ಮದುವೆ ಬೇಡ, ಆದರೆ ಹೆಂಡತಿ ಬೇಕು, ಇಲ್ಲಿ ಸಿಗುತ್ತಾರೆ ನೋಡಿ ತಾತ್ಕಾಲಿಕ ಸುಂದರ ಪತ್ನಿಯರು

ಕೌಟುಂಬಿಕ ಕಲಹವು ಬೇಡ, ಯಾವುದೇ ಸಾಂಸಾರಿಕ ಜವಾಬ್ದಾರಿಗಳು ಬೇಡ, ಆದರೆ ಸ್ವಲ್ಪ ದಿನದ ವರೆಗೆ ಹೆಂಡತಿಬೇಕು. ಪತ್ನಿಯ ಸೇವೆಯ ಅನುಭವ ಬೇಕು ಎಂಬ ಆಸೆ ಇದ್ದರೆ ಈ ದೇಶಕ್ಕೆ ಭೇಟಿ ನೀಡಬಹುದು. ಇಲ್ಲಿ ಯಾವುದೇ ಶ್ವಾಶತ ಪತ್ನಿ ಇರಲ್ಲ, ಬದಲಿಗೆ ತಾತ್ಕಾಲಿಕ ಸುಂದರ ಪತ್ನಿಯರನ್ನು ಪಡೆಯಬಹುದು. ಈ ವಿಷಯವೇ ಒಂಥರ ಹೊಸದಾಗಿದೆ. ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ಮದುವೆ ಬೇಡ, ಆದರೆ ಹೆಂಡತಿ ಬೇಕು, ಇಲ್ಲಿ ಸಿಗುತ್ತಾರೆ ನೋಡಿ ತಾತ್ಕಾಲಿಕ ಸುಂದರ ಪತ್ನಿಯರು
ಸಾಂದರ್ಭಿಕ ಚಿತ್ರ

Updated on: Sep 05, 2025 | 5:58 PM

ಆಗ್ನೇಯ ಏಷ್ಯಾದ ಸುಂದರ ದೇಶ ಥೈಲ್ಯಾಂಡ್, (Thailand) ವಿಶ್ವದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಈ ದೇಶವು ಒಂದು. ದೈಹಿಕ ತೃಪ್ತಿಗಾಗಿ ಇಲ್ಲಿಗೆ ಅನೇಕ ಜನರು ಬರುತ್ತಾರೆ. ಅದರಲ್ಲೂ ಈ ದೇಶ ರಾತ್ರಿಯಲ್ಲಿ ಇನ್ನು ಸುಂದರವಾಗಿ ಹಾಗೂ ರಸಿಕತೆಯಿಂದ ತುಂಬಿರುತ್ತದೆ. ಇದೀಗ ಥೈಲ್ಯಾಂಡ್ ಮತ್ತೊಂದು ವಿಚಾರವಾಗಿ ಟ್ರೆಂಡ್​​ ಆಗುತ್ತಿದೆ. ಇದೀಗ ಈ ವಿಚಾರ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಥೈಲ್ಯಾಂಡ್‌ನ ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಬಾಡಿಗೆ ಹೆಂಡತಿಯರಂತೆ ಪ್ರವಾಸಿಗರೊಂದಿಗೆ ತಾತ್ಕಾಲಿಕ ಸಂಬಂಧಗಳನ್ನು ಹೊಂದಿರುತ್ತಾರೆ. ಒಂದು ವೇಳೆ ಈ ಮಹಿಳೆಯರಲ್ಲಿ ಅಥವಾ ಹುಡುಗಿಯರಲ್ಲಿ ಯಾರದಾರೂ ಇಷ್ಟವಾದರೆ ಅವರನ್ನು ಮದುವೆ ಕೂಡ ಆಗಬಹುದು.

