World Sanskrit Day 2026: ಸಂಸ್ಕೃತದಲ್ಲೇ ವ್ಯವಹರಿಸುವ ಕರ್ನಾಟಕದ ಹಳ್ಳಿಗಳಿವು
ಸಂಸ್ಕೃತವನ್ನು ದೇವ ಭಾಷೆ ಎಂದು ಕರೆಯಲಾಗುತ್ತದೆ. ಆದರೆ ಈ ಭಾಷೆಯನ್ನು ಮಾತಾನಾಡುವವರ ಸಂಖ್ಯೆಯೂ ತುಂಬಾ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಹಳೆಯ ಹಾಗೂ ದೇವ ಭಾಷೆಯನ್ನು ಮಾತನಾಡಲು ಎಲ್ಲರನ್ನು ಉತ್ತೇಜಿಸಲು ಹಾಗೂ ಈ ಭಾಷೆಯ ಬಗ್ಗೆ ಅರಿವು ಮೂಡಿಸಲು ಆಗಸ್ಟ್ 28 ರಂದು ವಿಶ್ವ ಸಂಸ್ಕೃತ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ಕುರಿತಾದ ಇನ್ನಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ.
ಸಂಸ್ಕೃತ ಕಷ್ಟಕರವಾದ ಭಾಷೆ ಎಲ್ಲರೂ ಅಂದುಕೊಳ್ತಾರೆ. ಹೀಗಾಗಿ ಇದನ್ನು ಆಡುಭಾಷೆಯಾಗಿ ಮಾತನಾಡುವವರ ಸಂಖ್ಯೆ ತೀರಾ ಕಡಿಮೆಯೇ. ಈ ಭಾಷೆಯನ್ನು ಮಾತನಾಡಲು ಹೆಚ್ಚು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಆಗಸ್ಟ್ 28 ರಂದು ವಿಶ್ವ ಸಂಸ್ಕೃತ ದಿನವನ್ನು (World Sanskrit Day) ಆಚರಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇಂದಿಗೂ ಸಂಸ್ಕೃತವನ್ನು ದೈನಂದಿನ ಆಡುಭಾಷೆಯನ್ನಾಗಿ ಬಳಸುವ ಗ್ರಾಮಗಳಿವೆ. ಹೌದು, ದೇವಭಾಷೆಯ ಸೌಂದರ್ಯವನ್ನು ಜೀವಂತವಾಗಿಟ್ಟುಕೊಂಡ ಪ್ರಮುಖ ಗ್ರಾಮಗಳ ಬಗ್ಗೆ ಮಾಹಿತಿ ಇಲ್ಲಿದೆ.
ವಿಶ್ವ ಸಂಸ್ಕೃತ ದಿನದ ಇತಿಹಾಸವೇನು?
ಭಾರತದ ಪುರಾತನ ಭಾಷೆಯಾದ ಸಂಸ್ಕೃತದ ಕುರಿತು ಜಗತ್ತಿಗೆ ತಿಳಿಸುವ ಉದ್ದೇಶದಿಂದ 1969 ರಲ್ಲಿ ಸಂಸ್ಕೃತ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷ ವಿಶ್ವ ಸಂಸ್ಕೃತ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಸಂಸ್ಕೃತವನ್ನು ಆಡುಭಾಷೆಯನ್ನಾಗಿಸಿಕೊಂಡ ಕರ್ನಾಟಕದ ಗ್ರಾಮಗಳಾವುವು?
ಹೊಸಹಳ್ಳಿ: ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಗ್ರಾಮದ ಜನರ ವ್ಯವಹಾರಿಕ ಭಾಷೆಯೇ ಸಂಸ್ಕೃತವೇ ಆಗಿದೆ. ಕರ್ನಾಟಕದಲ್ಲಿನ ಈ ಗ್ರಾಮವು ಸಂಸ್ಕೃತಮಯವಾಗಿದೆ. ಹೌದು, ಶಾಲಾ ಪಠ್ಯಕ್ರಮದಲ್ಲೂ ಸಂಸ್ಕೃತಕ್ಕೆ ಒತ್ತು ನೀಡಲಾಗಿದೆ. ಇಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಸಂಸ್ಕೃತವನ್ನೇ ಮಾತನಾಡುತ್ತಾ ಅದನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.
ಮತ್ತೂರು: ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮವೊಂದರ ಜನರು ಸಂಸ್ಕೃತ ಭಾಷೆಯನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ. ಈ ಗ್ರಾಮವು ಶಿವಮೊಗ್ಗದಿಂದ ಕೇವಲ ಐದು ಕಿಲೋ ಮೀಟರ್ ದೂರದಲ್ಲಿದೆ. ಮತ್ತೂರು ಗ್ರಾಮ ಸಂಸ್ಕೃತ ಗ್ರಾಮ ಎಂದೇ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿನ ಜನರು ದೇವ ಭಾಷೆಯನ್ನೇ ಆಡುಭಾಷೆಯಾಗಿ ಬಳಸುತ್ತಿದ್ದಾರೆ. ನಲವತ್ತು ವರ್ಷಗಳ ಹಿಂದೆಯಷ್ಟೇ ಸಂಸ್ಕೃತವನ್ನು ಉತ್ತೇಜಿಸಲು ಸಂಸ್ಕೃತ ಭಾರತಿ ಸಂಘವು ಮತ್ತೂರಿನಲ್ಲಿ ಹತ್ತು ದಿನಗಳ ಕಾರ್ಯಾಗಾರವನ್ನು ಆಯೋಜಿಸಿತ್ತು. ಆ ವೇಳೆ ಪೇಜಾವರ ಶ್ರೀಗಳು ಈ ಗ್ರಾಮ ಸಂಸ್ಕೃತ ಮಾತನಾಡುವ ಗ್ರಾಮವಾಗಿ ಪರಿವರ್ತಿತವಾಗಲಿ ಎಂದು ಹೇಳಿದ್ದರಂತೆ. ಅಂದಿನಿಂದ ಇಲ್ಲಿಯವರೆಗೆ ಸಂಸ್ಕೃತದ ಅಭಿಯಾನವು ನಡೆಯುತ್ತಲೇ ಇದೆ. ಸಂಸ್ಕೃತವನ್ನೇ ಇಲ್ಲಿನ ಜನರು ಆಡುಭಾಷೆಯಾಗಿ ಬಳಸುತ್ತಿದ್ದಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