Literature: ಆತನ ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೂ ನೂರಾರು ಡಾಲರ್, ಆದರೆ ಕೆಲ ಕ್ಷಣಗಳಲ್ಲೇ ಅಲಭ್ಯ!

Dino Buzzati : ಹಲವು ಬಾರಿ ನನ್ನ ಕೈಗೆಟಕುವ ಬೆಲೆಗೆ ಈ ಪುಸ್ತಕ ಕಾಣಿಸಿಕೊಂಡಾಗಲೆಲ್ಲ ಆರ್ಡರ್ ಮಾಡುತ್ತಿದ್ದೆ, ತಿಂಗಳ ಕಾಲ ಹಾದಿ ಕಾಯುತ್ತ ಕೂರುತ್ತಿದ್ದೆ. ಪದೇಪದೆ ಬೆನ್ನುಬೆನ್ನಿಗೆ ಅದು ನನ್ನತನಕ ತಲುಪಲು ನಿರಾಕರಿಸುತ್ತಲೇ ಇತ್ತು.

Literature: ಆತನ ಸೆಕೆಂಡ್ ಹ್ಯಾಂಡ್ ಪುಸ್ತಕಕ್ಕೂ ನೂರಾರು ಡಾಲರ್, ಆದರೆ ಕೆಲ ಕ್ಷಣಗಳಲ್ಲೇ ಅಲಭ್ಯ!
ಇಟಾಲಿಯನ್ ಲೇಖಕ ದೀನೊ ಬುತ್ಸಾತಿ ಮತ್ತು ಕನ್ನಡದ ವಿಮರ್ಶಕ ನರೇಂದ್ರ ಪೈ
Follow us
ಶ್ರೀದೇವಿ ಕಳಸದ
|

Updated on:Mar 15, 2022 | 3:56 PM

ದೀನೊ ಬುತ್ಸಾತಿ | Dino Buzzati 1906-1972) : ಅದೆಲ್ಲ ಹೀಗೆ ಆಯ್ತು. The Tartar Steppe ಓದಿ ಮುಗಿಸಿದ್ದೇ ಬುತ್ಸಾತಿ ಬರೆದ ಎಲ್ಲವನ್ನೂ (ಇಂಗ್ಲೀಷಿನಲ್ಲಿ ಲಭ್ಯವಿರುವ) ಓದಲೇಬೇಕೆಂದು ತೀರ್ಮಾನಿಸಿಬಿಟ್ಟೆ. ಆಗ ಅವನ ಸಚಿತ್ರ ಮಕ್ಕಳ ಕಾದಂಬರಿ, The Bear’s Famous Invasion of Sicily ಹೊಸದಾಗಿ ಅಚ್ಚಿನಲ್ಲಿತ್ತು. ಅದಕ್ಕೆ Lemony Snicket ಬರೆದ ವಿವರವಾದ ಪ್ರಸ್ತಾವನೆಯೂ ಜೊತೆಗಿತ್ತು. ಕಾದಂಬರಿಯ ಅದ್ಭುತರಮ್ಯವೂ ವೈನೋದಿಕವೂ ಆದ ಧಾಟಿಗೆ ಅತ್ಯಂತ ಸೂಕ್ತವಾದ ಧ್ವನಿಯಲ್ಲಿಯೇ ನಾಗರಿಕತೆ ಎಂಬುದು ವನಗಿರಿಕಂದರತನಕ್ಕೆ ಒಡ್ಡುವ ಅಪಾಯಗಳ ಕುರಿತು, ಅಥವಾ ಸ್ವಲ್ಪ ಸ್ಥೂಲವಾಗಿ ಹೇಳುವುದಾದರೆ ಮಾನವೀಯತೆ ಎಂಬುದು ವನ್ಯ ಸ್ವಾಭಾವಿಕತೆಗೆ ಒಡ್ಡುವ ಅಪಾಯಗಳ ಕುರಿತು ಇರುವ ಲವಲವಿಕೆಯ, ಅಸಂಗತ-ಭ್ರಾಮಕ ಧಾಟಿಯ ಟಿಪ್ಪಣಿಯದು. Snicketನ ಸ್ವಂತ ಕಾದಂಬರಿಗಳಲ್ಲಿಯೇ ಕಾಣಸಿಗದ ನುಡಿಕಟ್ಟಿನ ಟಿಪ್ಪಣಿ. ಇದರ ಬೆನ್ನಹಿಂದೆಯೇ ಬುತ್ಸಾತಿಯ ಚಿತ್ರಕಥಾ ಕಾದಂಬರಿ, ನಾದದೇವತೆಯ ಪುರಾಣದ ಮೇಲಿನ ಭರ್ಜರಿ ಸವಾರಿಯಂತಿರುವ Poem Strip, ಇದರಲ್ಲಿ ಬುತ್ಸಾತಿ ಸ್ವತಃ ಭೂಗತ ಜಗತ್ತಿನ ಗುಪ್ತದ್ವಾರದಲ್ಲಿ ಸಿಗರೇಟ್ ಎಳೆವ ಒಬ್ಬ ಕಾವಲುಗಾರನ ಪಾತ್ರದಲ್ಲಿ ಚಿಕ್ಕ ಪಾತ್ರವಹಿಸುತ್ತಾನೆ. ಅನುವಾದ : ನರೇಂದ್ರ ಪೈ, ವಿಮರ್ಶಕ (Narendra Pai)

