Fatima Sheikh Birthday : ಭಾರತದಲ್ಲಿ 190 ವರ್ಷಗಳ ಹಿಂದೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಮೊದಲ ಮುಸ್ಲಿಂ ಮಹಿಳೆ

Revolution : ಫಾತಿಮಾರವರು ಯಾವ ಕ್ರಾಂತಿಕಾರಿ ಗುರಿಯನ್ನು ತಲುಪಲು ಜೀವನಪರ್ಯಂತ ಶ್ರಮಿಸಿದರೋ ಆ ಗುರಿ ಇಂದಿಗೂ ಅಪೂರ್ಣವಾಗಿರುವುದು ವಿಷಾದನೀಯ. ಪ್ರಗತಿಪರ ವಿಚಾರಧಾರೆಯವರಿಗೂ ಇದೊಂದು ಸವಾಲಾಗಿಯೇ ಮುಂದುವರಿದಿದೆ. ಸಮಾಜದ ಹೊರಗೆ ನಿಂತು ಒಂದು ನೋಟ ಬೀರಿದರೆ ಎಲ್ಲವೂ ಬದಲಾದಂತೆ ಕಾಣುತ್ತದೆ. ಆದರೆ ಇಂದಿಗೂ ಭಾರತದ ಬಹುಸಂಖ್ಯಾತ ಜನರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗುಲಾಮರಾಗಿಯೇ ಮುಂದುವರಿದಿದ್ದಾರೆ.’ ಡಾ. ಕೆ. ಷರೀಫಾ

Fatima Sheikh Birthday : ಭಾರತದಲ್ಲಿ 190 ವರ್ಷಗಳ ಹಿಂದೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದ ಮೊದಲ ಮುಸ್ಲಿಂ ಮಹಿಳೆ
ಫಾತಿಮಾ ಶೇಖ್ ಮತ್ತು ಡಾ. ಕೆ. ಷರೀಫಾ
Follow us
ಶ್ರೀದೇವಿ ಕಳಸದ
|

Updated on: Jan 09, 2022 | 3:15 PM

Fatima Sheikh Birthday : ಫಾತಿಮಾ ಇಲ್ಲದೇ ಹೆಣ್ಣುಮಕ್ಕಳ, ಶಿಕ್ಕಣದ ಕನಸು ನನಸಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ತಿಳಿದವರು ಬಹಳಷ್ಟಿಲ್ಲ. ಹೆಣ್ಣುಮಕ್ಕಳ ಶಿಕ್ಷಣ ಕ್ರಾಂತಿಗೆ ಫಾತಿಮಾ ಶೇಖರ ಕೊಡುಗೆ ಅಪಾರ. ಅವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು. ಏಕೆಂದರೆ ಚರಿತ್ರೆಯು ವೈದಿಕಶಾಹಿ ಮತ್ತು ಪುರುಷಶಾಹಿಯಿಂದಲೇ ಬರೆಯಲ್ಪಟ್ಟಿದೆ. ಅದಕ್ಕೆ ಸ್ತ್ರೀಪರ ನೋಟದಿಂದ ನೋಡುವುದು ಬಹಳ ಅವಶ್ಯಕವಾಗಿದೆ. ಈ ವಿಷಯವನ್ನು ಹೇಗೆ ದಾಖಲಿಸುವುದು ಎಂಬುದು ಪ್ರಶ್ನೆಯೇ? ಆಧಾರಗಳನ್ನು ಎಲ್ಲಿ ಹುಡುಕುವುದು ಎಂಬ ಸಮಸ್ಯೆಯೇ? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ. ಚರಿತ್ರೆಯಲ್ಲಿ ಇಂದಿಗೂ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರು ಶೋಷಣೆಯಿಂದ ಹೊರಬರಲು ಅಕ್ಷರವೊಂದು ಅಸ್ತ್ರವಾಗಿದೆ. ಸಮಾಜದಲ್ಲಿ ಇಂದಿಗೂ ದಲಿತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ಅಕ್ಷರ ಜ್ಞಾನ ಇಲ್ಲದಿರುವುದೇ ಕಾರಣವಾಗಿದೆ. ಆದ್ದರಿಂದ ಶೋಷಣೆಯಿಂದ ಹೊರಬರಲು ಅವರಿಗೆ ಅಕ್ಷರವೇ ಅಸ್ತ್ರವಾಗುತ್ತದೆ. ಇಂದು ಮಹಿಳೆಯರು ಶಿಕ್ಷಣವಂತರಾಗುತ್ತಿರುವುದಕ್ಕೆ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆಯವರೇ ಕಾರಣವಾಗಿದ್ದಾರೆ. ಡಾ.ಕೆ.ಷರೀಫಾ, ಲೇಖಕಿ 

