AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Suicide Prevention day 2021: ಆತ್ಮಹತ್ಯೆ ತಡೆಗಟ್ಟಲು ನಮ್ಮ ಪಾತ್ರ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳೇನು?

ವಿಶ್ವ ಆತ್ಮಹತ್ಯೆ ತಡೆ ದಿನ 2021: ಸಾಲದ ಭಾರದಿಂದ ರೈತರ ಸಾವು, ಪರೀಕ್ಷೆ ಫಲಿತಾಂಶದಿಂದ ವಿದ್ಯಾರ್ಥಿನಿ ಸಾವು ಹೀಗೆ ಸಣ್ಣ ಪುಟ್ಟ ಕಾರಣಗಳಿಗೆ ಸಾವಿಗೀಡಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. ಇವುಗಳ ಕುರಿತಾಗಿ ಜನರು ದೀರ್ಘವಾಗಿ ಯೋಚಿಲೇಬೇಕು.

World Suicide Prevention day 2021: ಆತ್ಮಹತ್ಯೆ ತಡೆಗಟ್ಟಲು ನಮ್ಮ ಪಾತ್ರ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳೇನು?
ಸಾಂದರ್ಭಿಕ ಚಿತ್ರ
TV9 Web
| Updated By: shruti hegde|

Updated on:Sep 10, 2021 | 10:18 AM

Share

ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 10ರಂದು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಬದ್ಧತೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟುವ ಕುರಿತಾಗಿ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಜನರಲ್ಲಿ ಭರವಸೆಯನ್ನು ತುಂಬುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಮೊದಲಿಗೆ 2003ರಲ್ಲಿ ಈ ದಿನ ಜಾರಿಗೆ ಬಂದಿತು. ಬಳಿಕ ಪ್ರತೀ ವರ್ಷ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಸೆಪ್ಟೆಂವರ್​ 10ರಂದು ಆಚರಿಸುತ್ತಾ ಬರಲಾಗುತ್ತಿದೆ.

ಸಾಲದ ಭಾರದಿಂದ ರೈತರ ಸಾವು, ಪರೀಕ್ಷೆ ಫಲಿತಾಂಶದಿಂದ ವಿದ್ಯಾರ್ಥಿನಿ ಸಾವು ಹೀಗೆ ಸಣ್ಣ ಪುಟ್ಟ ಕಾರಣಗಳಿಗೆ ಸಾವಿಗೀಡಾಗುತ್ತಿರುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗಿದೆ. ಇವುಗಳ ಕುರಿತಾಗಿ ಜನರು ದೀರ್ಘವಾಗಿ ಯೋಚಿಲೇಬೇಕು. ಜತೆಗೆ ಬದುಕಿನ ಕುರಿತಾಗಿ ಭರವಸೆಯನ್ನು ಮೂಡಿಸಲು ಮತ್ತು ಆತ್ಮಹತ್ಯೆಯನ್ನು ತಡೆಯುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಒಂದು ವರ್ಷದ ಹಿಂದಿನ ಅಂಕಿ ಅಂಶದ ಪ್ರಕಾರ ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ ಪೈಕಿ ಐದು ರಾಜ್ಯಗಳಲ್ಲಿ ಶೇ.49.5 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಕರ್ನಾಟಕ ರಾಜ್ಯವೂ ಒಂದು. ಅದೇ ರೀತಿ ಭಾತರದ 53 ಮಹಾನಗರಗಳಲ್ಲಿ ಒಟ್ಟು ಶೇ. 36.6ರಷ್ಟು ಆತ್ಯಹತ್ಯೆಗಳು ವರದಿಯಾಗಿದೆ. ಇದರಲ್ಲಿ ಬೆಂಗಳೂರು ಸಹ ಸೇರಿದೆ.

ದೇಶದಲ್ಲಿ ಅತಿಹೆಚ್ಚು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿದ ಐದು ರಾಜ್ಯಗಳು, ಮಹಾರಾಷ್ಟ್ರ (ಶೇ.13.6), ತಮಿಳುನಾಡು (ಶೇ.9.7). ಪಶ್ಚಿಮ ಬಂಗಾಳ (ಶೇ.9.1), ಮಧ್ಯ ಪ್ರದೇಶ (ಶೇ.9) ಹಾಗೂ ಕರ್ನಾಟಕ (ಶೇ.8.1). (ಇದು 2017 ರಿಂದ 2019ರವರೆಗಿನ ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆಗಳ ಅಂಕಿಅಂಶ)

ಅದಾಗ್ಯೂ ಕರ್ನಾಟಕದಲ್ಲಿ ಶೇಕಡಾವಾರು ಆತ್ಮಹತ್ಯೆಗಳು 2017ರಿಂದ ಇಳಿಕೆ ಕಂಡಿದೆ. 2017ರ ಸಮಯದಲ್ಲಿ ಶೇ.9ರಷ್ಟಿದ್ದರೆ, 2018ರಲ್ಲಿ ಶೇ. 8.6ಕ್ಕೆ ಇಳಿಕೆಯಾಗಿದೆ. ಹಾಗೂ 2019ರ ವೇಳೆಗೆ 8.1ಕ್ಕೆ ಇಳಿದಿದೆ.