ಇದು, Kevin Brockmeier ಎಂಬಾತ ದೀನೊ ಬುತ್ಸಾತಿಯ ಪುಸ್ತಕ Catastrophe ಗೆ ಬರೆದ ಪ್ರಸ್ತಾವನೆ:

(ಭಾಗ 2)

ಎರಡೂ ಪುಸ್ತಕಗಳು ನಿಜಕ್ಕೂ ದೊಡ್ಡ ನಿಧಿಯಿದ್ದಂತೆ. ಆನಂತರ ದಶಕಗಳ ಹಿಂದಿನ ಇಂಗ್ಲೀಷಿನಲ್ಲಿರುವ ಬುತ್ಸಾತಿಯ ಆರು ಸಂಪುಟಗಳು; ಅವನ ಕತೆಗಳ, ಕೆಲವೊಮ್ಮೆ ಭಯಭೀತಗೊಳಿಸುವ, ಕೆಲವೊಮ್ಮೆ ಚಲನೆಯೇ ಇಲ್ಲದ ಕಥಾನಕ ಎನಿಸುವ, ಸದಾ ಸಂಭ್ರಾಂತಗೊಳಿಸುವಷ್ಟು ಮಾಯಕತೆಯ ಕಥಾಸಂಕಲನಗಳಾದ Restless Nights ಮತ್ತು The Siren. ನೋವಿನಲೆಯಲ್ಲೆ ತೇಲುವ ಪ್ರೇಮದ ಅಮಲಿನಲ್ಲಿರುವ ಆತ್ಮಚರಿತ್ರಾತ್ಮಕ ಕಾದಂಬರಿ A Love Story. ವಯಸ್ಕ ಬುತ್ಸಾತಿಯ ತೀರ ಎಳೆಯ ವಯಸ್ಸಿನ ಪತ್ನಿಯೊಂದಿಗಿನ ಒಡನಾಟದ ಕಥಾನಕವಿದು. ಕೃತಕ ಬೌದ್ಧಿಕತೆ ಮತ್ತು ಡಿಜಿಟಲ್ ಆವಿರ್ಭವದ ವೈಜ್ಞಾನಿಕ ವಿಶ್ಲೇಷಣೆಯ Larger than Life. ಅವನ ಕ್ಲಾಸಿಕ್ ವೃತ್ತಿಪರತೆಯ ಪತ್ರಕರ್ತನ ನೆಲೆಯ, ಮೂಲತಃ ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಅವನು ದುಡಿದ Milanese ಸುದ್ದಿಪತ್ರಿಕೆಗೆ ಕಂತುಗಳಲ್ಲಿ ಬರೆದ The Giro d’Italia:Coppi Versus Bartali at the 1949 Tour of Italy.

