Forest Stories: ಕಾಡೇ ಕಾಡತಾವ ಕಾಡ; ಅಲ್ಲಿ ಹೊಗೆ ಕಾಣಿಸುತ್ತಿದೆ ಎಂದರೆ ಅವರಲ್ಲಿ ಇಲ್ಲವೆಂದರ್ಥ
Operation Mountain : ಬೆಳಗಿನ ಜಾವದ ನಾಲ್ಕರ ಸಮಯ. ಎಲ್ಲರೂ ಏದುಸಿರು ಬಿಡುತ್ತಿದ್ದರು. ಸುಸ್ತಾಗಿದ್ದರು. ಎಸಿಎಫ್ ಪಕ್ಕದಲ್ಲಿದ್ದ ಸಂತೋಷ್ ನೈಟ್ ವಿಷನ್ ಬೈನಾಕುಲರ್ ತೆಗೆದು ಮುಂದಿನ ಬಯಲು ಪ್ರದೇಶವನ್ನು ನಿಧಾನಕ್ಕೆ ಪರಿಶೀಲಿಸಿದ.
ಕಾಡೇ ಕಾಡತಾವ ಕಾಡ | Kaade Kaadataava Kaada : ಸರಿ, ಹೋಗು ನಾನೇಳಿರೋದ್ನೆಲ್ಲಾ ತಗೋ ಅಂದರು. ಹತ್ತು ನಿಮಿಷ ಕಳೆದು ಡ್ರೈವರ್ ಬಂದ. ಸರ್ ಎಲ್ಲಾ ತಗಂಡಿದಿನಿ. ಬನ್ಸ್ ಕೂಡಾ ತಗಂಡೆ ಸರ್. ಆ ಮಲಯಾಳೀ ಡ್ರೈವರ್ ಹೇಳಿದ, ಅದಕ್ಕೆ ತಗಂಡೆ ಅಂದ. ಯಾರದು ಮಲಯಾಳೀ ಡ್ರೈವರ್? ಕೇಳಿದರು ಎಸಿಎಪ್. ಅದೇ ಸಾರ್, ನಮ್ ಡ್ರೈವರ್ ರಿಟೈರ್ಡ್ ಆದ್ರಲ್ಲಾ? ಆಗ ನಾನೇ ತಗಂಡೆ ಟೆಂಪರರಿಯಾಗಿ ಅಂದರು ರೇಂಜರ್. ಹುಂ ಸರಿ ಅಂದರು ಎಸಿಎಫ್. ನಂತರದ ಅರ್ದ ಗಂಟೆಯಲ್ಲಿ ಎಲ್ಲಾ ಜೀಪುಗಳು ಅದೊಂದು ಕಾಡಿನ ಮದ್ಯ ತಲುಪಿದವು. ಎಲ್ಲರೂ ಕೆಳಗಿಳಿಯುತ್ತಿದ್ದಂತೇ, ಎಸಿಎಫ್ ಎಲ್ಲರನ್ನೂ ಒಂದು ಕಡೆ ಸೇರಿಸಿ, ಮಾತು ಶುರು ಮಾಡಿದರು. ನೋಡ್ರಪ್ಪಾ, ನಾವು ಈಗ ಇಲ್ಲಿಂದ 7 ಕಿಮೀ ಆ ಬೆಟ್ಟದ ಕಡೆಗೆ ನಡೀಬೇಕು, ನಂತರ ಒಂದು ಬಯಲು ಪ್ರದೇಶ, ಅದನ್ನು ದಾಟಿದ ನಂತರ ಬೆಟ್ಟದ ಇಳಿಜಾರು ಸಿಗುತ್ತದೆ. ಅದೇ ನಮ್ಮ ಕಾರ್ಯಾಚರಣೆ ಪ್ರದೇಶ. ಎಲ್ಲರೂ ಹುಷಾರಾಗಿ ನಡೀಬೇಕು. ಟಾರ್ಚ್ ಬೆಳಕನ್ನು ನೆಲದ ಕಡೆಗೆ ಬಳಸಿ, ಅಡ್ಜಸ್ಟ್ ಮಾಡಿಕೊಂಡು ನಡೀಬೇಕು, ಬೆಳಕು ಮೇಲೆ ಆಕಾಶದ ಕಡೆಗೆ ಬಿಡಬಾರದು. ವಿ.ಕೆ. ವಿನೋದ್ ಕುಮಾರ್ (V. K. Vinod Kumar)
*
(ಕಥೆ 5, ಭಾಗ 3)
ದಾರೀಲಿ ಕರಡಿ ಅಥವಾ ಚಿರತೆ ಸಿಗಬಹುದು, ಹೆದರುವ ಅವಶ್ಯಕತೆ ಇಲ್ಲ, ಜೋರಾಗಿ ಕಿರುಚಿ ಹೆದರಿಸಿ, ಆಮೇಲೆ ಕೋವಿ ತೋರಿಸಿ ಗಾಳಿಗೆ ಫೈರ್ ಮಾಡಿ, ಗೊತ್ತಾಯ್ತಲ್ಲಾ? ಅಂದರು ಎಸಿಎಪ್. ಆಯ್ತು ಸಾರ್ ಅಂದು ಎಲ್ಲರೂ ನಡೆಯಲು ಶುರು ಮಾಡಿದರು. ಅದೊಂದು ದಟ್ಟವಾದ ಮೀಸಲು ಅರಣ್ಯ ಪ್ರದೇಶ. ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿತ್ತು. ಕಲ್ಲುಗಳಿಂದ ಕೂಡಿದ ಸಣ್ಣ ಕಾಲುದಾರಿ ಅದು. ಮಧ್ಯದಲ್ಲಿ ಮಳೆ ನೀರು ಹರಿದು ಕೊರಕಲು ಸೃಷ್ಟಿಯಾಗಿತ್ತು. ಟಾರ್ಚ್ ಬಿಡುತ್ತಾ ಬೆಳಕು ಮಾಡಿಕೊಂಡು ವೇಗವಾಗಿ ನಡೆಯತೊಡಗಿದರು. ಗುಂಪಿನ ಮುಂದೆ ಖುದ್ದು ಎಸಿಎಫ್ ನಡೆಯುತ್ತಿದ್ದರು. ಅವರ ಈ ಮುಂದಾಳತ್ವದ ಗುಣದಿಂದಲೇ ಇಷ್ಟು ಸಿಬ್ಬಂದಿಗಳು ಈ ಕಠಿಣವಾದ ಆಪರೇಷನ್ ಗೆ ಪ್ರೀತಿಯಿಂದ ಕೈ ಜೋಡಿಸಿದ್ದರು.
ದಿನಾ ವಾಕಿಂಗ್ ಮಾಡಿ ಅಭ್ಯಾಸ ಇದ್ದ ಅವರಿಗೆ ನಡೆಯುವುದು ಬಹಳಾ ಸುಲಭವಾಗಿತ್ತು. ಅವರ ನಡೆಯುವ ವೇಗಕ್ಕೆ ಹೊಂದಿಕೊಂಡು ನಡೆಯುವುದು ಇತರೆ ಸಿಬ್ಬಂದಿಗೆ ಕಷ್ಟವಾಗುತ್ತಿತ್ತು. ಅರ್ಧದಾರಿ ಕಳೆಯುತ್ತಿದ್ದಂತೇ ಕೆಲ ಸಿಬ್ಬಂದಿ ನಡೆಯಲಾಗದೇ ಅಲ್ಲೇ ಕುಳಿತರು. ಕೆಲವರು ಹೇಗೋ ಏದುಸಿರು ಬಿಡುತ್ತಾ ಮಧ್ಯದಲ್ಲಿ ಕೊರಕಲಿಗೆ ಕಾಲು ಸಿಕ್ಕಿಸಿಕೊಂಡು ನರಳುತ್ತಾ ನಡೆದರು.
