Congress Foundation Day: ಕಾಂಗ್ರೆಸ್ ಎಂದಿಗೂ ತನ್ನ ಸಿದ್ಧಾಂತಗಳಿಂದ ದೂರ ಸರಿಯುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಪಕ್ಷವು ಜನರ ಇಚ್ಛೆಯನ್ನು ಪ್ರತಿನಿಧಿಸುತ್ತದೆ. ಇದು ಹೋರಾಟ, ಸಹಾನುಭೂತಿ, ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆಗೆ ಸಮಾನಾರ್ಥಕವಾಗಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಭಾರತದ ಸಂವಿಧಾನವನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ದೆಹಲಿ ಡಿಸೆಂಬರ್ 28: ಕಾಂಗ್ರೆಸ್ ಪಕ್ಷದ 139 ನೇ ಸಂಸ್ಥಾಪನಾ ದಿನಾಚರಣೆಯ(Congress Foundation Day) ಸಂದರ್ಭದಲ್ಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಗುರುವಾರ ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಪ್ರಧಾನ ಕಚೇರಿಯಲ್ಲಿ ಪಕ್ಷದ ಧ್ವಜಾರೋಹಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖರ್ಗೆ ಕಾಂಗ್ರೆಸ್ ಪಕ್ಷವು ಎಂದಿಗೂ ತನ್ನ ಸಿದ್ಧಾಂತಗಳಿಂದ ದೂರ ಸರಿಯುವುದಿಲ್ಲ. ಅದರ ಸಿದ್ಧಾಂತಗಳೊಂದಿಗೆ ಪ್ರಗತಿ ಸಾಧಿಸುತ್ತದೆ ಎಂದು ಹೇಳಿದರು.
ಸಂಸ್ಥಾಪನಾ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ನಾವು ಒಟ್ಟು ಸೇರುವುದು ಕರ್ತವ್ಯ. ಈ ಮೂಲಕ ನಾವು ಪಕ್ಷವು ಎಂದಿಗೂ ತನ್ನ ಸಿದ್ಧಾಂತಗಳಿಂದ ದೂರ ಸರಿಯುವುದಿಲ್ಲ ಮತ್ತು ಅದರ ಸಿದ್ಧಾಂತಗಳೊಂದಿಗೆ ಪ್ರಗತಿ ಹೊಂದುತ್ತದೆ ಎಂದು ದೇಶಕ್ಕೆ ಸಂದೇಶವನ್ನು ಕಳುಹಿಸಬೇಕು.ನಾವು 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ ಎಂಬ ಸಂದೇಶವನ್ನು ನಾವು ನಾಗ್ಪುರದಿಂದ ಕಳುಹಿಸಲು ಬಯಸುತ್ತೇವೆ ಎಂದಿದ್ದಾರೆ ಖರ್ಗೆ.
The Congress party represents the will of the people.
It is synonymous with struggle, compassion, freedom, justice and equality.
On the solemn occasion of Congress Foundation Day, we reaffirm our unwavering commitment to protect the Constitution of India and uphold the values… pic.twitter.com/zxPypDw874
— Mallikarjun Kharge (@kharge) December 28, 2023
ಖರ್ಗೆ ಅವರು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಸಂಸದ ರಾಜೀವ್ ಶುಕ್ಲಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಪಕ್ಷದ ಪ್ರಮುಖ ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆ.
“ಕಾಂಗ್ರೆಸ್ ಪಕ್ಷವು ಜನರ ಇಚ್ಛೆಯನ್ನು ಪ್ರತಿನಿಧಿಸುತ್ತದೆ. ಇದು ಹೋರಾಟ, ಸಹಾನುಭೂತಿ, ಸ್ವಾತಂತ್ರ್ಯ, ನ್ಯಾಯ ಮತ್ತು ಸಮಾನತೆಗೆ ಸಮಾನಾರ್ಥಕವಾಗಿದೆ. ಕಾಂಗ್ರೆಸ್ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಭಾರತದ ಸಂವಿಧಾನವನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ನಮ್ಮ ಅಚಲ ಬದ್ಧತೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಖರ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಗುರುವಾರ ‘ಹೇ ತಯ್ಯಾರ್ ಹಮ್’ ರ‍್ಯಾಲಿಯಲ್ಲಿ ಮಾತನಾಡಲಿದ್ದಾರೆ.