ಇದಾದ ಮೇಲೆ ಈ Catastrophe. 1965ರಲ್ಲಿ Calder and Boyars ಪ್ರಕಟಿಸಿದರು ಎನ್ನಲಾದ, 1981ರಲ್ಲಿ Calder ರಿಂದ ಪುನರ್‌ ಮುದ್ರಣಗೊಂಡಿತು ಎನ್ನಲಾದ ಈ ನಿರ್ದಿಷ್ಟ ಸಂಪುಟವನ್ನು ದಕ್ಕಿಸಿಕೊಳ್ಳಲು ನಾನು ಮಾಡಿದ ಪ್ರತಿಯೊಂದು ಪ್ರಯತ್ನವೂ ವಿಫಲವಾಗಿದೆ. ಹೆಚ್ಚು ಬಳಸದ ಸೆಕೆಂಡ್ ಹ್ಯಾಂಡ್ ಪುಸ್ತಕ ಕೂಡ ಹಲವು ನೂರು ಡಾಲರುಗಳ ಬೆಲೆಗೆ ಕಾಣಿಸಿಕೊಂಡರೂ ಕ್ಷಣಾರ್ಧದಲ್ಲಿ ಸದ್ಯ ಅಲಭ್ಯ ಎನಿಸಿಕೊಂಡು ಬಿಡುತ್ತಿತ್ತು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ‘ಯಾವದರಲ್ಲಿಯೂ ನಿನ್ನ ಜೀವ ಇಡಬ್ಯಾಡ ಬೇಟ್ಯಾ ’

Kannada Critic Narendra Pai Translated Dino Buzzati’s books

ಬುತ್ಸಾತಿ ಕೃತಿಗಳು

ಒಂದೆರಡು ಬಾರಿಯಲ್ಲ, ಹಲವು ಹತ್ತು ಬಾರಿ ನನ್ನ ಕೈಗೆಟಕುವ ಬೆಲೆಗೆ ಈ ಪುಸ್ತಕ ಕಾಣಿಸಿಕೊಂಡಾಗಲೆಲ್ಲ ನಾನದನ್ನು ಆರ್ಡರ್ ಮಾಡುತ್ತಿದ್ದೆ ಮತ್ತು ವಾರಗಟ್ಟಲೆ, ಕೆಲವೊಮ್ಮೆ ತಿಂಗಳ ಕಾಲ ಅದರ ಹಾದಿ ಕಾಯುತ್ತ ಕೂರುತ್ತಿದ್ದೆ ಮತ್ತು ಪದೇಪದೇ, ಬೆನ್ನುಬೆನ್ನಿಗೆ ಅದು ನನ್ನ ತನಕ ತಲುಪಲು ನಿರಾಕರಿಸುತ್ತಲೇ ಇತ್ತು. ಪ್ರತಿಬಾರಿ ನಾನು ಕೈಚಾಚಿದಷ್ಟೂ ಹಣ್ಣು ನನ್ನ ಎಟುಕಿಗೆ ಸಿಗದಷ್ಟು ಮೇಲಕ್ಕೇರುತ್ತಿತ್ತು.