ಥೈಲ್ಯಾಂಡ್‌ನಲ್ಲಿ ಬಾಡಿಗೆ ಹೆಂಡತಿ

ಈ ಪ್ರವೃತ್ತಿ ಥೈಲ್ಯಾಂಡ್‌ನ ಪಟ್ಟಾಯ ನಗರದಲ್ಲಿ ಬಹಳ ಹಿಂದಿನಿಂದಲೂ ಈ ಆಚರಣೆಯಲ್ಲಿದೆ. ಇದನ್ನು ‘ವೈಫ್ ಆನ್ ಹೈರ್’ ಅಥವಾ ‘ಬ್ಲ್ಯಾಕ್ ಪರ್ಲ್’ ಎಂದೂ ಕರೆಯುತ್ತಾರೆ. ಒಂದು ರೀತಿಯ ತಾತ್ಕಾಲಿಕ ವಿವಾಹದಂತಹ ಸಂಬಂಧ, ಇದರಲ್ಲಿ ಮಹಿಳೆಯನ್ನು ಸ್ವಲ್ಪ ಸಮಯದವರೆಗೆ ಹಣದ ಮೂಲಕ ಪುರುಷನೊಂದಿಗೆ ಹೆಂಡತಿಯಾಗಿ ಇರಿಸಿಕೊಳ್ಳಬಹುದು. ಆ ಮಹಿಳೆ ಹೆಂಡತಿಯಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಾಳೆ. ಅಡುಗೆ ಮಾಡುವುದು, ಹೊರಗೆ ಹೋಗುವುದು ಇತ್ಯಾದಿ ಎಲ್ಲವನ್ನು ಮಾಡುತ್ತಾರೆ. ಇದೆಲ್ಲವೂ ಒಪ್ಪಂದದ ಅಡಿಯಲ್ಲಿ ನಡೆಯುತ್ತದೆ ಹಾಗೂ ಇದನ್ನು ಕಾನೂನುಬದ್ಧ ವಿವಾಹವೆಂದು ಪರಿಗಣಿಸಲಾಗುವುದಿಲ್ಲ.

ಲಾವರ್ಟ್ ಎ ಎಮ್ಯಾನುಯೆಲ್ ಬರೆದ ‘ಥಾಯ್ ಟ್ಯಾಬೂ – ಆಧುನಿಕ ಸಮಾಜದಲ್ಲಿ ಹೆಂಡತಿ ಬಾಡಿಗೆಯ ಏರಿಕೆ’ ಎಂಬ ಪುಸ್ತಕವು ಈ ಪದ್ಧತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಥೈಲ್ಯಾಂಡ್​​​ನಲ್ಲಿ ಬಡತನದಿಂದ ಈ ಪ್ರವೃತ್ತಿ ಬೆಳೆಯಿತು. ಈ ಕಾರಣಕ್ಕೆ ಮಹಿಳೆಯರು ಹಣ ಸಂಪಾದಿಸಲು ಹಾಗೂ ತಮ್ಮ ಕುಟುಂಬವನ್ನು ಪೋಷಣೆ ಮಾಡಲು ಈ ಕೆಲಸ ಮಾಡುತ್ತಿದ್ದರು. ಮಹಿಳೆಯರು ಸಾಮಾನ್ಯವಾಗಿ ಬಾರ್‌ಗಳು ಅಥವಾ ರಾತ್ರಿ ಕ್ಲಬ್‌ಗಳಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿ ಕೆಲವೊಂದು ಪುರುಷರನ್ನು ಆಕರ್ಷಣೆ ಮಾಡಿ, ಗ್ರಾಹಕರಾಗಿ ಪಡೆಯುತ್ತಾರೆ.

ಇದನ್ನೂ ಓದಿ
ವೃದ್ಧರ ದೇಶವಾಗುತ್ತಿದೆಯೇ ಭಾರತ? ಆತಂಕಕಾರಿ ಸಂಗತಿ ಇಲ್ಲಿದೆ
ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯಗೆ ಪರಿಹಾರ?
ದೇಹದಲ್ಲಿನ ಕಂಡುವರುವ ಈ ನೋವನ್ನು ಕಡೆಗಣಿಸುತ್ತೀರಾ? ಎಚ್ಚರ...
ಕಾಫಿ ಕುಡಿಯುತ್ತಾ ಈ ಆಹಾರಗಳ ಸೇವನೆ ಮಾಡುತ್ತೀರಾ?