“ಸತ್ಯ ಮತ್ತು ಅಹಿಂಸೆಯ ಅಡಿಪಾಯ, ಪ್ರೀತಿ, ಸಹೋದರತ್ವ, ಗೌರವ ಮತ್ತು ಸಮಾನತೆಯ ಸ್ತಂಭಗಳ ಮೇಲೆ, ದೇಶಭಕ್ತಿಯ ಛಾವಣಿಯೊಂದಿಗೆ ನಿರ್ಮಿಸಲಾಗಿದೆ, ಅಂತಹ ಸಂಘಟನೆಯ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಾನು ಕಾಂಗ್ರೆಸ್ ಸದಸ್ಯನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಕಾಂಗ್ರೆಸ್ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಎಲ್ಲಾ ನಾಯಕರು, ಅಧಿಕಾರಿಗಳು, ಬೆಂಬಲಿಗರು ಮತ್ತು ನನ್ನ ಪ್ರೀತಿಯ ಸಹ ಕಾಂಗ್ರೆಸ್ ಕಾರ್ಯಕರ್ತರಿಗೆ ಹೃತ್ಪೂರ್ವಕ ಶುಭಾಶಯಗಳು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಎಕ್ಸ್ ನಲ್ಲಿ ಬರೆದಿದ್ದಾರೆ
सत्य और अहिंसा जिसकी बुनियाद है
मोहब्बत, भाईचारा, सम्मान और समानता जिसके स्तंभ हैं
और देशप्रेम जिसकी छत है
मुझे फक्र है कि मैं ऐसे संगठन का हिस्सा हूं, गर्व है कि मैं कांग्रेस का एक भाग हूं।
कांग्रेस स्थापना दिवस की सभी नेता गणों, पदाधिकारियों, समर्थकों और मेरे प्यारे बब्बर… pic.twitter.com/AE94lEAxwa
— Rahul Gandhi (@RahulGandhi) December 28, 2023
ಏತನ್ಮಧ್ಯೆ, ಕಾಂಗ್ರೆಸ್ ಮುಖಂಡ ಮತ್ತು ಬಿಹಾರ ವಿಧಾನಸಭೆಯ ಮಾಜಿ ಸದಸ್ಯ ಶಕೀಲ್ ಅಹ್ಮದ್, ಕಾಂಗ್ರೆಸ್ ಪಕ್ಷದ ಮೂಲಭೂತ ಗುರಿ ಪ್ರಾರಂಭದಿಂದಲೂ ಸ್ಥಿರವಾಗಿದೆ ಎಂದು ಹೇಳಿದರು. ಸಮಾಜದಲ್ಲಿ ಏಕತೆಯನ್ನು ಬೆಳೆಸುವುದು ಮತ್ತು ವಿಭಜಕ ಭಾವನೆಗಳು ಮತ್ತು ದ್ವೇಷವನ್ನು ತೊಡೆದುಹಾಕುವುದು ಪಕ್ಷದ ಪ್ರಸ್ತುತ ಗುರಿಯಾಗಿದೆ ಎಂದು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ಆರೋಪಪಟ್ಟಿಯಲ್ಲಿ ಪ್ರಿಯಾಂಕಾ ಗಾಂಧಿ ಹೆಸರು
