
ಶುಚಿತ್ವ ಮತ್ತು ಆರೋಗ್ಯಕ್ಕಾಗಿ ಶೌಚಾಲಯ (toilet) ಬೇಕೇಬೇಕು. ಶೌಚಾಲಯದ ಬಳಕೆಯಿಂದ ನೈರ್ಮಲ್ಯ ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಂತೆ, ಬಯಲು ಮಲವಿಸರ್ಜನೆ ಆರೋಗ್ಯ ಮಾತ್ರವಲ್ಲದೆ ಪರಿಸರದ ಮೇಲೂ ಕೆಟ್ಟ ಪರಿಣಾವನ್ನು ಬೀರುತ್ತದೆ. ಹಾಗಾಗಿ ಶೌಚಾಲದ ಶೌಚಾಲಯದ ಸ್ವಚ್ಛತೆ ಹಾಗೂ ಶೌಚಾಲಯಗಳ ಬಳಕೆಯನ್ನು ಉತ್ತೇಜಿಸಲು, ಬಯಲು ಶೌಚದಿಂದಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈಗಂತೂ ಬಹುತೇಕ ಎಲ್ಲರ ಮನೆಗಳಲ್ಲೂ ಟಾಯ್ಲೆಟ್ ಇದೆ. ಇದರಲ್ಲಿ ಕೆಲವರು ಪಾಶ್ಚಿಮಾತ್ಯ ಶೌಚಾಲಯ ಬಳಸಿದರೆ ಕೆಲವರು ಇಂಡಿಯನ್ ಟಾಯ್ಲೆಟ್ ಅನ್ನು ಬಳಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಇವೆರಡರಲ್ಲಿ ಯಾವುದು ಉತ್ತಮ ಎಂಬುದನ್ನು ನೋಡೋಣ ಬನ್ನಿ.
ಇಂಡಿಯನ್ ಟಾಯ್ಲೆಟ್ ಮತ್ತು ಪಾಶ್ಚಿಮಾತ್ಯ ಶೌಚಾಲಯಗಳು ಎರಡೂ ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ನಿಮ್ಮ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ನಿರ್ಧರಿಸುವುದು ನಿಮ್ಮ ದೈಹಿಕ ಸ್ಥಿತಿ, ವಯಸ್ಸು ಮತ್ತು ವೈಯಕ್ತಿಕ ಆದ್ಯತೆಗಳನ್ನು ಅವಲಂಬಿಸಿರುತ್ತದೆ. ಭಾರತೀಯ ಶೌಚಾಲಯಗಳು ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿಸುತ್ತವೆ. ಆದ್ದರಿಂದ, ನೀವು ಆರೋಗ್ಯವಂತರಾಗಿದ್ದರೆ, ಭಾರತೀಯ ಶೌಚಾಲಯವನ್ನು ಬಳಸುವುದು ಉತ್ತಮ. ಈ ಟಾಯ್ಲೆಟ್‌ನಲ್ಲಿ ಸಂಪೂರ್ಣವಾಗಿ ಕುಳಿತುಕೊಳ್ಳಬೇಕಾಗುತ್ತದೆ. ಇದು ಹೊಟ್ಟೆಯ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಇದು ಕರುಳನ್ನು ಸಂಪೂರ್ಣವಾಗಿ ಶುದ್ಧೀಕರಿಸುತ್ತದೆ. ಅದೇ ಪಾಶ್ಚಿಮಾತ್ಯ ಶೌಚಾಲಯಗಳು ಹೆಚ್ಚಿನ ಸೌಕರ್ಯ ಮತ್ತು ಸರಾಗತೆಯನ್ನು ನೀಡುತ್ತವೆ. ಇದರಲ್ಲಿ ಕುರ್ಚಿಯಲ್ಲಿ ಕೂರುವಂತೆ ಕುಳಿತುಕೊಳ್ಳಬೇಕಾಗುತ್ತದೆ. ಇದು ವೃದ್ಧರು, ಗರ್ಭಿಣಿಯರು ಅಥವಾ ಕುಳಿತುಕೊಳ್ಳಲು ಸಾಧ್ಯವಾಗದ ಮೊಣಕಾಲು ಸಮಸ್ಯೆ ಇರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಒಟ್ಟಾರೆಯಾಗಿ, ಎರಡೂ ಶೌಚಾಲಯಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ.
ಇದನ್ನೂ ಓದಿ: ಸ್ತ್ರೀಯರಂತೆ ಪುರುಷರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆ ಇದೆ
ಪಾಶ್ಚಿಮಾತ್ಯ ಶೌಚಾಲಯ ಬಳಸುವುದರಿಂದ ಯಾವುದೇ ಗಮನಾರ್ಹ ಅನಾನುಕೂಲತೆಗಳಿಲ್ಲ. ಮೊಣಕಾಲು ಅಥವಾ ಬೆನ್ನು ನೋವು ಮತ್ತು ಕುಳಿತುಕೊಳ್ಳಲು ತೊಂದರೆ ಇರುವ ಜನರಿಗೆ ಪಾಶ್ಚಿಮಾತ್ಯ ಶೌಚಾಲಯಗಳು ಹೆಚ್ಚು ಸೂಕ್ತವಾಗಿವೆ. ವಯಸ್ಸಾದ ಜನರು ಎದ್ದು ಕುಳಿತುಕೊಳ್ಳಲು ಕಷ್ಟಪಡಬಹುದು, ಇದರಿಂದಾಗಿ ಅವರಿಗೆ ಪಾಶ್ಚಿಮಾತ್ಯ ಶೌಚಾಲಯಗಳು ಹೆಚ್ಚು ಪ್ರಯೋಜನಕಾರಿಯಾಗುತ್ತವೆ. ದೈಹಿಕ ಅಂಗವೈಕಲ್ಯ ಹೊಂದಿರುವ ಜನರು ಪಾಶ್ಚಿಮಾತ್ಯ ಶೌಚಾಲಯಗಳನ್ನು ಸಹ ಸುಲಭವಾಗಿ ಬಳಸಬಹುದು.ಆದರೆ ಟಾಯ್ಲೆಟ್ ಸೀಟಿನಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು ಮತ್ತು ಟಾಯ್ಲೆಟ್ ಸೀಟ್‌ನಲ್ಲಿ ಕುಳಿತು ಮೊಬೈಲ್ ಫೋನ್ ಬಳಸುವುದು ಅನಾರೋಗ್ಯಕರ ಅಭ್ಯಾಸಗಳೆಂದು ಪರಿಗಣಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