*

ಫಾತಿಮಾ ಶೇಖ್ ಅವರು ಮುಸ್ಲಿಂ ಸಮಾಜದಿಂದ ಬಂದ ಮೊದಲ ಶಿಕ್ಷಕಿ. ಇಂದು ಅವರ 191ನೇ ಜನ್ಮದಿನ.  ಭಾರತೀಯ ಇತಿಹಾಸದಲ್ಲಿ ಫಾತಿಮಾರಂತಹ ಅನೇಕ ಮಹನೀಯರು ಮರೆವಿಗೆ ಸಂದಿದ್ದಾರೆ. ಈಗಲಾದರೂ ಅವರ ಕುರಿತು ಸರಿಯಾದ ದಾಖಲಾತಿಗಳನ್ನು ಹೆಕ್ಕಿ ತೆಗೆಯಬೇಕಾಗಿದೆ. ಮನುಕುಲದ ಶಿಕ್ಷಣದ ಇತಿಹಾಸವನ್ನು ಜಾತಿವಾರು ಸಂಘಟಿಸಲು ಸಾಧ್ಯವಿಲ್ಲ. ಸಾವಿತ್ರಿಬಾಯಿಯ ಚರಿತ್ರೆಯನ್ನು ಅವರ ಜಾತಿಯವರೇ ಮತ್ತು ಫಾತಿಮಾ ಶೇಖರವರ ಚರಿತ್ರೆಯನ್ನು ಅವರವರ ಜಾತಿಯವರೇ ಸಂಘಟಿಸಬೇಕು, ಅವರೇ ಸಂಶೋಧನೆ ನಡೆಸಬೇಕೆಂದೇನೂ ಇಲ್ಲ. ಸಾವಿತ್ರಿಬಾಯಿಯನ್ನು ಮುಖ್ಯವಾಹಿನಿಗೆ ತಂದಂತೆ, ಫಾತೀಮಾರನ್ನೂ ಮುಖ್ಯವಾಹಿನಿಗೆ ತರುವುದು ಭಾರತೀಯರೆಲ್ಲರ ಜವಾಬ್ದಾರಿಯಾಗಿದೆ. ಇತಿಹಾಸದ ಪುಟಗಳಿಂದ ಮರೆವಿಗೆ ಸಂದವರು ಫಾತಿಮಾ ಶೇಖ್ ಆಗಿದ್ದಾರೆ. ಇವರು ಒಬ್ಬ ಮುಸ್ಲಿಂ ಸ್ತ್ರೀವಾದಿ ಶಿಕ್ಷಕಿಯಾಗಿದ್ದರು. ಇವರು ರಾಷ್ಟ್ರ ಕಂಡ ಮೊಟ್ಟ ಮೊದಲ ಮುಸ್ಲಿಂ ಸಮಾಜದಿಂದ ಬಂದ ಶಿಕ್ಷಕಿಯಾಗಿದ್ದರು. ಇವರು ಈ ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಸಾವಿತ್ರಿಬಾಯಿಯವರ ಗೆಳತಿ ಮತ್ತು ಸಹೋದ್ಯೋಗಿ ಹಾಗೂ ಅವರ ಆಶ್ರಯದಾತೆಯಾಗಿದ್ದರು.

ದೇಶ ಮರೆಯಬಾರದ ಅನರ್ಘ್ಯ ರತ್ನ ಫಾತಿಮಾ ಶೇಖರನ್ನು ಅಜ್ಞಾತಕ್ಕೆ ವೈದಿಕಶಾಹಿ ಕರಾಳ ಕೈಗಳು ಸೇರಿಸಿರಬಹುದಾಗಿದೆ. ಇಂತಹ ಅಮೂಲ್ಯ ಹೋರಾಟಗಾರ್ತಿಯ ಕುರಿತು ಅವರ ಬದುಕು ಹೋರಾಟಗಳ ಕುರಿತು ಈಗಲೂ ಸಂಶೋಧನೆ ಮತ್ತು ದಾಖಲೀಕರಣದ ಕೆಲಸ ನಡೆಯಬೇಕಾಗಿದೆ ಇಲ್ಲವಾದರೆ ಇವರು ಅಜ್ಞಾತಕ್ಕೆ ಸೇರುವ ಸಂಶಯವಿದೆ. ಅಂದಿನ ಕಾಲದಲ್ಲಿ ಮಹಿಳೆ ಮತ್ತು ದಲಿತರ ಶಿಕ್ಷಣಕ್ಕೆ ಸಾಮಾಜಿಕ ತಡೆಗೋಡೆಯೊಂದು ನಿರ್ಮಾಣವಾಗಿತ್ತು. ಇಂತಹ ಅಕ್ಷರ ವಂಚಿತರಿಗೆ ವಿದ್ಯೆಯ ಹಣತೆ ಬೆಳಗಿಸಿದ ಮಹಿಳೆ ಫಾತಿಮಾ ಶೇಖ್ ಮತ್ತವರ ಗೆಳತಿಯಾದ ಸಾವಿತ್ರಿಬಾಯಿ ಫುಲೆ. ಶಿಕ್ಷಣ ಕ್ಷೇತ್ರಕ್ಕೆ ಅದರಲ್ಲೂ ಮಹಿಳೆಯರ ಮತ್ತು ಶೂದ್ರಲೋಕಕ್ಕೆ ಅಕ್ಷರದ ಅರಿವನ್ನು ಮೂಡಿಸಿದವರು ಈ ಇಬ್ಬರು ಧೀಮಂತ ಮಹಿಳೆಯರು. ಇವರಿಬ್ಬರ ಕೊಡುಗೆಯನ್ನು ಇಂದಿನ ಶಿಕ್ಷತ ಲೋಕ ನೆನಪಿಸಿಕೊಳ್ಳಲೆಬೇಕು. ಮಹಿಳಾ ಶಿಕ್ಷಣಕ್ಕೆ ಫಾತಿಮಾ ಶೇಖ ನೀಡಿದ ಕೊಡುಗೆಯನ್ನು ನಾವು ಮರೆಯಬಾರದು. ಶಿಕ್ಷಣದ ಚರಿತ್ರೆಯಲ್ಲಿ ಗುರುವಿನ ಸ್ಮರಣೆ ಸಹಜವಾಗಿ ದಾಖಲಿಸಲಾಗುತ್ತದೆ. ಆದರೆ ಪುರುಷನ ಸ್ಥಾನದಲ್ಲಿ ಅಲ್ಲಿ ಮಹಿಳಾ ಗುರುವಿದ್ದರೆ ಅವಳನ್ನು ಗುರುತಿಸಿ ದಾಖಲಿಸುವುದೇ ಇಲ್ಲ. ಯಾವತ್ತೂ ಪುರುಷ ಪ್ರಧಾನ ಸಮಾಜ ಮಹಿಳೆಯರ ಸಮಾಜಮುಖಿ ಕೆಲಸಗಳನ್ನು ಗೌಣವಾಗಿಸುತ್ತಲೂ , ಅವಮಾನಿಸುತ್ತಲೂ ಬಂದಿದೆ.

ಫಾತಿಮಾ ಶೇಖ್ ಜನೇವರಿ 9, 1831ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡ ಅವರು ಸೋದರ ಉಸ್ಮಾನ್ ಶೇಖ್ ಅವರ ಆಶ್ರಯದಲ್ಲಿಯೇ ಬೆಳೆಯುತ್ತಾರೆ. ಅವರು ಆಧುನಿಕ ಭಾರತದ ಶಿಕ್ಷಣ ಕ್ಷೇತ್ರದ ಆರಂಭದ ದಿನಗಳಲ್ಲಿ ದಲಿತ, ಬಹುಜನ, ಮಹಿಳಾ ಸಮೂಹಕ್ಕೆ ಸ್ವತಂತ್ರವಾಗಿ ಶಿಕ್ಷಣ ನೀಡಲು ಮಹಾತ್ಮ ಜೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆಯೊಡನೆ ಸೇರಿ 170 ವರ್ಷಗಳಷ್ಟು ಹಿಂದೆಯೇ ಕ್ರಾಂತಿಕಾರಿ ಹೆಜ್ಜೆ ಇಟ್ಟ ಫಾತೀಮಾ ಶೇಖ್ ಮಹಾರಾಷ್ಟ್ರ ರಾಜ್ಯದ ಪೂನಾ ನಗರದಲ್ಲಿ ನೆಲೆ ನಿಂತವರು. ಆದರೆ ಅವರು ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ. ಇವರ ತಂದೆ ತಾಯಿಗಳು ಕೈಮಗ್ಗದ ಬಟ್ಟೆಗಳ ವ್ಯಾಪಾರ ಮಾಡುತ್ತಿದ್ದರು. ಇವರ ಕುಟುಂಬದವರು ಬಹಳ ಹಿಂದೆಯೇ ಉತ್ತರ ಪ್ರದೇಶದಿಂದ ವಲಸೆ ಬಂದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂಗೆ ಬಂದು ನೆಲೆಸುತ್ತಾರೆ. ಬಟ್ಟೆಯ ವ್ಯಾಪಾರಿಗಳಾದ ಇವರ ವ್ಯಾಪಾರದಲ್ಲಿ ಅನುಭವಿಸಿದ ಕಷ್ಟ ನಷ್ಟಗಳಿಂದಾಗಿ ಮತ್ತು ಆಗಿನ ಸಂದರ್ಭದಲ್ಲಿ ಉಂಟಾದ ರಾಜಕೀಯ ಅಶಾಂತಿಯ ಕಾರಣದಿಂದಾಗಿ ಅವರು ಪರಿವಾರ ಸಮೇತರಾಗಿ ಮಹಾರಾಷ್ಟ್ರದ ಮಾಲೆಗಾಂವ್‌ನಿಂದಲೂ ಹೊರಟು ಕುಟುಂಬವನ್ನು ಪೂನಾಕ್ಕೆ ತಮ್ಮ ನಿವಾಸವನ್ನು ಬದಲಿಸಿದರು. ಮಹಾರಾಷ್ಟ್ರದ ಪೂನಾ ನಗರದ ನಿವಾಸಿ. ಅವರ ಕುಟುಂಬ ಆಗ ಕೈಮಗ್ಗದ ಬಟ್ಟೆ ವ್ಯಾಪಾರ ಮಾಡುವ ವೃತ್ತಿಯಲ್ಲಿ ತೊಡಗಿದ್ದರು. “ಫಾತಿಮಾ ಶೇಖ್ ತನ್ನ ಬಾಲ್ಯದಲ್ಲಿಯೇ ತಂದೆ ತಾಯಿಗಳನ್ನು ಕಳೆದುಕೊಂಡರು. ಅಣ್ಣ ಉಸ್ಮಾನ್ ಶೇಖ್ ಅವರ ಆಸರೆಯಲ್ಲಿ ಬೆಳೆದು ದೊಡ್ಡವರಾದರು. ಈ ಅಣ್ಣ ತಂಗಿಗೆ ಪೂನಾದ ಗಂಜ್ ಪೇಟ್ ನಿವಾಸಿ ಮುನ್ಷಿ ಗಫ್ಫಾರ್ ಬೇಗ್‌ರವರು ದೊಡ್ಡ ಆಸರೆಯಾಗಿ ನಿಂತರು. ಹೀಗೆ ಪೂನಾ ಸೇರಿದ ಉಸ್ಮಾನ್ ಷೇಖ್, ಫಾತಿಮಾ ಷೇಕ್ ಅವರ ಕುಟುಂಬ ಪೂನಾದ ಮೋಮಿನಪುರದ ಗಂಜ್‌ಪೇಟ್ ಎಂಬಲ್ಲಿ ಮನೆ ಮಾಡಿಕೊಂಡು ನೆಲೆಸಿತು” ಎಂದು ಹೇಳುತ್ತಾರೆ. (ಡಾ: ಷಂಶುದ್ದಿನ್ ತಂಬೋಲಿಯವರು ಆಗಿನ ಮರಾಠಿ ತ್ರೈಮಾಸಿಕ  ಪತ್ರಿಕೆಯಾದ “ಮುಸ್ಲಿಂ ಸತ್ಯಶೋಧಕ್ ಪತ್ರಿಕೆ”ಯ ಪುಟ.43, ಜುಲೈ ಅಗಸ್ಟ್, 2020ರಲ್ಲಿ ಪ್ರಕಟಿತ ಲೇಖನ)

