ಉತ್ತರ ಪ್ರದೇಶದ ಚಂದೌಲಿ, ವಾರಣಾಸಿಯಲ್ಲಿ ಹರಿಯುವ ಗಂಗಾ ನದಿಯಲ್ಲಿ 14 ಮೃತದೇಹ ಪತ್ತೆ

Dead bodies found floating in Ganga: ಚಂದೌಲಿ ಜಿಲ್ಲೆಯ ಗಂಗಾ ನದಿಯಲ್ಲಿ 6 ಮೃತದೇಹಗಳು ಪತ್ತೆಯಾಗಿದೆ. ವಾರಣಾಸಿಯಲ್ಲಿ 8 ಮೃತದೇಹಗಳು ಗುರುವಾರ ತೇಲಿಬಂದಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉತ್ತರ ಪ್ರದೇಶದ ಚಂದೌಲಿ, ವಾರಣಾಸಿಯಲ್ಲಿ ಹರಿಯುವ ಗಂಗಾ ನದಿಯಲ್ಲಿ 14 ಮೃತದೇಹ ಪತ್ತೆ
ಗಂಗಾನದಿ

ವಾರಣಾಸಿ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆ ಮತ್ತು ಗಾಜೀಪುರ್ ನಲ್ಲಿ ಹರಿಯುವ ಗಂಗಾ ನದಿಯಲ್ಲಿ ಕೊವಿಡ್ ರೋಗಿಗಳ ಮೃತದೇಹ ಎಂದು ಶಂಕಿಸಲ್ಪಡುವ ಮೃತದೇಹಗಳು ತೇಲಿ ಬಂದ ಮರುದಿನ ಚಂದೌಲಿ ಜಿಲ್ಲೆಯ ಗಂಗಾ ನದಿಯಲ್ಲಿ 6 ಮೃತದೇಹಗಳು ಪತ್ತೆಯಾಗಿದೆ. ವಾರಣಾಸಿಯಲ್ಲಿ 8 ಮೃತದೇಹಗಳು ಗುರುವಾರ ತೇಲಿಬಂದಿದೆ.

ಧನಪುರದ ಬಡೌರಾ ಘಾಟ್ ಪ್ರದೇಶದಲ್ಲಿನ ಶವಗಳು ಪತ್ತೆಯಾಗಿರುವ ಬಗ್ಗೆ ಚಂದೌಲಿ ನಿವಾಸಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರು. ಪತ್ತೆಯಾಗಿರುವ ಮೃತದೇಹಗಳು ಒಂದು ವಾರಕ್ಕಿಂತಲೂ ಹಳೆಯದಾಗಿ ಕಾಣಿಸಿಕೊಂಡಿವೆ ಎಂದು ಹೆಸರು ಹೇಳಲಿಚ್ಛಿಸದ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಹೀಗೆ ಪತ್ತೆಯಾದ ಶವಗಳನ್ನು ಗಂಗಾ ನದಿ ದಡದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿದೆ.

ನದಿಯಲ್ಲಿ ಯಾರೂ ಶವಗಳನ್ನು ವಿಲೇವಾರಿ ಮಾಡದಂತೆ ನೋಡಿಕೊಳ್ಳಲು ನದಿಯ ಉದ್ದಕ್ಕೂ ನಿಗಾ ಇರಿಸಲಾಗಿದೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಎರಡು ಡಜನ್‌ಗೂ ಹೆಚ್ಚು ಶವಗಳು ಪತ್ತೆಯಾದ ಗಾಜಿಪುರ ಜಿಲ್ಲೆಯ ಗಡಿಭಾಗವು ಚಂದೌಲಿ ಹಂಚಿಕೊಂಡಿದೆ.

ಏತನ್ಮಧ್ಯೆ, ವಾರಣಾಸಿಯ ಸುಜಾಬಾದ್ ಪ್ರದೇಶದ ಗಂಗಾದಲ್ಲಿ ಎಂಟು ಶವಗಳು ತೇಲುತ್ತಿರುವಂತೆ ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವುಗಳಲ್ಲಿ ಐದು ಮೃತದೇಹಗಳುಳು ಪುರುಷರದ್ದು ಮತ್ತು ಎರಡು ಮಹಿಳೆಯರದ್ದಾಗಿದೆ. ಒಂದು ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ.

ನದಿಯ ದಂಡೆಯಲ್ಲಿ ಕಾವಲು ಕಾಯಲು ಗಂಗಾ ಉದ್ದಕ್ಕೂ ಲೆಖ್‌ಪಾಲ್‌ಗಳ ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಎಂಟು ಶವಗಳನ್ನು ಮೃತದೇಹ ಪತ್ತೆಯಾಗಿದ್ದು ಅವುಗಳ ಅಂತ್ಯ ಸಂಸ್ಕಾರಮಾಡಲಾಗಿದೆ ಎಂದು ಪೊಲೀಸ್ ಡೆಪ್ಯುಟಿ ಕಮಿಷನರ್ (ಕಾಶಿ ವಲಯ) ಅಮಿತ್ ಕುಮಾರ್ ಹೇಳಿದ್ದಾರೆ.

ಈ ವಾರದ ಆರಂಭದಲ್ಲಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗವು ಕೇಂದ್ರ, ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ನೋಟಿಸ್ ನೀಡಿ ನಾಲ್ಕು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಕೋರಿದ್ದರೂ, 82 ಮೃತದೇಹಗಳನ್ನು ಬಿಹಾರದ ಬಕ್ಸಾರ್ ಜಿಲ್ಲೆಯ ಚೌಸಾದಲ್ಲಿ ಗಂಗಾ ನದಿಯಿಂದ ಹೊರತೆಗೆಯಲಾಯಿತು.

ಇದನ್ನೂ ಓದಿ: Unnao: ಉತ್ತರ ಪ್ರದೇಶದ ಉನ್ನಾವ್​ನ ಗಂಗಾ ನದಿ ತೀರದಲ್ಲಿ ಹೂತಿಟ್ಟ ಮೃತದೇಹಗಳು ಪತ್ತೆ 

ಗಂಗಾ ನದಿಯಲ್ಲಿ ತೇಲಿ ಬಂತು 96 ಮೃತದೇಹ; ಬಿಹಾರ, ಉತ್ತರ ಪ್ರದೇಶದಲ್ಲಿ ಹೆಚ್ಚಿದ ಆತಂಕ

Read Full Article

Click on your DTH Provider to Add TV9 Kannada