ಹಳದಿ ಹಲ್ಲುಗಳಿಗೆ ಹಳದಿಯೇ ಪರಿಹಾರ, ಈ ಎರಡು ಪ್ರಯೋಗಗಳು ಸಾಕು

ಹಲ್ಲಿನಲ್ಲಿ ಉಂಟಾಗುವ ಹಳದಿ ಬಣ್ಣವನ್ನು ತೆಗೆದು ಹಾಕಲು ದುಬಾರಿ ಪರಿಹಾರಗಳನ್ನು ಮಾಡಬೇಕಿಲ್ಲ. ಯೋಗ ಮತ್ತು ಆಯುರ್ವೇದ ತಜ್ಞ ಡಾ. ಹಂಸ ಯೋಗೇಂದ್ರ ಅವರು ಹೇಳಿರುವ ಈ ಕೆಲವೊಂದು ಪರಿಹಾರಗಳನ್ನು ಮನೆಯಲ್ಲಿಯೇ ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಸುಲಭವಾಗಿ ಮನೆಯಲ್ಲಿಯೇ ಹಳದಿ ಹಲ್ಲಿನ ಸಮಸ್ಯೆಯನ್ನು ಹೋಗಲಾಡಿಸಬಹುದು.

ಹಳದಿ ಹಲ್ಲುಗಳಿಗೆ ಹಳದಿಯೇ ಪರಿಹಾರ, ಈ ಎರಡು ಪ್ರಯೋಗಗಳು ಸಾಕು
ಸಾಂದರ್ಭಿಕ ಚಿತ್ರ

Updated on: Jun 29, 2025 | 3:06 PM

ಹಲ್ಲುಗಳು ಹಳದಿ ಬಣ್ಣಕ್ಕೆ (Haldi For Teeth Whitening) ತಿರುಗಿದರೆ ಸ್ವಲ್ಪ ಮುಜುಗರ ಅನ್ನಿಸುವುದು ಸಹಜ. ಯಾರ ಮುಂದೆಯೂ ಮುಕ್ತವಾಗಿ ನಗುವುದಕ್ಕೂ ಆಗುವುದಿಲ್ಲ, ಹೀಗೆ ಹಲ್ಲು ಹಳದಿ ಬಣ್ಣಕ್ಕೆ ತಿರುಗಲು  ಕಾರಣ ಏನು? ಅದಕ್ಕೆ ಪರಿಹಾರ ಏನು ಮಾಡಬೇಕು ಎಂಬುದನ್ನು ಇಲ್ಲಿ ಹೇಳಲಾಗಿದೆ ನೋಡಿ. ಹಲವು ಜನ ಈ ಹಲ್ಲಿನ ಹಳದಿ ಬಣ್ಣ ತೆಗೆದು ಹಾಕಲು ಬೇರೆ ಬೇರೆ ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ, ಇದಕ್ಕಾಗಿ ದುಬಾರಿ ಖರ್ಚುಗಳನ್ನು ಮಾಡುತ್ತಾರೆ. ಆದರೆ ತಜ್ಞರು  ಈ ಸಮಸ್ಯೆಯನ್ನು ಮನೆಯಲ್ಲೇ ಪರಿಹಾರ ಮಾಡಬಹುದು ಎಂದು ಹೇಳಿದ್ದಾರೆ. ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ನೀವು ಕೆಲವು ನೈಸರ್ಗಿಕ ವಿಧಾನಗಳನ್ನು ಪ್ರಯತ್ನಿಸಬಹುದು. ಈ ಕುರಿತು ಯೋಗ ಮತ್ತು ಆಯುರ್ವೇದ ತಜ್ಞ ಡಾ. ಹಂಸ ಯೋಗೇಂದ್ರ ಅವರು ಕೆಲವೊಂದು ಪರಿಹಾರಗಳನ್ನು ಹೇಳಿದ್ದಾರೆ.

ಹಳದಿ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಹಳದಿ ಹಲ್ಲುಗಳನ್ನು ಸ್ವಚ್ಛ ಮಾಡಲು ಹಳದಿಯಿಂದ ಅಂದರೆ ಅರಶಿನದಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಈ ಬಗ್ಗೆ ತಮ್ಮ ಯೂಟ್ಯೂಬ್​​​ ಚಾನಲ್​​ನಲ್ಲಿ ಹೇಳಿಕೊಂಡಿದ್ದಾರೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಅಂಶಗಳು ಪ್ರಬಲವಾದ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಅಂಶವಾಗಿದೆ. ಇದು ಒಸಡುಗಳ ಉರಿಯೂತ, ಕುಳಿಗಳು, ಪ್ಲೇಕ್ ಮತ್ತು ಬಾಯಿಯ ಸೋಂಕುಗಳಂತಹ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕರ್ಕ್ಯುಮಿನ್ ಹಲ್ಲುಗಳಿಂದ ಹಳದಿ ಬಣ್ಣವನ್ನು ತೆಗೆದುಹಾಕಿ ಅವುಗಳನ್ನು ಹೊಳೆಯುವಂತೆ ಮಾಡುತ್ತದೆ. ಇದು ಹಲ್ಲುಗಳ ಮೇಲ್ಮೈಯಿಂದ ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಹಲ್ಲು ಸಹಜ ಬಣ್ಣಕ್ಕೆ ಬರಲು ಸಹಾಯ ಮಾಡುತ್ತದೆ.

ಅರಿಶಿನದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಹೇಗೆ?: 2 ವಿಧಗಳಿವೆ:

1. ಅರಿಶಿನ ಪೇಸ್ಟ್

  • 1/2 ಟೀ ಚಮಚ ಅರಿಶಿನ ಪುಡಿಗೆ ಕೆಲವು ಹನಿ ನೀರು ಸೇರಿಸಿ ದಪ್ಪ ಪೇಸ್ಟ್ ಮಾಡಿ.
  • ಈ ಪೇಸ್ಟ್ ಅನ್ನು ನಿಮ್ಮ ಹಲ್ಲುಜ್ಜುವ ಬ್ರಷ್ ಮೇಲೆ ಹಚ್ಚಿ ಸುಮಾರು 2 ನಿಮಿಷಗಳ ಕಾಲ ನಿಧಾನವಾಗಿ ಬ್ರಷ್ ಮಾಡಿ. ಇದರ ನಂತರ, ಚೆನ್ನಾಗಿ ತೊಳೆಯಿರಿ.
  • ವೈದ್ಯರು ಇದನ್ನು ವಾರಕ್ಕೆ 2 ರಿಂದ 3 ಬಾರಿ ಮಾಡಲು ಶಿಫಾರಸು ಮಾಡುತ್ತಾರೆ.
  • ಕೆಲವು ವಾರಗಳಲ್ಲಿ ನಿಮ್ಮ ಹಲ್ಲುಗಳ ಹೊಳಪಿನಲ್ಲಿ ವ್ಯತ್ಯಾಸ ಕಾಣಬಹುದು.

ಇದನ್ನೂ ಓದಿ: ಸುಂದರವಾಗಿ ಕಾಣಲು ಮೇಕಪ್, ಬಟ್ಟೆ ಮಾತ್ರವಲ್ಲ, ಈ ಅಂಶಗಳು ಮುಖ್ಯ

ಇದನ್ನೂ ಓದಿ
ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಔಷಧ ಇಲಾಖೆ ಸಮರ: ಪರೀಕ್ಷೆಗೆ ಸೂಚನೆ
ಸುಂದರವಾಗಿ ಕಾಣಲು ಮೇಕಪ್, ಬಟ್ಟೆ ಮಾತ್ರವಲ್ಲ, ಈ ಅಂಶಗಳು ಮುಖ್ಯ
ಹೆಣ್ಣುಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ ಗೊತ್ತಾ?
ಪಾಲಕ್ ಎಲೆ, ಕಿತ್ತಳೆ, ಆವಕಾಡೊ ಚರ್ಮದ ಆರೋಗ್ಯಕ್ಕೆ ಪ್ರತಿದಿನ ಸೇವಿಸಿ

2. ಅರಿಶಿನ ಮತ್ತು ತೆಂಗಿನ ಎಣ್ಣೆ

  • 1 ಟೀ ಚಮಚ ತೆಂಗಿನ ಎಣ್ಣೆಗೆ 1/2 ಟೀ ಚಮಚ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
  • ಇವೆರಡನ್ನೂ ಮಿಶ್ರಣ ಮಾಡಿ, ಮೌತ್‌ವಾಶ್‌ನಂತೆ ಬಾಯಿಯಲ್ಲಿ 5-10 ನಿಮಿಷಗಳ ಕಾಲ ಮಿಶ್ರಣ ಮಾಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
  • ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಮ್ಲವು ಬಾಯಿಯಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ ಮತ್ತು ಅರಿಶಿನದೊಂದಿಗೆ ಬೆರೆಸಿದಾಗ, ಅದು ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳುಪುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ದುರ್ವಾಸನೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಈ ರೀತಿಯ ಪ್ರಯೋಗ ಮಾಡುವುದರಿಂದ ಹಲ್ಲುಗಳಲ್ಲಿ ಉಂಟಾಗುವ ಹಳದಿ ಬಣ್ಣವನ್ನು ಪರಿಹಾರ ಮಾಡುತ್ತದೆ. ಯಾವುದೇ ಅಡ್ಡ ಪರಿಣಾಮವಾಗದಂತೆ ಇದನ್ನು ಉಪಯೋಗಿಸಬಹುದು ಎಂದು ವೈದ್ಯರು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Sun, 29 June 25