Guinness Record Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದು ಗಿನ್ನೆಸ್ ರೆಕಾರ್ಡ್ ಮಾಡಿದ 22 ವರ್ಷದ ‘ಗಿನೋ’

| Updated By: ಅಕ್ಷತಾ ವರ್ಕಾಡಿ

Updated on: Dec 11, 2022 | 12:45 PM

ಈ ಹಿಂದೆ 22 ವರ್ಷ ಹಾಗೂ 187 ದಿನಗಳಲ್ಲಿ ನಿಧನವಾದ ಶ್ವಾನ ಪೆಬಲ್ಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿತ್ತು. ಈ ವರ್ಷ ಗಿನೋ ಕೂಡ ಪಡೆದುಕೊಂಡಿದೆ.

Guinness Record Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದು ಗಿನ್ನೆಸ್ ರೆಕಾರ್ಡ್ ಮಾಡಿದ 22 ವರ್ಷದ ಗಿನೋ
22-year-old Gino
Image Credit source: indianexpress
Follow us on

ಅಮೆರಿಕದ ಚಿಹೋವಾ ಮಿಶ್ರ ತಳಿಯ ಶ್ವಾನ ಗಿನೋ ಗಿನ್ನಿಸ್ ವಿಶ್ವ ದಾಖಲೆಗಳಿಂದ ವಿಶ್ವದ ಅತಿ ಹೆಚ್ಚು ಕಾಲ ಬದುಕಿರುವ ಶ್ವಾನ  ಎಂದು ಘೋಷಿಸಲ್ಪಟ್ಟಿದೆ. 22 ವರ್ಷ ಮತ್ತು 76 ದಿನಗಳಲ್ಲಿ ಗಿನೋ ಈ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಶ್ವಾನ ಎರಡು ವರ್ಷ ಇರುವಾಗ ಇದನ್ನು ದತ್ತು ಪಡೆದು ಸಾಕಲಾಯಿತು ಎಂದು ಇದರ ಮಾಲೀಕ ಅಲೆಕ್ಸ್ ವುಲ್ಫ್ ಹೇಳಿದ್ದಾರೆ.

ಇದನ್ನೂ ಓದಿ: World’s Oldest Dog: ವಿಶ್ವದ ಅತ್ಯಂತ ಹಿರಿಯ ಶ್ವಾನ ಇನ್ನಿಲ್ಲ, Rip….

ಈ ಹಿಂದೆ 22 ವರ್ಷ ಹಾಗೂ 187 ದಿನಗಳಲ್ಲಿ ನಿಧನವಾದ ಶ್ವಾನ ಪೆಬಲ್ಸ್ ವಿಶ್ವ ದಾಖಲೆಯನ್ನು ಪಡೆದುಕೊಂಡಿತ್ತು. ಕೊಲೊರಾಡೋ ವಿಶ್ವವಿದ್ಯಾನಿಲಯದಲ್ಲಿ ನಾನು ವ್ಯಾಸಂಗ ಮಾಡುತ್ತಿದ್ದಾಗ ಈ ಶ್ವಾನವನ್ನು ದತ್ತು ಪಡೆದುಕೊಂಡು ಸಾಕಿದ್ದೇ 22 ವರ್ಷದಿಂದ ನನ್ನೊಂದಿಗೆ ನನ್ನ ಮನೆಯವರ ತರಾನೇ ಇದೆ ಎಂದು ಅಲೆಕ್ಸ್ ವುಲ್ಫ್ ಸಂತೋಷ ವ್ಯಕ್ತ ಪಡಿಸಿದ್ದಾರೆ. ಗೀನೋದ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಮುದ್ದಾದ ಫೋಟೋ ಇಲ್ಲಿದೆ.

ಇದನ್ನು ಓದಿ: ಅಯೋಧ್ಯೆಯಲ್ಲಿ ಬೆಳಗಿದ 15 ಲಕ್ಷ ದೀಪಗಳು; ಹೊಸ ಗಿನ್ನಿಸ್ ವಿಶ್ವ ದಾಖಲೆ

ಗಿನೋ ಈಗಾಗಲೇ ವಯಸ್ಸಾಗಿದ್ದು ವಿರಾಮದ ಜೀವನವನ್ನು ನಡೆಸುತ್ತಿದೆ. ಜೊತೆಗೆ ದೃಷ್ಟಿ ಹದಗೆಟ್ಟಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದೆ ಎಂದು ಮಾಲೀಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಶ್ವಾನದ ಆಹಾರಕ್ರಮಕ್ಕೆ ಸಂಬಂಧಿಸಿದಂತೆ, ಅನ್ನದೊಂದಿಗೆ ಬೇಯಿಸಿದ ಕೋಳಿ ಮತ್ತು ಕ್ಯಾರೆಟ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 7:25 pm, Sat, 10 December 22