ಥಾಮ್ಸನ್ ರಾಯಿಟರ್ಸ್ ಫೌಂಡೇಶನ್ ನಡೆಸಿದ ಸಂಶೋಧನೆಯ ಪ್ರಕಾರ ಮಾನವ ತನ್ನ ಜೀವಿತಾವಧಿಯಲ್ಲಿ ಸುಮಾರು 44 ಪೌಂಡ್ ಪ್ಲಾಸ್ಟಿಕ್ ಅನ್ನು ಸೇವಿಸುತ್ತಾನೆ. ಸುಸ್ಥಿರ ಬ್ರ್ಯಾಂಡ್‌ಗಳು ಮತ್ತು ಪರಿಸರ ಸ್ನೇಹಿ ಅಭ್ಯಾಸ ದೂರವಾಗುತ್ತಿರುವುದರಿಂದ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ. ಹೆಚ್ಚಿನ ಮನೆಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳು (Plastic Water Bottles), ಜಾರ್‌ಗಳು, ಕಂಟೈನರ್‌ಗಳು, ಪಾತ್ರೆಗಳು, ಕಸದ ಚೀಲಗಳು ಇತ್ಯಾದಿ ಇನ್ನೂ ಕೂಡ ಬಳಕೆಯಲ್ಲಿದೆ. ಹೀಗಾಗಿ ಪಾಸ್ಟಿಕ್ನಿಂದ ಉಂಟಾಗುವ ಅಪಾಯದ ಪ್ರಮಾಣ ಕೂಡ ಹೆಚ್ಚಿದೆ.
ಇತ್ತೀಚಿನ ಸಮೀಕ್ಷೆಯ ಪ್ರಕಾರ, ಭಾರತವು ಪ್ರತಿದಿನ 6,000 ಟನ್ ಪ್ಲಾಸ್ಟಿಕ್ ಅನ್ನು ಉತ್ಪಾದಿಸುತ್ತದೆ. ಪರಿಸರ ಮಾಲಿನ್ಯಕ್ಕೆ ಅಷ್ಟೇ ಅಲ್ಲ ಪ್ಲಾಸ್ಟಿಕ್ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ವೋಲ್ನಾ ಬೆವರೇಜಸ್ ಪ್ರೈ. ಲಿಮಿಟೆಡ್ನ ನಿರ್ದೇಶಕ ಕುಶಾಗ್ರ ಶರ್ಮಾ ಮತ್ತು ಕಾರ್ತಿಕ್ ರಜಪೂತ್ ಸಂವಾದದಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಕುಡಿಯುವ ನೀರಿನ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
ನಾವು ಎಲ್ಲಾ ರೀತಿಯ ಪ್ಲಾಸ್ಟಿಕ್ ಬಾಟಲಿಗಳು, ಜಗ್ ಅಥವಾ ಪಾತ್ರೆಗಳಲ್ಲಿ ನೀರನ್ನು ಸಂಗ್ರಹಿಸುತ್ತೇವೆ. ಇದು ಕೆಳದರ್ಜೆಯ ಅಥವಾ ಉನ್ನತ ದರ್ಜೆಯದ್ದಾಗಿರಬಹುದು. ಆದರೆ ಪ್ಲಾಸ್ಟಿಕ್ ಪ್ಲಾಸ್ಟಿಕ್ ಆಗಿದೆ! ಪ್ಲಾಸ್ಟಿಕ್ ಪಾತ್ರೆಗಳು ಬಹಳಷ್ಟು ರಾಸಾಯನಿಕಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಕಾರಣ ಇದು ಅತ್ಯಂತ ಹಾನಿಕಾರಕ ದೈನಂದಿನ ಅಭ್ಯಾಸವಾಗಿದೆ ಎಂದು ಕುಶಾಗ್ರ ಶರ್ಮಾ ಹೇಳಿದ್ದಾರೆ.
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ಉಂಟಾಗುವ ಅಪಾಯಗಳು
ಡಯಾಕ್ಸಿನ್ ಉತ್ಪಾದನೆ
ಸೂರ್ಯನಿಗೆ ನೇರವಾಗಿ ಇದು ಒಡ್ಡಿಕೊಳ್ಳುತ್ತದೆ. ಈ ತಾಪನವು ಡಯಾಕ್ಸಿನ್ ಎಂಬ ವಿಷವನ್ನು ಬಿಡುಗಡೆ ಮಾಡುತ್ತದೆ. ಇದನ್ನು ಸೇವಿಸಿದಾಗ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ.
