ಹೈದರಾಬಾದ್: ದೇವಾಲಯದ ಮೇಲಿನ ದಾಳಿ ಹಾಗೂ ಮೂರ್ತಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (SIT) ಆಂಧ್ರಪ್ರದೇಶ ಸರ್ಕಾರ ರಚಿಸಿದೆ. ತನಿಖಾ ತಂಡವು 16 ಸದಸ್ಯರನ್ನು ಹೊಂದಿದೆ.
ಭ್ರಷ್ಟಾಚಾರ ವಿರೋಧಿ ಪಡೆಯ ಹೆಚ್ಚುವರಿ ನಿರ್ದೇಶಕ ಜಿ.ವಿ.ಜಿ. ಅಶೋಕ್ ಕುಮಾರ್ಗೆ ತಂಡದ ಮುಂದಾಳತ್ವ ನೀಡಲಾಗಿದೆ. ಕೃಷ್ಣಾ ಎಸ್ಪಿ ಎಮ್. ರವೀಂದ್ರನಾಥ್ ಬಾಬು ಹಾಗೂ ಇಬ್ಬರು ಹೆಚ್ಚುವರಿ ಎಸ್ಪಿಗಳು ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ. ಜೊತೆಗೆ, ರಾಜ್ಯದ ಇಬ್ಬರು ಡಿಎಸ್ಪಿಗಳು, ಇಬ್ಬರು ಸಹಾಯಕ ಕಮಿಷನರ್ಗಳು, ನಾಲ್ಕು ಸರ್ಕಲ್ ಇನ್ಸ್ಪೆಕ್ಟರ್ಗಳು ಹಾಗೂ ನಾಲ್ಕು ಸಬ್ ಇನ್ಸ್ಪೆಕ್ಟರ್ಗಳು ತಂಡದಲ್ಲಿ ಇರಲಿದ್ದಾರೆ.
ಪೊಲೀಸರು ಈ ಸಂಬಂಧ ಒಟ್ಟು 20 ಕೇಸ್ಗಳನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಯು ವಿವಿಧ ಹಂತದಲ್ಲಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯ ವಿಧಿವಿಜ್ಞಾನ ಪ್ರಯೋಗಾಲಯ, ಕ್ರೈಂ ತನಿಖಾ ವಿಭಾಗ ಹಾಗೂ ಇತರ ವಿಭಾಗಗಳು ವಿಶೇಷ ತನಿಖಾ ತಂಡದ ತನಿಖೆಗೆ ಬೆಂಬಲ ನೀಡಲಿವೆ. ತನಿಖೆಯ ವಿವರಗಳನ್ನು ಅಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕ ಡಿ. ಗೌತಮ್ ಸಾವಂಗ್ ಹಾಗೂ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರವಿ ಶಂಕರ್ ಅಯ್ಯನಾರ್ಗೆ ಸಲ್ಲಿಸಲಿದ್ದಾರೆ.
ರಾಜ್ಯದ ಪಶ್ಚಿಮ ಗೋದಾವರಿ, ಕೃಷ್ಣಾ, ವಿಜಯನಗರಂ, ಪೂರ್ವ ಗೋದಾವರಿ, ಪ್ರಕಾಶಂ ಹಾಗೂ ಇತರ ಜಿಲ್ಲೆಗಳಲ್ಲಿ, ದೇವಾಲಯಗಳ ಮೇಲೆ ದಾಳಿಯಾದ ಬಗ್ಗೆ ಸುಮಾರು 25 ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ವಿಶೇಷ ತಂಡ (SIT) ತನಿಖೆ ನಡೆಸಲಿವೆ.
ಧ್ವಂಸಗೊಂಡಿರುವ ಹಿಂದೂ ದೇವಾಲಯವನ್ನು 2 ವಾರಗಳಲ್ಲಿ ಪುನಃಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಆದೇಶ