತ್ತವೆ. ಹಿಪ್ಪುನೇರಳೆ ಹಣ್ಣಿನ ಸೇವನೆಯಿಂದ ರಕ್ತದ ಗ್ಲೂಕೋಸ್ ಮಟ್ಟ ಕಡಿಮೆಯಾಗುತ್ತದೆ. ಇದು ರಕ್ತದ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಕಡಿಮೆ ರಕ್ತದ ಗ್ಲೂಕೋಸ್ ಮಟ್ಟದಿಂದ ಬಳಲುತ್ತಿರುವ ಜನರು ಹಿಪ್ಪು ನೇರಳೆಯನ್ನು ಸೇವಿಸುವುದು ಅಪಾಯಕಾರಿ. ಈ ಹಣ್ಣಿನ ಸೇವನೆ ಮಿತವಾಗಿರಬೇಕು.
ಹಿಪ್ಪುನೇರಳೆ ತಿನ್ನುವವರು ಮಿತ ಪ್ರಮಾಣದಲ್ಲಿ ಸೇವಿಸಿದರೆ ಪರವಾಗಿಲ್ಲ. ಆದರೆ, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿಮ್ಮ ಆಯುರ್ವೇದ ವೈದ್ಯರು ಸೂಚಿಸಿದರೆ ಮಾತ್ರ ಈ ಅವಧಿಯಲ್ಲಿ ಮಲ್ಬೆರಿ ಹಣ್ಣನ್ನು ಸೇವಿಸಬೇಕು.
ಮಲ್ಬೆರಿ ಅಥವಾ ಹಿಪ್ಪು ನೇರಳೆ ಮೊರೇಸಿ ಕುಟುಂಬಕ್ಕೆ ಸೇರಿದೆ. ಇದು ಔಷಧಿಗಳು ಮತ್ತು ಪರಿಹಾರಗಳ ಮೂಲವಾಗಿ ಬಳಸಲಾಗುವ ಪ್ರಮುಖ ಗಿಡಮೂಲಿಕೆ ಸಸ್ಯಗಳಲ್ಲಿ ಒಂದಾಗಿದೆ. ವಿವಿಧ ಜಾತಿಗಳು ಮೋರಸ್ ಕುಲದಲ್ಲಿ ಕಂಡುಬರುತ್ತವೆ. ಇತರೆ ಕೆಲವು ಪ್ರಮುಖ ಮಲ್ಬೆರಿ ಜಾತಿಗಳೆಂದರೆ ಸ್ಥಳೀಯ ಕೆಂಪು ಮಲ್ಬೆರಿ, ಪೂರ್ವ ಏಷ್ಯಾದ ಬಿಳಿ ಮಲ್ಬೆರಿ, ನೈಋತ್ಯ ಏಷ್ಯಾದ ಕಪ್ಪು ಮಲ್ಬೆರಿ. ಭಾರತ, ಚೀನಾ, ಜಪಾನ್, ಉತ್ತರ ಆಫ್ರಿಕಾ, ಅರೇಬಿಯಾ ಮತ್ತು ದಕ್ಷಿಣ ಯುರೋಪ್‌ನಂತಹ ಸಮಶೀತೋಷ್ಣ ಪ್ರದೇಶಗಳಲ್ಲಿ ಮಲ್ಬೆರಿ ಹಣ್ಣು ಬೆಳೆಯುತ್ತದೆ.
ಇದನ್ನೂ ಓದಿ: ಮೂಳೆಗಳು ಗಟ್ಟಿಯಾಗಿರಲು ನಿಮ್ಮ ಡಯೆಟ್ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಲು ಮರೆಯದಿರಿ
ಮಲ್ಬೆರಿ ಗಿಡದ ಎಲೆಗಳು ರೇಷ್ಮೆ ಹುಳುಗಳಿಗೆ ಆಹಾರದ ಏಕೈಕ ಮೂಲವಾಗಿದೆ. ಹೀಗಾಗಿ, ಇದನ್ನು ರೇಷ್ಮೆ ಸೊಪ್ಪು ಎಂದು ಕೂಡ ಹಳ್ಳಿಗಳಲ್ಲಿ ಕರೆಯುತ್ತಾರೆ. ಮಲ್ಬೆರಿ ಎಲೆಗಳು, ಗಿಡದ ತೊಗಟೆ, ಹಣ್ಣುಗಳು ಔಷಧೀಯ ಮೂಲವಾಗಿದೆ. ಮಲ್ಬೆರಿ ಅಸಹಜ ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ನಿಧಾನಗೊಳಿಸುತ್ತದೆ. ಮಲ್ಬೆರಿಯ ವಿವಿಧ ಭಾಗಗಳ ಸಾರವು ಹಲವಾರು ಗುಣಲಕ್ಷಣಗಳನ್ನು ಹೊಂದಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.
ಮಲ್ಬೆರಿ ಜ್ವರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕೆಲವು ವಿಧದ ಪರಾವಲಂಬಿ ಹುಳುಗಳನ್ನು ನಾಶಮಾಡಲು ಸಹಾಯಕವಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಿಪ್ಪು ನೇರಳೆಯಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿದೆ. ಕಬ್ಬಿಣದ ಉಪಸ್ಥಿತಿಯು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಹಿಪ್ಪು ನೇರಳೆ ನಮ್ಮ ಚರ್ಮ ಮತ್ತು ಕೂದಲ ಆರೋಗ್ಯಕ್ಕೂ ಒಳ್ಳೆಯದು. ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಮಲ್ಬೆರಿ ಹೊಂದಿದೆ.
ಇದನ್ನೂ ಓದಿ: ಆಲ್ಝೈಮರ್ ಕಾಯಿಲೆ ನಿಯಂತ್ರಣಕ್ಕೆ ಬ್ಲೂಬೆರಿ ಹಣ್ಣು ಹೇಗೆ ಪ್ರಯೋಜನಕಾರಿ?
ಮಲ್ಬೆರಿ ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಅವುಗಳು ಹೆಚ್ಚಿನ ಆಹಾರದ ಫೈಬರ್ ಅಂಶವನ್ನು ಹೊಂದಿರುತ್ತವೆ. ವಿಟಮಿನ್ ಎ, ವಿಟಮಿನ್ ಸಿ, ಆಂಥೋಸಯಾನಿನ್‌ಗಳು ಮತ್ತು ಇತರ ಹಲವಾರು ಪಾಲಿಫಿನಾಲಿಕ್ ಸಂಯುಕ್ತಗಳಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಿಪ್ಪುನೇರಳೆ ಎಲೆಗಳ ಸಾರವು ಗ್ಲೂಕೋಸ್‌ನ ಚಯಾಪಚಯ ಕ್ರಿಯೆಯನ್ನು ವೇಗವರ್ಧಿಸುವಲ್ಲಿ ಪಾತ್ರವನ್ನು ವಹಿಸುತ್ತದೆ. ಹಿಪ್ಪುನೇರಳೆ ಎಲೆಯ ರಸವು ಗಂಟಲಿನ ಸೋಂಕುಗಳು, ಉರಿಯೂತ ಮತ್ತು ಕಿರಿಕಿರಿಯ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