ಪಾಕಿಸ್ತಾನದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೋರಾಡಿದ ಮುಸ್ಲಿಂ ಸಮಾಜದಿಂದ ಬಂದ ಪಾಕಿಸ್ತಾನದ ಮೊದಲ ಹೋರಾಟಗಾರ್ತಿ ಮಲಾಲಾ. ಆದರೆ ಭಾರತದಲ್ಲಿ ಒಂದು ನೂರಾ ತೊಂಭತ್ತು ವರ್ಷಗಳಷ್ಟು ಹಿಂದೆಯೇ ಹೆಣ್ಣುಮಕ್ಕಳ ಮತ್ತು ಶೂದ್ರರ ಶಿಕ್ಷಣಕ್ಕಾಗಿ ಹೋರಾಟ ಮಾಡಿದ ಮೊದಲ ಮುಸ್ಲಿಂ ಮಹಿಳೆ ಫಾತಿಮಾ ಶೇಖ್.  ಫಾತಿಮಾರವರು ಯಾವ ಕ್ರಾಂತಿಕಾರಿ ಗುರಿಯನ್ನು ತಲುಪಲು ಜೀವನಪರ್ಯಂತ ಶ್ರಮಿಸಿದರೋ ಆ ಗುರಿ ಇಂದಿಗೂ ಅಪೂರ್ಣವಾಗಿರುವುದು ವಿಷಾದನೀಯ. ಪ್ರಗತಿಪರ ವಿಚಾರಧಾರೆಯವರಿಗೂ ಇದೊಂದು ಸವಾಲಾಗಿಯೇ ಮುಂದುವರಿದಿದೆ. ಸಮಾಜದ ಹೊರಗೆ ನಿಂತು ಒಂದು ನೋಟ ಬೀರಿದರೆ ಎಲ್ಲವೂ ಬದಲಾದಂತೆ ಕಾಣುತ್ತದೆ. ಆದರೆ ಇಂದಿಗೂ ಭಾರತದ ಬಹುಸಂಖ್ಯಾತ ಜನರು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಗುಲಾಮರಾಗಿಯೇ ಮುಂದುವರಿದಿದ್ದಾರೆ.

ಕಳೆದ ದಶಕದಲ್ಲಿ ಸಾವಿತ್ರಿ ಮತ್ತು ಜ್ಯೋತಿರಾವ್ ಫುಲೆಯವರ ಬಗ್ಗೆ ಸಂಶೋಧನೆ, ಹುಡುಕಾಟಗಳು ನಡೆದು ಅವರನ್ನು ಮುಖ್ಯ ವಾಹಿನಿಗೆ ತರಲಾಗಿದೆ. ಆದರೆ ಫಾತೀಮಾರ ಕೊಡುಗೆ, ಸಮಾಜ ಸುಧಾರಣೆಯ ಕೆಲಸ, ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆಗಳ ಬಗ್ಗೆ ಮೌನ ವಹಿಸಿರುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬುದನ್ನು ಯೋಚಿಸಬೇಕಿದೆ. ಭಾರತದ ಇತಿಹಾಸ ಇಂದು ಸಾವಿತ್ರಿಬಾಯಿ ಫುಲೆಯವರ ಒಡನಾಡಿ ಬಂಧು ಫಾತಿಮಾ ಶೇಖರವರನ್ನು ಯಾಕೆ ಮರೆತಿದ್ದಾರೆ. ಇತಿಹಾಸದಲ್ಲಿ ಅವರಿಗೆ ಏಕೆ ಶಿಕ್ಷಣದ ಇತಿಹಾಸದಲ್ಲಿ ದಾಖಲೆ ಸಿಗಲಿಲ್ಲ. ಯಾರಾದರೂ ಯಾಕೆ ಅವರ ಸಾಧನೆಗಳನ್ನು ಇಲ್ಲಿಯವರೆಗೆ ಯಾರೂ ನೆನಪಿಸಿಕೊಳ್ಳಲಿಲ್ಲ? ಸುಮಾರು 190  ವರ್ಷಗಳಷ್ಟು ಹಿಂದಿನ ಇತಿಹಾಸವನ್ನು ಈಗ ಹೇಗೆ ನೆನಪು ಮಾಡಿಕೊಳ್ಳುವುದು ಎಂಬುದು ಅವರ ಸಮಸ್ಯೆಯೇ?

