Literature: ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ

Dino Buzzati: ಕೌಂಟರಿನಲ್ಲಿ ಈ ಸಂಪುಟಕ್ಕೆ ಬೆಲೆ ತೆತ್ತು ಈಚೆ ಬರುವಾಗ ಏನನ್ನೋ ಕದ್ದುಕೊಂಡು ಬಂದ ಭಾವನೆ. ಈಗಲೂ ನನಗೆ ಆ ಭಾವನೆಯಿಂದ ಪೂರ್ತಿ ಹೊರಬರುವುದು ಸಾಧ್ಯವಾಗಿಲ್ಲ.

Literature: ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ
ಇಟಾಲಿಯನ್ ಲೇಖಕ ದೀನೊ ಬುತ್ಸಾತಿ ಮತ್ತು ಕನ್ನಡದ ವಿಮರ್ಶಕ ನರೇಂದ್ರ ಪೈ
Follow us
ಶ್ರೀದೇವಿ ಕಳಸದ
|

Updated on:Mar 15, 2022 | 3:56 PM

ದೀನೊ ಬುತ್ಸಾತಿ | Dino Buzzati 1906-1972): ಆಮೇಲೊಂದು ದಿನ, Nebraskaದ Omahaಕ್ಕೆ ಸಾಹಿತ್ಯಿಕ ಸಮಾರಂಭದಲ್ಲಿ ಭಾಗವಹಿಸಲು ಭೇಟಿಕೊಟ್ಟಿದ್ದ ಸಂದರ್ಭದಲ್ಲಿ Jackson Street Booksellers ನಲ್ಲಿ ಹೀಗೇ ಪುಸ್ತಕಗಳನ್ನು ನೋಡುತ್ತಿದ್ದಾಗ, ಅಲ್ಲಿತ್ತು ಅದು! ಅಚ್ಚಕೆಂಪು ಹೊದಿಕೆಯ, ಅದರ ಹಿಡಿಕೆಭಾಗದ ಉದ್ದಕ್ಕೂ ಕಪ್ಪುಬಿಳುಪು ಅಕ್ಷರಗಳಲ್ಲಿ ಹೆಸರು ಬರೆದುಕೊಂಡಿದ್ದ, ಉಳಿದ ಹಲವಾರು ಅಪರೂಪದ ಮತ್ತು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಅಕ್ಷರಮಾಲೆಯ ಅನುಸಾರ ಕ್ರಮಬದ್ಧವಾಗಿ ಜೋಡಿಸಿಡಲಾದ ಶೆಲ್ಫ್‌ನಲ್ಲಿ ‘ಮೂಲಬೆಲೆಯ ಅರ್ಧ ಬೆಲೆಗೆ, ಅಂದರೆ ಐದು ಡಾಲರಿಗೆ’ ಎಂದು ಹೇಳುತ್ತ ಕುಳಿತಿತ್ತು! ನನ್ನ ಬದುಕಿನಲ್ಲೇ ಇದು ಅತ್ಯಂತ ಸಂಭ್ರಮಾತಿರೇಕದ ಅಚ್ಚರಿ ಕೊಟ್ಟ ಏಕೈಕ ಪುಸ್ತಕದಂಗಡಿಯಾಗಿ ನೆನಪಿನಲ್ಲುಳಿದಿದೆ. ಕೌಂಟರಿನಲ್ಲಿ ಈ ಸಂಪುಟಕ್ಕೆ ಬೆಲೆ ತೆತ್ತು ಈಚೆ ಬರುವಾಗ ಏನನ್ನೋ ಕದ್ದುಕೊಂಡು ಬಂದ ಭಾವನೆ ಕಾಡುತ್ತಿತ್ತು. ಈಗಲೂ ನನಗೆ ಆ ಭಾವನೆಯಿಂದ ಪೂರ್ತಿ ಹೊರಬರುವುದು ಸಾಧ್ಯವಾಗಿಲ್ಲ. ಅಷ್ಟೊಂದು ದೀರ್ಘಕಾಲದ ನಿರಂತರ ನಿರಾಶೆಯ ಹುಡುಕಾಟ, ನಿರೀಕ್ಷೆಗಳ ಬಳಿಕ ಅಷ್ಟೊಂದು ಕಡಿಮೆ ಬೆಲೆಗೆ ಅದನ್ನು ಪಡೆದುಕೊಂಡಿದ್ದು ಹೀಗೆ ಆ ಭಾವದಿಂದ ತಪ್ಪಿಸಿಕೊಳ್ಳಲು ಆಗದೇ ಹೋಗಿದ್ದಕ್ಕೆ ಕಾರಣ. ಅನುವಾದ : ನರೇಂದ್ರ ಪೈ, ವಿಮರ್ಶಕ (Narendra Pai)

