ITR filing: ಆಧಾರ್ ಒಟಿಪಿ ಬಳಸಿ ಐಟಿಆರ್ ಫೈಲಿಂಗ್ ಇ-ವೆರಿಫೈ ಮಾಡುವುದು ಹೇಗೆ?

| Updated By: Srinivas Mata

Updated on: Dec 31, 2021 | 6:06 PM

ಐಟಿಆರ್​ ಫೈಲಿಂಗ್ ಅನ್ನು ಆಧಾರ್ ಒಟಿಪಿ ಬಳಸಿ ಇ- ವೆರಿಫೈ ಮಾಡುವುದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಈ ಲೇಖನದಲ್ಲಿ ಇದೆ.

ITR filing: ಆಧಾರ್ ಒಟಿಪಿ ಬಳಸಿ ಐಟಿಆರ್ ಫೈಲಿಂಗ್ ಇ-ವೆರಿಫೈ ಮಾಡುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us on

ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಾಗ ಇ-ವೆರಿಫೈ (ಪರಿಶೀಲನೆ) ಮಾಡುವುದು ಅತ್ಯಗತ್ಯ. ವಾಸ್ತವವಾಗಿ ಐಟಿಆರ್​ ಅನ್ನು ಪರಿಶೀಲಿಸದ ಹೊರತು ಅದನ್ನು ಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ. ಮತ್ತು ಐಟಿಆರ್ ಅನ್ನು ಇ-ವೆರಿಫೈ ಮಾಡುವ ಸುಲಭವಾದ ಮಾರ್ಗವೆಂದರೆ ಆಧಾರ್ ಒಟಿಪಿ. ಆಧಾರ್ ಒಟಿಪಿ ಮೂಲಕ ಐಟಿಆರ್ ಅನ್ನು ಇ-ವೆರಿಫೈ ಮಾಡುವುದು ಹೇಗೆ ಎಂಬುದು ಇಲ್ಲಿದೆ:

– ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿದಾಗ, ಕ್ವಿಕ್ ಲಿಂಕ್‌ಗಳ ಅಡಿಯಲ್ಲಿ (ಪುಟದ ಎಡಭಾಗದಲ್ಲಿ) ಇ-ವೆರಿಫೈ ರಿಟರ್ನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
– ಮುಂದೆ, – ನಾನು ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಲ್ಲಿನ OTP ಬಳಸಿಕೊಂಡು ಪರಿಶೀಲಿಸಲು ಬಯಸುತ್ತೇನೆ ಎಂಬ ಆಯ್ಕೆಯನ್ನು ಆರಿಸಿ. ಆ ನಂತರ ಇ-ವೆರಿಫೈ ಪರದೆಯಲ್ಲಿ ಮುಂದುವರಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
– ಆಧಾರ್ OTP ಪರದೆಯಲ್ಲಿ ಪರಿಶೀಲಿಸಲಾದ ಆಧಾರ್ ವಿವರಗಳನ್ನು ವ್ಯಾಲಿಡೇಟ್ ಮಾಡುವುದಕ್ಕೆ ನಾನು ಒಪ್ಪುತ್ತೇನೆ ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
– ಆಧಾರ್ OTP ಪರದೆಯಲ್ಲಿ ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್​ ಮಾಡಲು ನಾನು ಒಪ್ಪುತ್ತೇನೆ ಎಂಬುದನ್ನು ಆಯ್ಕೆ ಮಾಡಬೇಕು.
– Generate Aadhaar OTP ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
– ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಿದ 6-ಅಂಕಿಯ OTP ಅನ್ನು ನಮೂದಿಸಿ.
– OTP ಕೇವಲ 15 ನಿಮಿಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಬಳಕೆದಾರರು OTP ಅನ್ನು ಸರಿಯಾದ ರೀತಿಯಲ್ಲಿ ನಮೂದಿಸಲು ಕೇವಲ 3 ಅವಕಾಶಗಳನ್ನು ಪಡೆಯುತ್ತಾರೆ.
– ಒಮ್ಮೆ ಸರಿಯಾಗಿ ಮಾಡಿದ ನಂತರ ಒಂದು ವಹಿವಾಟು ID ಅನ್ನು ಕಳುಹಿಸಲಾಗುತ್ತದೆ, ಅದನ್ನು ಸರಿಯಾಗಿ ಸೇವ್ ಮಾಡಬೇಕು.
– ದೃಢೀಕರಣ ಸಂದೇಶವನ್ನು ಸ್ವೀಕರಿಸಲು ಇಮೇಲ್ ಮತ್ತು ನೋಂದಾಯಿತ ಫೋನ್ ಅನ್ನು ಪರಿಶೀಲಿಸಬೇಕು.

ಇದನ್ನೂ ಓದಿ: ITR Filing: ಐಟಿಆರ್ ಫೈಲಿಂಗ್ ದಿನಾಂಕ ವಿಸ್ತರಣೆ ಪ್ರಸ್ತಾವ ಇಲ್ಲ ಎಂದ ಕೇಂದ್ರ ಸರ್ಕಾರ

Published On - 6:05 pm, Fri, 31 December 21