World Photography Day 2021: ವಿಶ್ವ ಫೋಟೋಗ್ರಫಿ ದಿನದ ಇತಿಹಾಸ, ಮಹತ್ವ ತಿಳಿಯಿರಿ

ವಿಶ್ವ ಫೋಟೋಗ್ರಫಿ ದಿನ 2021: ಪ್ರಸ್ತುತದಲ್ಲಿ ಫೋಟೋಗ್ರಫಿ ಕೇವಲ ಹವ್ಯಾಸ ಮಾತ್ರವಲ್ಲ, ಅದೆಷ್ಟೋ ಜನರಿಗೆ ಉದ್ಯೋಗದ ಕ್ಷೇತ್ರವಾಗಿದೆ.

World Photography Day 2021: ವಿಶ್ವ ಫೋಟೋಗ್ರಫಿ ದಿನದ ಇತಿಹಾಸ, ಮಹತ್ವ ತಿಳಿಯಿರಿ
ವಿಶ್ವ ಫೋಟೋಗ್ರಫಿ ದಿನ
Follow us
TV9 Web
| Updated By: shruti hegde

Updated on: Aug 19, 2021 | 9:52 AM

ಪ್ರತೀ ವರ್ಷ ಆಗಸ್ಟ್ 19ನೇ ತಾರೀಕಿನಂದು ವಿಶ್ವ ಫೋಟೋಗ್ರಫಿ ದಿನವನ್ನು (World Photography Day) ಆಚರಿಸಲಾಗುತ್ತದೆ. ಫೊಟೋಗ್ರಫಿ ಒಂದು ಕಲೆ. ಹಿಂದಿನ ಇತಿಹಾಸದ ಸಾಕ್ಷಿ ಫೋಟೋ. ಯಾವುದೇ ಒಂದು ಘಟನೆಯನ್ನು ಸಂಪೂರ್ಣವಾಗಿ ವಿವರಿಸುವ ಸಾಧ್ಯತೆ ಒಂದು ಪೋಟೋವಿನಲ್ಲಿದೆ. ಅದೆಷ್ಟೋ ವಿಷಯಗಳಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಹಳೆಯದನ್ನು ಪ್ರಸ್ತುತದಲ್ಲಿ ನೆನಪಿಸಿಕೊಳ್ಳಲು ಒಂದು ಆಧಾರವಾಗಿ ಫೋಟೋ ಇದೆ. ಕಲೆ, ಇತಿಹಾಸ ಮತ್ತು ವಿಜ್ಞಾನವನ್ನು ತಿಳಿಸಲು ವಿಶ್ವದಾದ್ಯಂತ ವಿಶ್ಯ ಫೋಟೋಗ್ರಫಿ ದಿನವನ್ನು ಆಚರಿಸಲಾಗುತ್ತದೆ.

ಅಭಿವೃದ್ಧಿ ಮತ್ತು ಹೊಸ ಹೊಸ ಅಳವಡಿಕೆಯ ಮೂಲಕ ಫೋಟೋಗ್ರಫಿ ತಂತ್ರಜ್ಞಾದಲ್ಲಿ ಮುನ್ನುಗ್ಗುತ್ತಿದೆ. ದಿನ ಸಾಗುತ್ತಿದ್ದಂತೆಯೇ ಆ್ಯಂಗಲ್, ಕ್ವಾಲಿಟಿ, ಜತೆಗೆ ಸ್ಟೈಲ್​ನಲ್ಲಿ ಅಭಿವೈದ್ದಿ ಹೊಂದುತ್ತಲೇ ಇದೆ. ಪ್ರಸ್ತುತದಲ್ಲಿ ಫೋಟೋಗ್ರಫಿ ಕೇವಲ ಹವ್ಯಾಸ ಮಾತ್ರವಲ್ಲ, ಅದೆಷ್ಟೋ ಜನರಿಗೆ ಉದ್ಯೋಗದ ಕ್ಷೇತ್ರವಾಗಿದೆ.

ವಿಶ್ವ ಫೋಟೋಗ್ರಫಿ ದಿನದ ಇತಿಹಾಸ ಮೊದಲಿಗೆ ಲೂಯಿಸ್ ಡಾಗರೆ ಡಾಗುರೋಟೈಪ್ಅನ್ನು ಆವಿಷ್ಕಾರಗೊಳಿಸಿದನು. ಇದರಿಂದ ಫೋಟೋಗ್ರಫಿ ಪ್ರಕ್ರಿಯೆ ಆರಂಭಗೊಂಡಿತು. ಅಂದಿನಿಂದ ವಿಶ್ವದಾದ್ಯಂತ ಫೋಟೋಗ್ರಫಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಫ್ರೆಂಚ್ ಸರ್ಕಾರವು 1839 ಆಗಸ್ಟ್ 9ರಂದು ಹೊಸ ಆವಿಷ್ಕಾರವಾದ ಫೋಟೋಗ್ರಫಿ ದಿನಕ್ಕೆ ಪ್ರೋತ್ಸಾಹ ನೀಡಿತು. ಆಗಿನಿಂದ ಪ್ರತೀ ವರ್ಷ ಆಗಸ್ಟ್ 19ರಂದು ವಿಶ್ಯ ಫೋಟೋಗ್ರಫಿ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮಹತ್ವ ಫೋಟೋಗ್ರಫಿ ಹವ್ಯಾಸವಾಗಿ ಮಾರ್ಪಟ್ಟಿತು. ಈಗೆಲ್ಲಾ ಮನೆಯಲ್ಲೊಂದು ಕ್ಯಾಮರಾ ಇದ್ದೇ ಇದೆ. ಪ್ರಸ್ತುತದಲ್ಲಿ ಅದೆಷ್ಟೋ ಜನರ ಪಾಲಿಗೆ ಉದ್ಯೋಗ ಕ್ಷೇತ್ರವಾಗಿದೆ. ವ್ಯಕ್ತಿಯ ಪ್ರತಿಭೆ, ಕೌಶಲ್ಯವನ್ನಾಧರಿಸಿ ಈ ಉದ್ಯೋಗ ಬೆಳೆಯುತ್ತಾ ಸಾಗಿತು. ತಮ್ಮ ಗ್ರಹಿಕೆ ಮತ್ತು ಸೃಜನಶೀಲತೆ ಫೋಟೋಗ್ರಫಿಯಲ್ಲಿ ತುಂಬಾ ಮುಖ್ಯ. ಹಾಗಿರುವಾಗ ಇಂದಿನ ದಿನದ ವಿಶೇಷವಾಗಿ ನೀವು ಕ್ಲಿಕ್ಕಿಸಿದ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಈ ದಿನವನ್ನು ಆಚರಿಸಿ. ಜತೆಗೆ ಇವತ್ತಿನ ದಿನ ಪ್ರಕೃತಿಯ ಸುಂದರ ನೋಟವನ್ನು ಸೆರೆ ಹಿಡಿಯುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಿ.

ಇದನ್ನೂ ಓದಿ:

ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಮೇ.11ರ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು: ಆರೋಗ್ಯ ಇಲಾಖೆ

Viral Video: ಕದ್ದು..ಕದ್ದು ಕಣ್ಣು ಹೊಡೆದು ಕ್ಯಾಮರಾಕ್ಕೆ ಪೋಸ್​ ಕೊಟ್ಟ ವಧು; ವರನಿಗೇನೂ ಗೊತ್ತೇ ಆಗ್ಲಿಲ್ಲ !

(World Photography day 2021 know about history and importance)

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