ಭಾರತದ 53 ಮಹಾನಗರಗಳಲ್ಲಿ 2019ರಲ್ಲಿ ಒಟ್ಟು 22,390 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ವಿವಾಹ ಸಂಬಂಧಿತ ಸಮಸ್ಯೆಗಳು, ದುರ್ಬಲತೆ, ವರದಕ್ಷಿಣೆ ಕಿರುಕುಳ ಹಾಗೂ ಬಂಜೆತನ ಸಮಸ್ಯೆಯಿಂದ ಸಾವಿಗೀಡಾದ ಮಹಿಳೆಯರ ಪ್ರಕರಣಗಳೇ ಹೆಚ್ಚಿದ್ದವು. ಅವುಗಳಲ್ಲಿ ಚೆನ್ನೈ (2,461), ಬೆಂಗಳೂರು (2,081), ದೆಹಲಿ (2,423) ಹಾಗೂ ಮುಂಬೈ (1,229). ಬೆಂಗಳೂರಿನಲ್ಲಿ 2018ರಿಂದ 2019ರವರೆಗೆ ಆತ್ಮಹತ್ಯೆ ಸಂಖ್ಯೆ ಸ್ವಲ್ಪ ಕುಸಿತ ಕಂಡಿದೆ.

ಆತ್ಮಹತ್ಯೆ ತಡೆಗಟ್ಟಲು ಕ್ರಮಗಳು: ವ್ಯಕ್ತಿ ಒಬ್ಬಂಟಿಯಾಗಿ ಜೀವಿಸುತ್ತಿದ್ದಾನೆ, ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾನೆ ಎಂದಾದರೆ ಆತನ ಕುರಿತು ನಿಗಾ ವಹಿಸುವುದು ಮುಖ್ಯ.

ಆರೋಗ್ಯ ಸಮಸ್ಯೆಯಿಂದ ಮಾನಸಿಕ ಸ್ಥಿತಿಯನ್ನು ಕೆಡಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ, ಅಂಥವರಿಗೆ ಧೈರ್ಯದ ಜತೆಗೆ ಭರವಸೆಯನ್ನು ತುಂಬುದ ಕಾರ್ಯ ಮಾಡುವುದು.

ಮಕ್ಕಳ ಮನಸ್ಥಿತಿಯನ್ನು ಅರ್ಥೈಸಿಕೊಂಡು ನಿಧಾನವಾಗಿ ತಿಳಿಹೇಳುವ ಪ್ರಯತ್ನ ಮಾಡುವುದು. ಜತೆಗೆ ಮಕ್ಕಳಲ್ಲಿ ಒತ್ತಡ ಹೇರದೇ ಇರುವುದು.

ಬದುಕಿನ ಮಹತ್ವ ಮತ್ತು ಜೀವನದಲ್ಲಿ ಸಂತೋಷದ ಮಹತ್ವವನ್ನು ಅರ್ಥೈಸುವುದು. ಜೀವನದಲ್ಲಿ ಸೋಲು ಸಹಜ. ಮುನ್ನುಗ್ಗಿ ನಡೆದರೆ ಗೆಲುವು ಖಚಿತ ಎಂಬ ಮಾತಿನೊಂದಿಗೆ ಜೀವನದ ಮಹತ್ವವನ್ನು ತಿಳಿಹೇಳುವುದು.

ಕಷ್ಟದಲ್ಲಿ ನಮ್ಮವರಿಗೆ ನಾವು ಜೊತೆಯಾಗಿ ನಿಲ್ಲುವುದು ಜತೆಗೆ ನೆರವಾಗುವುದು. ಖಿನ್ನತೆಯಿಂದ ಬಳಲುತ್ತಿದ್ದರೆ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸಹಾಯ ಮಾಡುವುದು.

ಇದನ್ನೂ ಓದಿ:

Suicide: ಒಂದೇ ಮನೆಯಲ್ಲಿ ಮೂವರು ನೇಣುಬಿಗಿದುಕೊಂಡು ಆತ್ಮಹತ್ಯೆ

Crime News: ಸೊಸೆಯ ಕಿರುಕುಳ ತಾಳಲಾರದೆ ಬೆಂಕಿ ಹಚ್ಚಿಕೊಂಡು ಮಾವ ಆತ್ಮಹತ್ಯೆ!

(World Suicide Prevention day 2021 know about history and statistics)

Published On - 10:10 am, Fri, 10 September 21

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..