ಕೊಚ್ಚಿ: ಅಫ್ಘಾನಿಸ್ತಾನದಲ್ಲಿ (Afghanistan) ತಯಾರಿಸಿದ ಹೆರಾಯಿನ್ ಅನ್ನು ಇರಾನ್ ಮೀನುಗಾರಿಕಾ ಹಡಗಿನಲ್ಲಿ ತುಂಬಿಕೊಂಡು ಪಾಕಿಸ್ತಾನ (Pakistan) ಮಾರ್ಗವಾಗಿ ಭಾರತಕ್ಕೆ ಸಾಗಿಸಲಾಗುತ್ತಿತ್ತು. ಈ ಮಾದಕವಸ್ತುವನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾರಾಟ ಮಾಡುವ ಪ್ರಯತ್ನ ನಡೆದಿತ್ತು. ಆದರೆ, ಎನ್‌ಸಿಬಿ (NCB) ಮತ್ತು ಭಾರತೀಯ ನೌಕಾಪಡೆ (Indian Navy) ಜಂಟಿ ಕಾರ್ಯಾಚರಣೆ ನಡೆಸಿ, 1,200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಸುಮಾರು 200 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ.
ಅಫ್ಘಾನಿಸ್ತಾನದಲ್ಲಿ ತಯಾರಾದ 200 ಕೆಜಿ ಹೆರಾಯಿನ್ ಅನ್ನು ಮೊದಲು ಪಾಕಿಸ್ತಾನಕ್ಕೆ ತರಲಾಯಿತು. ಅಲ್ಲಿಂದ ಇರಾನ್ ಹಡಗಿನಲ್ಲಿ ಹಾಕಲಾಯಿತು. ಅದನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು ಎಂದು ಭಾರತೀಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಆ ಹಡಗನ್ನು ತಡೆದು 6 ಇರಾನ್ ಪ್ರಜೆಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದ ಮೂವರು ಸ್ಮಗ್ಲರ್ಗಳನ್ನು ಹೊಡೆದುರುಳಿಸಿದ ಬಿಎಸ್ಎಫ್ ಯೋಧರು; 36 ಕೆಜಿ ಹೆರಾಯಿನ್ ವಶ
ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಗುರುವಾರ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿ 6 ಇರಾನ್ ಪ್ರಜೆಗಳೊಂದಿಗೆ ವಶಪಡಿಸಿಕೊಂಡ ಸರಕುಗಳನ್ನು ಕೇರಳದ ಕೊಚ್ಚಿಗೆ ತಂದಿದೆ ಎಂದು ಎನ್‌ಸಿಬಿಯ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. “ಕೆಲವು ಡ್ರಗ್ ಪ್ಯಾಕೆಟ್‌ಗಳು ‘ಸ್ಕಾರ್ಪಿಯನ್’ ಸೀಲ್ ಗುರುತುಗಳನ್ನು ಹೊಂದಿದ್ದರೆ, ಉಳಿದವು ‘ಡ್ರ್ಯಾಗನ್’ ಸೀಲ್ ಗುರುತುಗಳನ್ನು ಹೊಂದಿದ್ದವು.” ಎಂದು ಅವರು ತಿಳಿಸಿದ್ದಾರೆ.
Co-ordinated action @ sea b/w #NCB & @indiannavy
?200kg Afghan Heroin worth Rs 1200 Cr seized
?Origin of the drug: Pakistan
?Iranian dhow seized
?6 Iranian crew members apprehended in Cochin#MissionDrugFreeIndia @PMOIndia @HMOIndia @BhallaAjay26 @PIBHomeAffairs pic.twitter.com/xKFvgawc4M— NCB INDIA (@narcoticsbureau) October 7, 2022
ಇರಾನ್ ಹಡಗಿನಲ್ಲಿದ್ದ ವ್ಯಕ್ತಿಗಳು ಸಮುದ್ರಕ್ಕೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಹಾಗೇ, ಹೆರಾಯಿನ್ ಅನ್ನು ನೀರಿನಲ್ಲಿ ಎಸೆಯಲು ಪ್ರಯತ್ನಿಸಿದರು ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅರೇಬಿಯನ್ ಸಮುದ್ರ ಮತ್ತು ಹಿಂದೂ ಮಹಾಸಾಗರದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಅಫ್ಘಾನ್ ಹೆರಾಯಿನ್ ಸಾಗಾಟವು ಘಾತೀಯವಾಗಿ ಹೆಚ್ಚಾಗಿದೆ ಎಂದು NCB ಹೇಳಿದೆ.