“ಡಿಸೆಂಬರ್ 28, 1885 ರಂದು, ಕಾಂಗ್ರೆಸ್ ರಚನೆಯಾದಾಗ, ಅದರ ಸ್ಥಾಪನೆಯ ಹಿಂದಿನ ಉದ್ದೇಶವು ಇಂದಿನಂತೆಯೇ ಇದೆ. ಬ್ರಿಟಿಷರು ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾಗ ಮತ್ತು ಜನರನ್ನು ಪರಸ್ಪರರ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿದ್ದಾಗ ಕಾಂಗ್ರೆಸ್ ರೂಪುಗೊಂಡಿತು. ಸಮಾಜವನ್ನು ಒಗ್ಗೂಡಿಸುವ ಮತ್ತು ಬ್ರಿಟಿಷ್ ಆಳ್ವಿಕೆಯ ಹಿಡಿತದಿಂದ ಮುಕ್ತಗೊಳಿಸುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿತ್ತು” ಎಂದು ಅಹ್ಮದ್ ಕಾಂಗ್ರೆಸ್ ರಚನೆಯ ಬಗ್ಗೆ ಹೇಳಿದ್ದಾರೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವನ್ನು ಅನ್ನು ಡಿಸೆಂಬರ್ 28, 1885 ರಂದು ಬಾಂಬೆಯಲ್ಲಿ (ಈಗ ಮುಂಬೈ) ದಾಸ್ ತೇಜ್ಪಾಲ್ ಸಂಸ್ಕೃತ ಕಾಲೇಜಿನಲ್ಲಿ 72 ಪ್ರತಿನಿಧಿಗಳ ಭಾಗವಹಿಸುವಿಕೆಯೊಂದಿಗೆ ಸ್ಥಾಪಿಸಲಾಯಿತು. ಸ್ಥಾಪಕ ಪ್ರಧಾನ ಕಾರ್ಯದರ್ಶಿ ಎಒ ಹ್ಯೂಮ್, ಮತ್ತು ವ್ಯೋಮೇಶ್ ಚಂದ್ರ ಬ್ಯಾನರ್ಜಿ ಅಧ್ಯಕ್ಷರ ಪಾತ್ರವನ್ನು ವಹಿಸಿಕೊಂಡರು.
ಏತನ್ಮಧ್ಯೆ, ತೆಲಂಗಾಣದಲ್ಲಿ ನಡೆದ ‘ಪ್ರಜಾ ಪಾಲನಾ’ (ಜನರ ಆಡಳಿತ) ಉಪಕ್ರಮದ ಭಾಗವಾಗಿ, ತೆಲಂಗಾಣದಲ್ಲಿ ಆರ್ಥಿಕವಾಗಿ ಅನನುಕೂಲರಾಗಿರುವ ಜನರಿಗೆ ರಾಜ್ಯ ಸರ್ಕಾರವು ಬಿಳಿ ಪಡಿತರ ಕಾರ್ಡ್‌ಗಳನ್ನು ವಿತರಿಸುವುದಾಗಿ ಕಾಂಗ್ರೆಸ್ ಮುಖಂಡ ವಿ ಹನುಮಂತ ರಾವ್ ಘೋಷಿಸಿದರು. ಈ ವಿತರಣೆಯು ಡಿಸೆಂಬರ್ 28 ರಿಂದ ಜನವರಿ 6 ರವರೆಗೆ ನಡೆಯಲಿದೆ. ಡಿಸೆಂಬರ್ 28 ರಿಂದ ಜನವರಿ 6 ರವರೆಗೆ ನಾವು ಪ್ರತಿ ಮನೆಗೆ ಹೋಗಿ ರಾಜ್ಯದ ಬಡವರಿಗೆ ಬಿಳಿ ಪಡಿತರ ಚೀಟಿಗಳನ್ನು ನೀಡುತ್ತೇವೆ. ಪ್ರತಿಯೊಬ್ಬ ಕಾರ್ಯಕರ್ತರು, ಪ್ರತಿ ಜಿಲ್ಲಾಧ್ಯಕ್ಷರು, ಎನ್ಎಸ್ಯುಐ ಮತ್ತು ಯುವ ಕಾಂಗ್ರೆಸ್ ಪ್ರತಿ ಮನೆಗೆ ಹೋಗಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬುದು ನನ್ನ ವಿನಂತಿ. ಸಿಎಂ ರೇವಂತ್ ರೆಡ್ಡಿ ಉತ್ತಮ ಕೆಲಸ ಮಾಡಿದ್ದಾರೆ” ಎಂದು ಎಎನ್ಐ ಜತೆ ಮಾತನಾಡಿದ ರಾವ್ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Thu, 28 December 23