ಬಾಡಿಗೆ ಹೆಂಡತಿಯರಾಗುವ ಮಹಿಳೆಯರ ಬೆಲೆ ವಯಸ್ಸು, ಸೌಂದರ್ಯ, ಶಿಕ್ಷಣ ಮತ್ತು ಸಮಯದ ಅವಧಿ ಈ ವಿಷಯಗಳನ್ನು ಅವಲಂಬಿಸಿರುತ್ತದೆ. ಕೆಲವು ಮಹಿಳೆಯರು ಕೆಲವೇ ದಿನಗಳವರೆಗೆ ಬಾಡಿಗೆಗೆ ಇದ್ದರೆ, ಕೆಲವರು ತಿಂಗಳುಗಳ ಕಾಲ ಇರುತ್ತಾರೆ. ವರದಿಗಳ ಪ್ರಕಾರ, ಬಾಡಿಗೆ $1600 (ಸುಮಾರು ರೂ. 1.3 ಲಕ್ಷ) ರಿಂದ $116000 (ಸುಮಾರು ರೂ. 96 ಲಕ್ಷ) ವರೆಗೆ ಇರಬಹುದು. ಇದರ ಬಗ್ಗೆ ಯಾವುದೇ ಕಾನೂನು ಇಲ್ಲ, ಆದ್ದರಿಂದ ಎಲ್ಲವೂ ಖಾಸಗಿ ಒಪ್ಪಂದದ ಅಡಿಯಲ್ಲಿ ನಡೆಯುತ್ತದೆ. ಥೈಲ್ಯಾಂಡ್‌ನಲ್ಲಿ ಹೆಂಡತಿಯನ್ನು ಬಾಡಿಗೆಗೆ ಪಡೆಯುವ ಈ ಪದ್ಧತಿ ಹೊಸದಾಗಿ ಕಂಡರೂ, ಜಪಾನ್ ಮತ್ತು ಕೊರಿಯಾದಂತಹ ದೇಶಗಳಲ್ಲಿ ಇದು ಮೊದಲೇ ಪ್ರಾರಂಭವಾಗಿತ್ತು. ‘ಗರ್ಲ್‌ಫ್ರೆಂಡ್ ಫಾರ್ ಹೈರ್’ ನಂತಹ ಸೇವೆಗಳು ಈಗಾಗಲೇ ಅಲ್ಲಿ ಚಾಲನೆಯಲ್ಲಿವೆ. ಥೈಲ್ಯಾಂಡ್ ಕೂಡ ಈ ಮಾದರಿಯನ್ನು ಅಳವಡಿಸಿಕೊಂಡಿದೆ.

ಇದನ್ನೂ ಓದಿ: ಯಾವ ಡ್ರೈ ಫ್ರೂಟ್ಸ್ ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ? ಇಲ್ಲಿದೆ ನೋಡಿ

ದೇಶದಲ್ಲಿ ಬಾಡಿಗೆ ಹೆಂಡತಿಯ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ ಎಂದು ಥಾಯ್ ಸರ್ಕಾರ ಒಪ್ಪಿಕೊಂಡಿದೆ. ಈ ವ್ಯವಹಾರದಲ್ಲಿ ಕೆಲಸ ಮಾಡುವ ಮಹಿಳೆಯರ ಸುರಕ್ಷತೆ ಮತ್ತು ಹಕ್ಕುಗಳನ್ನು ರಕ್ಷಿಸಲು ಅದನ್ನು ನಿಯಂತ್ರಿಸಲು ಈಗ ಕಾನೂನು ರೂಪಿಸುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ, ಥೈಲ್ಯಾಂಡ್‌ನಲ್ಲಿ ಬಾಡಿಗೆ ಹೆಂಡತಿಯ ಪ್ರವೃತ್ತಿ ಕೇವಲ ತಾತ್ಕಾಲಿಕ ಸಂಬಂಧವಲ್ಲ, ಬದಲಾಗಿ ಅದು ದೊಡ್ಡ ವ್ಯವಹಾರವಾಗಿದೆ. ಈ ಕಾರಣದಿಂದಾಗಿ ಅನೇಕ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ, ಆದರೆ ಈ ಪ್ರವೃತ್ತಿ ಸಾಮಾಜಿಕ ಮತ್ತು ನೈತಿಕ ಚರ್ಚೆಯ ವಿಷಯವೂ ಆಗುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