ಇದು, Kevin Brockmeier ಎಂಬಾತ ದೀನೊ ಬುತ್ಸಾತಿಯ ಪುಸ್ತಕ Catastrophe ಗೆ ಬರೆದ ಪ್ರಸ್ತಾವನೆ:

(ಭಾಗ 3)

ಆ ರಾತ್ರಿ, ನನ್ನ ರೂಮಿನಲ್ಲಿ ನಾನೊಬ್ಬನೇ ಕುಳಿತು ಆ ಅಪರೂಪದ ಪುಸ್ತಕದ ಹಾಳೆಗಳನ್ನು ತೆರೆದೆ. ಒಳಗಡೆ, Something Beginning with L ಎಂಬ ಹೆಸರಿನ ಕತೆಯ ಪುಟದಲ್ಲಿ ಬುಕ್‍ಮಾರ್ಕ್ ಇಟ್ಟ ತೆರದಲ್ಲಿ ಒಂದು ರಸೀತಿ ಇತ್ತು, ಶನಿವಾರ, ದಿನಾಂಕ ಆಗಸ್ಟ್ 31, 1991, ಸಂಜೆ 5 ಗಂಟೆ 15 ನಿಮಿಷಕ್ಕೆ ಖರೀದಿಸಿದ ಕುರುಹಾಗಿ ನಾಲ್ಕು ಡಾಲರ್, ಮುವ್ವತ್ತಾರು ಸೆಂಟ್ಸ್‌ಗಳಿಗೆ ಬರೆದ ರಸೀತಿ. ( ಅವು ನನ್ನ ಕಾಲೇಜಿನ ಆರಂಭಿಕ ದಿನಗಳು. ನನಗಾಗ ಯಾರೆಂದರೆ ಯಾರೂ ಗೊತ್ತಿರಲಿಲ್ಲ. ಆ ದಿನ ಸಂಜೆ ಐದೂಕಾಲಿಗೆ ಬಹುಶಃ ರೂಮಿನಲ್ಲಿ ನಾನೊಬ್ಬನೇ ಹಾಸುಗೆಯ ಮೇಲೆ ಮಕಾಡೆ ಬಿದ್ದುಕೊಂಡು ಊರಿಗೆ ಹೋಗಿದ್ದ ರೂಮ್‌ಮೇಟ್‌ನಿಂದಾಗಿ ನನಗೆ ಅನಾಯಾಸ ದಕ್ಕಿದ ಏಕಾಂತವನ್ನು ಬಳಸಿಕೊಂಡು ಇಯರ್‌ಫೋನ್ ಇಲ್ಲದೇ ರೆಕಾರ್ಡರ್ ಕೇಳುತ್ತಿದ್ದೆ. ನೇರ ಕೆಫಟೇರಿಯಾಕ್ಕೆ ಹೋಗಿ ಸಿಕ್ಕಿದ್ದರಲ್ಲಿ ದೊಡ್ಡಪಾಲು ಎತ್ತಿಕೊಂಡು ಸಂಜೆಯ ಪೂರ್ಣಲಾಭ ಎತ್ತಲೇ ಅಥವಾ ಇನ್ನೂ ಅರ್ಧಗಂಟೆ ತಡೆದು ಹೊರಡಲೇ ಎಂದು ಯೋಚಿಸುತ್ತಿದ್ದಿರಬೇಕು.) ರಸೀತಿಯ ಬೆನ್ನ ಮೇಲೆ, ಹುಡುಗಿಯದೇ ಇರಬೇಕೆಂದು ಅನಿಸುವ ಕೈಬರಹದಲ್ಲಿ ಒಂದು ಕವನವಾಗಿರಬಹುದಾದ, ಅಥವಾ ಯಾವುದೋ ಒಂದು ಕತೆಯ ಮೇಲಿನ ಟಿಪ್ಪಣಿಗಳಾಗಿರಬಹುದಾದ ಕೆಲವೊಂದು ಶಬ್ದಗಳಿದ್ದವು:

ಬೆನ್ನು ಹಾಕಿದ ಶಬ್ದವಿಲ್ಲದ ನೋಟ ದೂರದಿಂದ ಅವಳ ಮಾತುಗಳು ಅಂತರ ಆದಾಗ್ಯೂ ಮೌನ

ಇದನ್ನೂ ಓದಿ, ಭಾಗ 1 : Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ

Kannada Critic Narendra Pai Translated Dino Buzzati’s books

ಬುತ್ಸಾತಿ ಕೃತಿಗಳು

ನೀಲಿ ಶಾಯಿಯಲ್ಲಿ ಬರೆದ ಆ ಕೆಲವು ಸಾಲುಗಳ ಹೊರತಾಗಿ ಆವತ್ತು ನಾನು ಬೇರೇನೂ ಓದಲಿಲ್ಲ. ಮನೆಗೆ ಮರಳುತ್ತ ವಿಮಾನದಲ್ಲಿಯೇ ಕತೆಗಳನ್ನೆಲ್ಲ ಓದುವೆ ಎಂದುಕೊಂಡು ಸ್ವಸ್ಥ ಮಲಗಿಬಿಟ್ಟೆ. Catastrophe ಏನೂ ದೊಡ್ಡ ಸಂಕಲನವಲ್ಲ. ಆದರೆ ಸಂಕಲನದ ಕತೆಗಳು ಹೀಗೆ ಓದಿ ಮುಗಿಸಿದ್ದೇ ಹಾಗೆ ಮುಗಿದು ಹೋಗುವಂಥವಲ್ಲ. ಪರಿಣಾಮದಲ್ಲಿ ಅವು ಅಲ್ಪಾಯುವಲ್ಲ. ಅವುಗಳ ಸಂಕ್ಷಿಪ್ತ ಗಾತ್ರವೇ ಅವುಗಳ ಸಾಂದ್ರ ಗಟ್ಟಿಗತನವನ್ನು ಕುರಿತು ಹೇಳುವಂತಿವೆಯೇ ಹೊರತು ಈಗ, ಇಲ್ಲಿ, ಈ ಕ್ಷಣಕ್ಕೆ ಮಾತ್ರ ಸಲ್ಲುವ ಗುಣವನ್ನಲ್ಲ. ನನ್ನ ವಿಮಾನ ನೆಲ ಸ್ಪರ್ಶಿಸುವುದಕ್ಕೂ ಮೊದಲೇ ನಾನು ಕೊನೆಯ ಪುಟವನ್ನು ತಲುಪಿದ್ದೆ. ಅವುಗಳಲ್ಲಿನ ಅತ್ಯುತ್ತಮ ಕತೆಗಳಲ್ಲಿ ಬುತ್ಸಾತಿಯ ಸಾರ್ವಕಾಲಿಕ ಶ್ರೇಷ್ಠ ಕತೆಗಳಾದ The Colomber, The Falling Girl ಮತ್ತು The Time Machine ಸೇರಿದ್ದು ಅವೆಲ್ಲವೂ ನನ್ನ ಖಾಸಗಿ ಆರಾಧನೆಯ ಮರೆಯಬಾರದ ಸಣ್ಣಕತೆಗಳ ಸಂಪುಟವನ್ನು ಅದಾಗಲೇ ಅಲಂಕರಿಸಿಬಿಟ್ಟಿದ್ದವು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Literature: ಆತನ ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೂ ನೂರಾರು ಡಾಲರ್, ಆದರೆ ಕೆಲ ಕ್ಷಣಗಳಲ್ಲೇ ಅಲಭ್ಯ!

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/narendra-pai

Published On - 3:05 pm, Tue, 15 March 22

ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಧರಣಿ ಮರೆತು ಸಚಿವೆ ಜತೆ ಸೆಲ್ಫೀ ತೆಗೆದುಕೊಂಡ ಅಂಗನವಾಡಿ ಕಾರ್ಯಕರ್ತೆಯರು!
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್
ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್