ಫಾತಿಮಾ ಇಲ್ಲದೇ ಹೆಣ್ಣುಮಕ್ಕಳ, ಶಿಕ್ಕಣದ ಕನಸು ನನಸಾಗುತ್ತಿರಲಿಲ್ಲ. ಆದರೆ ಇದರ ಬಗ್ಗೆ ತಿಳಿದವರು ಬಹಳಷ್ಟಿಲ್ಲ. ಹೆಣ್ಣುಮಕ್ಕಳ ಶಿಕ್ಷಣ ಕ್ರಾಂತಿಗೆ ಫಾತಿಮಾ ಶೇಖರ ಕೊಡುಗೆ ಅಪಾರ. ಅವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕು. ಏಕೆಂದರೆ ಚರಿತ್ರೆಯು ವೈದಿಕಶಾಹಿ ಮತ್ತು ಪುರುಷಶಾಹಿಯಿಂದಲೇ ಬರೆಯಲ್ಪಟ್ಟಿದೆ. ಅದಕ್ಕೆ ಸ್ತ್ರೀಪರ ನೋಟದಿಂದ ನೋಡುವುದು ಬಹಳ ಅವಶ್ಯಕವಾಗಿದೆ. ಈ ವಿಷಯವನ್ನು ಹೇಗೆ ದಾಖಲಿಸುವುದು ಎಂಬುದು ಪ್ರಶ್ನೆಯೇ? ಆಧಾರಗಳನ್ನು ಎಲ್ಲಿ ಹುಡುಕುವುದು ಎಂಬ ಸಮಸ್ಯೆಯೇ? ಎಂಬೆಲ್ಲ ಪ್ರಶ್ನೆಗಳು ಏಳುತ್ತವೆ.

ಚರಿತ್ರೆಯಲ್ಲಿ ಇಂದಿಗೂ ಅಲ್ಪಸಂಖ್ಯಾತರು, ದಲಿತರು ಮತ್ತು ಮಹಿಳೆಯರು ಶೋಷಣೆಯಿಂದ ಹೊರಬರಲು ಅಕ್ಷರವೊಂದು ಅಸ್ತ್ರವಾಗಿದೆ. ಸಮಾಜದಲ್ಲಿ ಇಂದಿಗೂ ದಲಿತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಗೆ ಅಕ್ಷರ ಜ್ಞಾನ ಇಲ್ಲದಿರುವುದೇ ಕಾರಣವಾಗಿದೆ. ಆದ್ದರಿಂದ ಶೋಷಣೆಯಿಂದ ಹೊರಬರಲು ಅವರಿಗೆ ಅಕ್ಷರವೇ ಅಸ್ತ್ರವಾಗುತ್ತದೆ. ಇಂದು ಮಹಿಳೆಯರು ಶಿಕ್ಷಣವಂತರಾಗುತ್ತಿರುವುದಕ್ಕೆ ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆಯವರೇ ಕಾರಣವಾಗಿದ್ದಾರೆ.

India's first Muslim woman teacher and feminist icon Fatima Sheikh Birthday special article by Kannada Writer Dr. K. Sharifa

ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ ಫುಲೆ

ಭಾರತದಲ್ಲಿ ದಲಿತರ ಮತ್ತು ಮಹಿಳೆಯರ ಶೈಕ್ಷಣಿಕ ಕ್ರಾಂತಿಗೆ ಫುಲೆ ದಂಪತಿಗಳೊಂದಿಗೆ ಕೈಜೋಡಿಸಿದ ಇನ್ನೊಂದು ಹೆಸರೇ ಫಾತಿಮಾ ಶೇಖ್. ಸಾವಿತ್ರಬಾಯಿ ಫುಲೆ ಮತ್ತು ಜ್ಯೋತಿರಾವ್ ಫುಲೆ ಅವರೊಂದಿಗೆ ಹೆಜ್ಜೆ ಹೆಜ್ಜೆಗೂ ಸಹಾಯಕ್ಕೆ ನಿಂತವರು ಫಾತಿಮಾ ಶೇಕ್. ಅವರು ಫುಲೆಯವರ ಭೀಡೆವಾಡಾ ಶಾಲೆಯಲ್ಲಿ ಹುಡುಗಿಯರಿಗೆ ಪಾಠ ಮಾಡುತ್ತಿದ್ದರು. ಮನೆಮನೆಗೆ ತೆರಳಿ ಕುಟುಂಬಗಳನ್ನು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸಲು ಪ್ರೋತ್ಸಾಹಿಸುತ್ತಿದ್ದರು. ಶಾಲೆಯ ಎಲ್ಲ ವ್ಯವಹಾರಗಳನ್ನು ನಿರ್ವಹಿಸುತ್ತಿದ್ದರು. ಆಕೆಯ ಕೊಡುಗೆ ಇಲ್ಲದಿದ್ದರೆ ಇಡೀ ಬಾಲಕಿಯರ ಶಾಲೆಯ ಯೋಜನೆಗಳೇ ರೂಪುಗೊಳ್ಳುತ್ತಿರಲಿಲ್ಲ. ಆದರೂ ಭಾರತದ ಇತಿಹಾಸವು ಫಾತಿಮಾ ಶೇಖ್ ಅವರನ್ನು ಕಡೆಗಣಿಸಿರುವುದು ಶೋಚನೀಯ! ಈಗಲಾದರೂ ಸರ್ಕಾರ ಇವರ ಬಗ್ಗೆ ನಡೆಯುವ ಸಂಶೋಧನೆಗಳನ್ನು ಪ್ರೋತ್ಸಾಹಿಸಬೇಕಿದೆ.