ಪ್ರತಿಬಾರಿ ನಾನು ಬೊಗಸೆಯೊಡ್ಡಿದಷ್ಟೂ ನೀರು ಕೈಚೆಲ್ಲಿಹೋಗುತ್ತಿತ್ತು. ಅಷ್ಟೇನೂ ಪ್ರಚಾರದಲ್ಲಿಲ್ಲದ ಮತ್ತು ಸಾಮಾನ್ಯವಾಗಿ ಅವಗಣಿಸಲ್ಪಟ್ಟ ಒಬ್ಬ ಬರಹಗಾರನ ಯಾವುದಾದರೂ ಪುಸ್ತಕವನ್ನು ಸಂಪಾದಿಸುವುದೆಂದರೆ ಈ ದಿನಗಳಲ್ಲಿ ಹೀಗೆಯೇ, ವಿಪರೀತ ಕಷ್ಟದ ಕೆಲಸವಾಗುತ್ತಿದೆ. ಎಂದಾದರೂ ಈ ಪುಸ್ತಕದ ಮೇಲೆ ನಾನು ನನ್ನ ಕೈಯಿಟ್ಟೇನೆಂಬ ನಂಬುಗೆಯೇ ನನಗೆ ಹೊರಟುಹೋಯ್ತು. ಹಾಗೆ ಅನುಮಾನಿಸುವುದೆಂದರೆ, ನಿಜಾರ್ಥದಲ್ಲಿ ಅಂಥ ಒಂದು ಪುಸ್ತಕವೇ ಇಲ್ಲ ಎಂದಂತೆ. ಅಂಥ ಒಂದು ಪುಸ್ತಕ ನಿಜಕ್ಕೂ ಇದ್ದಿದ್ದೇ ಇಲ್ಲ.

(ಮುಂದಿನ ಭಾಗದಲ್ಲಿ ನಿರೀಕ್ಷಿಸಿ)

ಭಾಗ 1 : Literature: ಯುದ್ಧವೇ ಇಲ್ಲದ ಒಂದು ಯುದ್ಧಭೂಮಿಯ ಕಥನ 

ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/narendra-pai

Published On - 2:25 pm, Tue, 15 March 22

ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಜಾಮೀನು ಸಿಕ್ಕ 6 ದಿನದ ಬಳಿಕ ಶಿವಮೊಗ್ಗ ಜೈಲಿನಿಂದ ಆರೋಪಿ ಜಗದೀಶ್ ರಿಲೀಸ್​
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಮುಖ್ಯಮಂತ್ರಿ ಮಾತಾಡುತ್ತಿದ್ದರೂ ಹೊರಗೆ ಹೋದ ವಿರೋಧಪಕ್ಷಗಳ ಶಾಸಕರು
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಜಮೀರ್ ಉತ್ತರದಿಂದ ಬಿಜೆಪಿ ಸಮಾಧಾನವಾಗದಿದ್ದಾಗ ಮುಖ್ಯಮಂತ್ರಿ ಉತ್ತರ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಪ್ರಿನ್ಸಿಪಾಲ್​ಗೆ ಅಡುಗೆ ಮಾಡಿಕೊಡಲು 8ನೇ ಕ್ಲಾಸ್ ಹುಡುಗನಿಗೆ ಒತ್ತಾಯ
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಚೈತ್ರಾ ಮೋಸದಾಟ; ಮನ ಒಲಿಸಲು ಹೊಸ ಉಪಾಯ ಕಂಡುಹಿಡಿದ ರಜತ್
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಸದನದಲ್ಲಿ ಸಚಿವ ಜಮೀರ್ ಅಹ್ಮದ್ ನೆರವಿಗೆ ಧಾವಿಸಿದ ಸಿದ್ದರಾಮಯ್ಯ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ಹೊರಡುವ ಮುನ್ನ ಸುದೀಪ್, ಉಪೇಂದ್ರಗೆ ಶುಭ ಹಾರೈಸಿದ ಶಿವಣ್ಣ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
ವಿರೋಧಪಕ್ಷದವರು ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸಬೇಕು: ಮುಖ್ಯಮಂತ್ರಿ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
Amit Shah Press Meet Live:ಅಮಿತ್​ ಶಾ ತುರ್ತು ಸುದ್ದಿಗೋಷ್ಠಿ ನೇರಪ್ರಸಾರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ
ತಲೆ ಚಚ್ಚಿಕೊಂಡು ಕಣ್ಣೀರು ಹಾಕಿದ ಚೈತ್ರಾ ಕುಂದಾಪುರ