ಬಿಪಿಎ ಉತ್ಪಾದನೆ
ಬೈಫಿನೈಲ್ ಎ ಅನ್ನು ಬಿಪಿಎ ಎಂದು ಕರೆಯುತ್ತಾರೆ. ಇದು ಈಸ್ಟ್ರೊಜೆನ್ ಅನುಕರಿಸುವ ರಾಸಾಯನಿಕವಾಗಿದ್ದು, ಇದು ಮಧುಮೇಹ, ಸ್ಥೂಲಕಾಯತೆ, ಫಲವತ್ತತೆಯ ಸಮಸ್ಯೆ, ಹುಡುಗಿಯರಲ್ಲಿ ಪ್ರೌಢಾವಸ್ಥೆಯಲ್ಲಿ ಆರೋಗ್ಯ ಸಮಸ್ಯೆ ಮುಂತಾದವುಗಳಿಗೆ ಕಾರಣವಾಗಬಹುದು. ಹೀಗಾಗಿ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯದಿರುವುದು ಉತ್ತಮ.
ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಅಡ್ಡಪರಿಣಾಮ ಬೀರುತ್ತದೆ
ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದರಿಂದ ರೋಗನಿರೋಧಕ ವ್ಯವಸ್ಥೆಯ ಮೇಲೆ ಅಗಾಧವಾಗಿ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ಬಾಟಲಿಗಳ ಮೂಲಕ ನಾವು ರಾಸಾಯನಿಕಗಳನ್ನು ಸೇವಿಸುತ್ತೇವೆ. ಇದು ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ತೊಂದರೆಗೆ ಸಿಲುಕಿಸುತ್ತದೆ.
ಲಿವರ್ ಕ್ಯಾನ್ಸರ್ ಮತ್ತು ವೀರ್ಯಾಣು ಸಂಖ್ಯೆ ಕುಂದುವಿಕೆ
ಪ್ಲಾಸ್ಟಿಕ್‌ನಲ್ಲಿ ಥಾಲೇಟ್ಸ್ ಎಂಬ ರಾಸಾಯನಿಕ ಇರುವ ಕಾರಣ ಪ್ಲಾಸ್ಟಿಕ್ ಬಾಟಲಿಗಳಿಂದ ನೀರು ಕುಡಿಯುವುದರಿಂದ ಯಕೃತ್ತಿನ ಕ್ಯಾನ್ಸರ್ ಮತ್ತು ವೀರ್ಯದ ಸಂಖ್ಯೆ ಕಡಿಮೆಯಾಗಬಹುದು.
ಫ್ರೆಡೋನಿಯಾದಲ್ಲಿನ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ ನಡೆಸಿದ ಇತ್ತೀಚಿನ ಅಧ್ಯಯನವು ನೀರಿನ ಬಾಟಲ್ನಲ್ಲಿ ವಿಶೇಷವಾಗಿ ಜನಪ್ರಿಯ ಬ್ರಾಂಡ್‌ಗಳಲ್ಲಿ ಅತಿಯಾದ ಮೈಕ್ರೋಪ್ಲಾಸ್ಟಿಕ್‌ಗಳಿವೆ ಎಂದು ತೋರಿಸುತ್ತದೆ. ಮೈಕ್ರೋಪ್ಲಾಸ್ಟಿಕ್‌ಗಳು 5 ಮಿಲಿಮೀಟರ್ ಅಥವಾ ಅದಕ್ಕಿಂತ ಚಿಕ್ಕದಾದ ಸಣ್ಣ ಪ್ಲಾಸ್ಟಿಕ್ ತುಣುಕುಗಳನ್ನು ಹೊಂದಿದೆ. ಶೇ 93 ಕ್ಕಿಂತ ಹೆಚ್ಚು ನೀರಿನ ಬಾಟಲ್ನಲ್ಲಿ ಮೈಕ್ರೋಪ್ಲಾಸ್ಟಿಕ್ ಕಂಡುಬರುತ್ತದೆ. ಮೈಕ್ರೋಪ್ಲಾಸ್ಟಿಕ್ ಸೇವನೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಆದರೆ ಇದು ನಮ್ಮ ಕಾಳಜಿ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:
Cashew: ಈ ಕೆಲವು ಆರೋಗ್ಯ ಸಮಸ್ಯೆ ಹೊಂದಿರುವವರು ಗೋಡಂಬಿಯನ್ನು ಸೇವಿಸಬಾರದು
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ಯೋಚಿಸಿ
Published On - 1:17 pm, Wed, 1 December 21