ಶಿಕ್ಷಣ ವಲಯ ಸಾವಿತ್ರಿಬಾಯಿ ಫುಲೆಯವರನ್ನು ನೆನಪಿಸಿಕೊಳ್ಳುತ್ತಾರೆ ಗೌರವಿಸುತ್ತಾರೆ. ಅವರನ್ನು ವಿಸ್ಮೃತಿಯಿಂದ ಹೊರತರಲು ಸುಮಾರು 170 ವರ್ಷಗಳೇ ಬೇಕಾದವು. ಅದೇ ಸಂದರ್ಭದಲ್ಲಿ ಫಾತಿಮಾ ಶೇಖರವರು ಕೂಡ ಮಹಿಳಾ ಶಿಕ್ಷಣಕ್ಕಾಗಿ ಬಹಳಷ್ಟು ಶ್ರಮವಹಿಸಿದ್ದಾರೆ. ಆದರೂ ಅವರನ್ನು ಯಾಕೆ ಮರೆವಿಗೆ ಸರಿಸಿದ್ದಾರೆ? ಎಂಬುದು ಲೋಕಕ್ಕೆ ಕಾಡುವ ಪ್ರಶ್ನೆಯಾಗಿದೆ. ಸಾವಿತ್ರಿಬಾಯಿ ಫುಲೆಯವರಿಗೆ ಕಳೆದ ವರ್ಷ ಗೂಗಲ್ ಸಹ ಅವರಿಗೆ ಡೂಡಲ್ ಮೂಲಕ ಅವರಿಗೆ ಗೌರವಿಸಿತ್ತು. ಪೂನಾ ವಿಶ್ವವಿದ್ಯಾಲಯವನ್ನು ‘ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲಾಗಿದೆ ಮತ್ತು ಮಹಾರಾಷ್ಟ್ರ ಸರ್ಕಾರವು ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿದೆ. ಅವರ ಜೀವನ ಮತ್ತು ಕೃತಿಗಳನ್ನು ಆಧರಿಸಿ ಟಿ.ವಿ ಸರಣಿಯೂ ಬಂದಿತು. ಅವರ ಹೆಸರಿನ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಸಾವಿತ್ರಿಬಾಯಿ ಫುಲೆಯವರ ಹೋರಾಟ ಮತ್ತು ಸಾಧನೆಯನ್ನು ನೆನಪಿಸಿಕೊಳ್ಳಲು ಒಂದೂವರೆ ಶತಮಾನಗಳಷ್ಟು ಸಮಯ ತೆಗೆದುಕೊಂಡರೂ ಫುಲೆ ದಂಪತಿ ಈಗ ಸಾರ್ವಜನಿಕ ವಲಯದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗಲಾದರೂ ಅವರಿಗೆ ಸರಿಯಾದ ಮನ್ನಣೆ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ.

ದೇಶದ ಚರಿತ್ರೆಯಿಂದ ಬಹಳಷ್ಟು ಪ್ರಮುಖವಾದ ವಿಷಯಗಳು ಕಾಣೆಯಾಗುತ್ತವೆ. ಫಾತಿಮಾರವರ ಸಮಕಾಲೀನರಾದ ಸಾವಿತ್ರಿಬಾಯಿ ಫುಲೆಯವರ ಬಗ್ಗೆ ಅನೇಕ ಕಡೆ ದಾಖಲಿಸಲಾಗುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಅವರ ಕುರಿತು ಪಠ್ಯಗಳಾಗುತ್ತಿವೆ. ಅವರ ಹೆಸರಿನಲ್ಲಿ ಅನೇಕ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಪಠ್ಯಗಳಾಗುವುದರೊಂದಿಗೆ ಸಂಶೋಧನೆಗಳು ನಡೆಯುತ್ತಿವೆ, ಅಧ್ಯಯನಗಳು ನಡೆಯುತ್ತಿವೆ. ಪುಣೆಯ ವಿಶ್ವವಿದ್ಯಾಲಯಕ್ಕೆ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡಿ ಸಾವಿತ್ರಿಬಾಯಿ ಫುಲೆಯವರಿಗೆ ಗೌರವಿಸಲಾಗಿದೆ. ಅನೇಕ ರಾಜ್ಯ ಸರ್ಕಾರಗಳು ಸಾವಿತ್ರಿಬಾಯಿ ಫುಲೆಯವರ ಹೆಸರಿನ ಪ್ರಶಸ್ತಿ, ಪುರಸ್ಕಾರಗಳನ್ನು ಘೋಷಣೆ ಮಾಡಿದೆ.. ಅವರ ಬದುಕು ಸಾಧನೆಗಳ ಬಗ್ಗೆ ಟಿ.ವಿ. ಸೀರಿಯಲ್‌ಗಳನ್ನು ಮಾಡಲಾಗಿದೆ.

ಸಾವಿತ್ರಿಬಾಯಿ ಫುಲೆಯವರ ಸಂಗಾತಿಯಾಗಿ ಶಿಕ್ಷಕಿಯೊಬ್ಬರಿದ್ದರು. ಹಗಲು ರಾತ್ರಿಯೆನ್ನದೇ ಸಾವಿತ್ರಿಬಾಯಿ ಫುಲೆಯವರೊಂದಿಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ದಲಿತ ಮತ್ತು ಮಹಿಳೆಯರ ಶಿಕ್ಷಣ ಸಂಸ್ಥೆಯ ಜವಾಬ್ಬಾರಿಯನ್ನು ಹೊತ್ತು ನಡೆಸಿದ್ದಾರೆ. ಅಷ್ಟೇ ಅಲ್ಲದೇ ಫಾತಿಮಾ ಶೇಖರವರು ಸಾವಿತ್ರಿಬಾಯಿಯವರೊಂದಿಗೆ ಅಹ್ಮದ್‌ನಗರದಲ್ಲಿ ನಡೆದ ಶಿಕ್ಷಕಿಯರ ತರಬೇತಿಗೂ ಹೋಗಿ ಬರುತ್ತಾರೆ. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖರವರಿಬ್ಬರೂ ಒಟ್ಟಾಗಿ ಸೇರಿ ದಲಿತರು ಮತ್ತು ಮಹಿಳೆಯರಿಗಾಗಿ ಶಾಲೆಯನ್ನು ತೆಗೆದು ಈ ಇಬ್ಬರೂ ಶಿಕ್ಷಕಿಯರು ಜೊತೆಯಾಗಿ ಕೆಲಸ ಮಾಡಿದ್ದಾರೆ. ಸಾವಿತ್ರಿಬಾಯಿ ಫುಲೆಯವರಿಗೆ ಸುಮಾರು 170 ವರ್ಷಗಳ ಬಳಿಕವಾದರೂ ಚರಿತ್ರೆಯಲ್ಲಿ ಪ್ರವೇಶ ಸಿಗುತ್ತದೆ. ಆದರೆ 190 ವರ್ಷಗಳ ಬಳಿಕವೂ ಫಾತಿಮಾ ಶೇಖರವರ ಕುರಿತು ಯಾವುದೇ ಸಂಶೋಧನೆ, ಪ್ರಶಸ್ತಿ ಪುರಸ್ಕಾರಗಳು, ಚರ್ಚೆ, ಸಂಕೀರ್ಣಗಳು, ಮಾಹಿತಿಗಳು ದಾಖಲೆಯಾಗುತ್ತಿಲ್ಲ ಇದು ಇತಿಹಾಸದ ದುರಂತ.

ಫಾತಿಮಾ ಶೇಖರವರ ಕೊಡುಗೆಯಿಲ್ಲದಿದ್ದರೆ ಇಂದಿಗೂ ಮಹಿಳಾ ಮತ್ತು ದಲಿತ ಲೋಕಗಳು ಕತ್ತಲಲ್ಲಿ ಕೊಳೆಯಬೇಕಾಗುತ್ತಿತ್ತು. ಮಹಿಳಾ ಶಿಕ್ಷಣಕ್ಕೆ ಫಾತಿಮಾ ಶೇಖರ ಕೊಡುಗೆ ಬಗ್ಗೆ ಎಷ್ಟು ಜನರಿಗೆ ಮಾಹಿತಿ ಇದೆ? ಎಂಬುದು ಮುಖ್ಯವಾದ ವಿಷಯ. ಸಾವಿತ್ರಿಬಾಯಿ ಮೊದಲ ಶಿಕ್ಷಕಿಯಾಗುತ್ತಾರೆ. ಅದೇ ಸಮಯದಲ್ಲಿ ಫಾತಿಮಾ ಶೇಖರವರು ಮುಸ್ಲಿಂ ಸಮಾಜದಿಂದ ಬಂದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ. ಆದರೆ ಚರಿತ್ರೆ ಸಾವಿತ್ರಿಬಾಯಿಯವರನ್ನು ಗುರುತಿಸಿದೆ. ಆದರೆ ಫಾತಿಮಾ ಶೇಖರವರ ಬಗ್ಗೆ ದಾಖಲಿಸುವುದನ್ನು ಮರೆತಿದ್ದಾರೆ. ಇಂತಹ ಮರೆವಿಗೆ ಸಂದವರ ಪರಿವಿಡಿಯಲ್ಲಿ ಬಂದವರೇ ಫಾತಿಮಾ ಶೇಖ್‌ರವರು. ಫಾತಿಮಾ ಶೇಖರವರ ಪರಿಶ್ರಮವನ್ನು ಸಾವಿತ್ರಿಬಾಯಿಯವರು ತಮ್ಮ ಪತ್ರದಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ. ಸಾವಿತ್ರಿಯ ಎಲ್ಲ ಜವಾಬ್ದಾರಿಗಳನ್ನು ಫಾತಿಮಾರವರು ಬಹಳ ಸಮರ್ಥವಾಗಿ ನಿಭಾಯಿಸುತ್ತಿರುತ್ತಾರೆ.

ಈ ಇಬ್ಬರೂ ಗೆಳತಿಯರು ತಮ್ಮ ಕೆಲಸದ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಸಾವಿತ್ರಿ ತನ್ನ ಪತಿ ಜ್ಯೋತಿಭಾ ಫುಲೆಯವರಿಗೆ ಹಲವಾರು ಪತ್ರಗಳನ್ನು ಬರೆದಿರುತ್ತಾರೆ. ಅವರಿಬ್ಬರ ನಡುವೆ ಬಹಳಷ್ಟು ಪತ್ರ ವ್ಯವಹಾರಗಳು ನಡೆದಿರಬಹುದಾದರೂ ಅವು ಈಗ ಲಭ್ಯವಾಗುತ್ತಿಲ್ಲದೇ ಇರುವುದು ವಿಷಾದಕರ. ಸಾವಿತ್ರಿಬಾಯಿಯವರ ಕೇವಲ ಮೂರು ಪತ್ರಗಳನ್ನು ಮಾತ್ರ ಇಂದು ಲಭ್ಯವಾಗಿವೆ. ಸಾವಿತ್ರಿಬಾಯಿ 1956 ರಲ್ಲಿ ತಮ್ಮ ಅನಾರೋಗ್ಯದ ಕಾರಣದಿಂದ ತವರಿಗೆ ಹೋಗಿರುತ್ತಾರೆ. ಆಗ ಅವರು ತಮ್ಮ ಹೆಣ್ಣುಮಕ್ಕಳ ಮತ್ತು ದಲಿತ ಮಕ್ಕಳ ಶಾಲೆಗಳ ಜವಾಬ್ದಾರಿಯನ್ನು ಫಾತಿಮಾ ಶೇಖರವರಿಗೆ ನೀಡಿ ಹೋಗಿರುತ್ತಾರೆ. ಅದನ್ನು ಅವರು ಅಕ್ಟೋಬರ್ 1856ರಲ್ಲಿ ತಮ್ಮ ಪತಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾರೆ. “ನಾನು ಅಲ್ಲಿ ಇಲ್ಲದೇ ಇರುವುದರಿಂದ ಫಾತಿಮಾಳಿಗೆ ಎಷ್ಟು ತೊಂದರೆಯಾಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಆದರೆ ಫಾತಿಮ ಅದನ್ನು ಅರ್ಥಮಾಡಿಕೊಳ್ಳುತ್ತಾಳೆ ಹಾಗೂ ಕೊರಗುವುದಿಲ್ಲ ಎನ್ನುವ ಭರವಸೆ ನನಗಿದೆ”. ಹೀಗೆ ತನ್ನ ಗೈರು ಹಾಜರಿಯಿಂದ ಫಾತಿಮಾ ಶೇಖ್ ಅವರಿಗೆ ತೊಂದರೆಯಾಗಿರಬಹುದೆಂಬ ಪ್ರಸ್ತಾಪ ಬರುತ್ತದೆ. ಹಾಗೂ ತಾನು ಆದಷ್ಟು ಬೇಗ ಗುಣಮುಖಳಾಗಿ ವಾಪಸ್ಸು ಕೆಲಸಕ್ಕೆ ಬರುವುದಾಗಿ ಬರೆಯಲಾಗಿದೆ.

ಸರ್ ಸೈಯದ್ ಅಹ್ಮದ್ ಖಾನ್‌ರವರು ‘ಮಹಮ್ಮದೀಯರ ಆಂಗ್ಲೋ ಓರಿಯಂಟಲ್ ಕಾಲೇಜ’ನ್ನು ೧೮೭೫ರಲ್ಲಿ ಸ್ಥಾಪಿಸಿದರು. ಮುಂದಿನ ಕಾಲದಲ್ಲಿ ಇದು ಪ್ರಖ್ಯಾತ ಅಲಿಗಢ ಮುಸ್ಲಿಂ ಯುನಿವರ್ಸಿಟಿಯಾಗಿ ಪರಿವರ್ತನೆಯಾಯಿತು. ಸರಕಾರವು 2014ರಲ್ಲಿ ಬಾಲಭಾರತಿ ಮಹಾರಾಷ್ಟ್ರ ಸ್ಟೇಟ್ ಬ್ಯೂರೋನವರು ಸರ್ ಸೈಯ್ಯದ್ ಅಹ್ಮದ್ ಖಾನ್, ಜಾಕೀರ್ ಹುಸೇನ್, ಅಬ್ದುಲ್ ಕಲಾಂ ಅಜಾದ್‌ರಂತೆ ಫಾತಿಮಾ ಶೇಖ್ ಅವರ ಸಂಕ್ಷಿಪ್ತ ಪರಿಚಯ ನೀಡುವ ಪಠ್ಯವನ್ನು ಉರ್ದು ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿದೆ. ಫಾತಿಮಾ ಶೇಖರವರ ಬಗ್ಗೆ ದಾಖಲಿಸುವುದು ಬಹಳ ಸಂಕೀರ್ಣ ವಿಷಯವಾಗಿದೆ ನಿಜ. ಏಕೆಂದರೆ ಅವರು ಇತಿಹಾಸದಲ್ಲಿ ಕಳೆದು ಹೋದ ಅವರನ್ನು ಮತ್ತೇ ಸ್ಥಾಪಿಸುವಂತಹ ಮಹತ್ವದ ಕಾರ್ಯ ಇನ್ನು ಮುಂದಾದರೂ ನಡೆಯಬೇಕಿದೆ. ಅವರಂತಹ ಅನೇಕ ಸಾಧಕ ಶಿಕ್ಷಕಿ ಮಹಿಳೆಯರಿದ್ದಾರೆ ಅವರ ಚರಿತ್ರೆ, ಬದುಕು, ಸಾಧನೆಗಳ ಬಗ್ಗೆಯೂ ಸಂಶೋಧನೆ ನಡೆಯುವುದು ಅವಶ್ಯಕವಾಗಿದೆ.

ಇದನ್ನೂ ಓದಿ : Fatima Sheikh ಮುಸ್ಲಿಂ ಸಮುದಾಯದ ಮೊದಲ ಶಿಕ್ಷಕಿ ಫಾತಿಮಾ ಶೇಖ್​​ಗೆ ಗೂಗಲ್ ಡೂಡಲ್ ಗೌರವ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್