
ನವದೆಹಲಿ, ಆಗಸ್ಟ್ 18: ಜನಪ್ರತಿನಿಧಿಗಳಾದ ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ಸಂಬಂಧಿಸಿದ ದಶಕದ ಹಳೆಯ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ಗೆ ಅಮಿಕಸ್ ಕ್ಯುರಿಯೆ ಹಾಗೂ ಹಿರಿಯ ವಕೀಲ ವಿಜಯ್ ಹನ್ಸಾರಿಯಾ ಮಹತ್ವದ ವರದಿ ಸಲ್ಲಿಸಿದ್ದಾರೆ. ದೇಶದ 28 ರಾಜ್ಯಗಳಲ್ಲಿ 14 ರಾಜ್ಯಗಳ ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದು ವರದಿ ತಿಳಿಸಿದೆ. ಈ ಪಟ್ಟಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ವಿರುದ್ಧ 89 ಪ್ರಕರಣಗಳು ಇರುವುದರಿಂದ ಮೊದಲ ಸ್ಥಾನದಲ್ಲಿದ್ದಾರೆ.
| ಮುಖ್ಯಮಂತ್ರಿ | ಪ್ರಕರಣಗಳ ಸಂಖ್ಯೆ |
| ಎ. ರೇವಂತ್ ರೆಡ್ಡಿ (ತೆಲಂಗಾಣ) | 89 |
| ಸುವೇಂದು ಅಧಿಕಾರಿ (ಪಶ್ಚಿಮ ಬಂಗಾಳ) | 29 |
| ಡಿ.ಕೆ. ಶಿವಕುಮಾರ್ (ಕರ್ನಾಟಕ) | 19 |
| ಎನ್. ಚಂದ್ರಬಾಬು ನಾಯ್ಡು (ಆಂಧ್ರಪ್ರದೇಶ) | 19 |
| ವಿ.ಡಿ. ಸತೀಶನ್ (ಕೇರಳ) | 18 |
| ಹೇಮಂತ್ ಸೊರೇನ್ (ಜಾರ್ಖಂಡ್) | 5 |
| ದೇವೇಂದ್ರ ಫಡ್ನವೀಸ್ (ಮಹಾರಾಷ್ಟ್ರ) | 4 |
| ಸುಖವಿಂದರ್ ಸಿಂಗ್ (ಹಿಮಾಚಲ ಪ್ರದೇಶ) | 4 |
| ಸಿ. ಜೋಸೆಫ್ ವಿಜಯ್ (ತಮಿಳುನಾಡು) | 2 |
| ಸಮ್ರಾಟ್ ಚೌಧರಿ (ಬಿಹಾರ) | 2 |
| ಪಿ.ಎಸ್. ತಮಾಂಗ್ (ಸಿಕ್ಕಿಂ) | 1 |
| ಭಗವಂತ್ ಮಾನ್ (ಪಂಜಾಬ್) | 1 |
| ಮೋಹನ್ ಚರಣ್ ಮಾಝಿ (ಒಡಿಶಾ) | 1 |
| ಭಜನ್ ಲಾಲ್ ಶರ್ಮಾ (ರಾಜಸ್ಥಾನ) | 1 |
ಇದನ್ನೂ ಓದಿ: ರಾಹುಲ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ: ವಿಚಾರಣೆ ಸದ್ಯಕ್ಕೆ ನಿಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ಗೆ ಸುಪ್ರೀಂ ನಿರ್ದೇಶನ
ವರದಿಯ ಪ್ರಕಾರ, ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರ ಪ್ರಮಾಣದಲ್ಲಿ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ.
ಪಶ್ಚಿಮ ಬಂಗಾಳದಲ್ಲಿ 170 (58%) ಶಾಸಕರ ಮೇಲೆ ಕ್ರಿಮಿನಲ್ ಕೇಸ್ ಇದ್ದರೆ, ಕೇರಳದ 57%, ಆಂಧ್ರಪ್ರದೇಶ 56%, ತೆಲಂಗಾಣ 49%, ಜಾರ್ಖಂಡ್ 45%, ಒಡಿಶಾ 45%, ಬಿಹಾರ: 42%, ಮಹಾರಾಷ್ಟ್ರ 40% ಶಾಸಕರ ಮೇಲೆ ಪ್ರಕರಣಗಳಿವೆ. 543 ಸದಸ್ಯರ ಲೋಕಸಭೆಯಲ್ಲಿ 170 ಸಂಸದರ (31%) ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂದೂ ವರದಿ ಹೇಳಿದೆ.
233 ಸದಸ್ಯರ ರಾಜ್ಯಸಭೆಯಲ್ಲಿ 75 ಸದಸ್ಯರ (33%) ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇದ್ದು, ಅವರಲ್ಲಿ 40 ಸದಸ್ಯರ (18%) ವಿರುದ್ಧ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಶಿಕ್ಷೆಗೆ ಒಳಪಡುವ ಗಂಭೀರ ಪ್ರಕರಣಗಳು ಬಾಕಿ ಇವೆ.
2026ರ ಜುಲೈ ವೇಳೆಗೆ ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ವಿರುದ್ಧ 4,192 ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇದರಲ್ಲಿ ಉತ್ತರ ಪ್ರದೇಶವೊಂದರಲ್ಲಿಯೇ ಅತೀ ಹೆಚ್ಚು ಅಂದರೆ, 1,171 ಕೇಸ್ಗಳಿವೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.