ಭಾಗ 1 : Forest Stories: ಕಾಡೇಕಾಡತಾವ ಕಾಡ; ‘ಆಪರೇಷನ್ ಮೌಂಟೇನ್’
ಬಹಳಾ ಕಷ್ಟಕರವಾದ ದಾರಿ ಅದು. ಆದರೂ ಎರಡು ಗಂಟೆಗಳ ಕಾಲ ನಡೆದು ಎಲ್ಲರೂ ಬೆಟ್ಟದ ತುದಿಗೆ ತಲುಪಿದರು. ಬೆಳಗಿನ ಜಾವದ ನಾಲ್ಕರ ಸಮಯ. ಎಲ್ಲರೂ ಏದುಸಿರು ಬಿಡುತ್ತಿದ್ದರು. ಸುಸ್ತಾಗಿದ್ದರು. ಎಸಿಎಫ್ ಪಕ್ಕದಲ್ಲಿದ್ದ ಸಂತೋಷ್ ನೈಟ್ ವಿಷನ್ ಬೈನಾಕುಲರ್ ತೆಗೆದು ಮುಂದಿನ ಬಯಲು ಪ್ರದೇಶವನ್ನು ನಿಧಾನಕ್ಕೆ ಪರಿಶೀಲಿಸಿದ. ದೂರದಲ್ಲಿ ಬೆಟ್ಟದ ಕೆಳಗಿನ ಪ್ರದೇಶದಿಂದ ಹೊಗೆ ಮೇಲೇಳುತ್ತಿದ್ದುದು ಕಾಣುತ್ತಿತ್ತು.
ಸರ್, ದೂರದಲ್ಲಿ ಹೊಗೆ ಕಾಣ್ತಿದೆ ಅಂದ. ಹೊಗೆಯಾ? ಅಂದರೆ ಅವ್ರು ಅಲ್ಲೆ ಇರುವುದು ಕನ್ಫರ್ಮ್ ಅಲ್ವಾ? ಅಂದರು. ಇಲ್ಲಾ ಸರ್, ನಂಗ್ಯಾಕೋ ಅನುಮಾನ, ಅವ್ರು ಅಲ್ಲೇ ಇರುವುದೇ ಆದಲ್ಲಿ ಹೊಗೆ ಕಾಣಿಸಿ ಅವರ ಇರುವಿಕೆ ತೋರ್ಪಡಿಸರು. ಸಮ್ಥಿಂಗ್ ಈಸ್ ಮಿಸ್ಸಿಂಗ್ ಸಾರ್ ಅಂದ ಮನು. ಹೌದು ಸಾರ್, ನಂಗೂ ಯಾಕೋ ಅನುಮಾನ ಅಂದರು ರೇಂಜರ್. ಎಸಿಎಫ್ ಮುಖದಲ್ಲಿ ಏನೋ ಅಸಮಾಧಾನ, ಅನುಮಾನ ಒಟ್ಟಿಗೇ ಕಾಣಿಸಿತು. ಸಂತೋಷನೆಡೆಗೆ ತಿರುಗಿ, ಸರಿ, ಈಗ ಟೀಂ ಫಾರ್ಮ್ ಮಾಡಿ ಎಲ್ಲರೂ ಏರಿಯಾ ಕವರ್ ಮಾಡೋಣ ಅಂದರು. 5 ಜನರಂತೆ ಒಂದೊಂದು ತಂಡ ಮಾಡಿ ಒಂದೊಂದು ಕಡೆಯಿಂದ ಬಯಲು ಪ್ರದೇಶ ದಾಟಿ ಬೆಟ್ಟದ ಅಂಚಿಗೆ ತಲುಪಿ ಅಲ್ಲಿಂದ ಬೇರೆ ಬೇರೆ ಕಡೆಯಿಂದ ಕೆಳಗಿಳಿಯೋಣ ಅಂದರು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 2 : Forest Stories: ಕಾಡೇ ಕಾಡತಾವ ಕಾಡ; ರಾತ್ರಿ ಸಣ್ಣ ಬೆಳಕಿನ ಕಿರಣ ಕಂಡರೂ ಕಳ್ಳರು ಹುಷಾರಾಗಿಬಿಡ್ತಾರೆ
ಈ ಕಥೆಯ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/kaade-kaadataava-kaada
Published On - 10:49 am, Sat, 12 March 22