AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಪಸಂಖ್ಯಾತ ಕೋಟಾದಡಿ ನೀಟ್ ಮೀಸಲಾತಿಗಾಗಿ 20 ಎಂಬಿಬಿಎಸ್​ ಅಭ್ಯರ್ಥಿಗಳ ಮತಾಂತರ!

ಉತ್ತರ ಪ್ರದೇಶದಲ್ಲಿ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಭಾರೀ ಅಕ್ರಮವೊಂದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ರಾಜ್ಯದಿಂದ ವೈದ್ಯಕೀಯ ಸೀಟುಗಳನ್ನು ಪಡೆಯಲು 20 ಎಂಬಿಬಿಎಸ್​ ಅಭ್ಯರ್ಥಿಗಳು ತಮ್ಮ ಧರ್ಮವನ್ನೇ ಬದಲಾಯಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಮೀರತ್‌ನ ಅಲ್ಪಸಂಖ್ಯಾತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಭ್ಯರ್ಥಿಗಳು ರಾಜ್ಯದ ಕಾನೂನುಬಾಹಿರ ಧಾರ್ಮಿಕ ಮತಾಂತರಗಳ ಕಾಯ್ದೆ 2021 (UPPUCRA-2021)ರ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ.

ಅಲ್ಪಸಂಖ್ಯಾತ ಕೋಟಾದಡಿ ನೀಟ್ ಮೀಸಲಾತಿಗಾಗಿ 20 ಎಂಬಿಬಿಎಸ್​ ಅಭ್ಯರ್ಥಿಗಳ ಮತಾಂತರ!
medical college
ಸುಷ್ಮಾ ಚಕ್ರೆ
|

Updated on: Sep 16, 2024 | 7:52 PM

Share

ನವದೆಹಲಿ: ಉತ್ತರ ಪ್ರದೇಶದ ಮೀರತ್‌ನಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಮತಾಂತರಗೊಂಡ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೂರಿನ ತನಿಖೆಯ ನಂತರ, ಸಂಬಂಧಿತ ಡಿಎಂಗಳು ಮೀರತ್‌ನ ಸುಭಾರ್ತಿ ವಿಶ್ವವಿದ್ಯಾಲಯದಲ್ಲಿ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಸೀಟು ಪಡೆಯಲು ಸುಮಾರು 20 ಎಂಬಿಬಿಎಸ್ ಅಭ್ಯರ್ಥಿಗಳು ಬೌದ್ಧ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ ಎಂದು ಪತ್ತೆಯಾಗಿದೆ. ಈ ಅಭ್ಯರ್ಥಿಗಳು ತಾವು ಬೌದ್ಧ ಸಮುದಾಯದಿಂದ ಬಂದವರು ಎಂದು ಹೇಳಿಕೊಂಡು ಪ್ರಮಾಣಪತ್ರಗಳನ್ನು ಸಲ್ಲಿಸಿದ್ದರು. ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನನ್ನು ಉಲ್ಲಂಘಿಸಿ ಪ್ರಮಾಣಪತ್ರಗಳನ್ನು ಮಾಡಲಾಗಿದೆ. ನಂತರ, ಸಂಬಂಧಪಟ್ಟ ಡಿಎಂಗಳು ಅವರ ಪ್ರಮಾಣಪತ್ರಗಳನ್ನು ರದ್ದುಗೊಳಿಸಿದರು.

ಒಟ್ಟು 20 ಅಭ್ಯರ್ಥಿಗಳ ವಿರುದ್ಧ ಉತ್ತರ ಪ್ರದೇಶ ಗೃಹ ಇಲಾಖೆ ತನಿಖೆ ನಡೆಸುತ್ತಿದೆ. ಈ ಬಗ್ಗೆ ನವದೆಹಲಿ ಮತ್ತು ಮಹಾರಾಷ್ಟ್ರದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. 20 ಅಭ್ಯರ್ಥಿಗಳ ಪೈಕಿ ಏಳು ಮಂದಿಯ ಪ್ರವೇಶ ಪ್ರಕ್ರಿಯೆಯನ್ನು ಈಗಾಗಲೇ ರದ್ದುಗೊಳಿಸಲಾಗಿದ್ದು, ಇತರರು ತಾವಾಗಿಯೇ ತ್ಯಜಿಸಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವು ವಿವಿಧ ವಿಭಾಗಗಳಲ್ಲಿ ಸಲ್ಲಿಸಿರುವ ಪ್ರಮಾಣಪತ್ರಗಳ ಬಗ್ಗೆ ತನಿಖೆ ನಡೆಸುವಂತೆ ಕೌನ್ಸೆಲಿಂಗ್ ಸಮಿತಿಗೆ ಸೂಚಿಸಿದೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ನಾಳೆ 74 ವರ್ಷ; ಬಿಜೆಪಿಯಿಂದ ಎಲ್ಲೆಲ್ಲಿ, ಏನೇನು ಕಾರ್ಯಕ್ರಮ?

ರಾಜ್ಯ ಸರ್ಕಾರದ ಅಧಿಕಾರಿಯ ಪ್ರಕಾರ, ಅಲ್ಪಸಂಖ್ಯಾತ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಯಿತು. ಸ್ಕ್ರೀನಿಂಗ್ ಸಮಯದಲ್ಲಿ, ಈ ಅಭ್ಯರ್ಥಿಗಳು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗೂ ಒಂದು ವಾರದ ಮೊದಲು ಅಲ್ಪಸಂಖ್ಯಾತ ಸ್ಥಾನಮಾನವನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ಅಭ್ಯರ್ಥಿಗಳ ರ್ಯಾಂಕ್ 10 ಲಕ್ಷಕ್ಕಿಂತ ಹೆಚ್ಚಿತ್ತು.

NEET ಕೌನ್ಸೆಲಿಂಗ್‌ನಲ್ಲಿ ಅಲ್ಪಸಂಖ್ಯಾತ ಮೀಸಲಾತಿ ಕೋಟಾವು ರಾಜ್ಯದ ಕಾಲೇಜುಗಳಿಗೆ ಲಭ್ಯವಿದೆ. ಆದರೆ, ಅಖಿಲ ಭಾರತ ಕೌನ್ಸೆಲಿಂಗ್‌ನಲ್ಲಿ ಶೇ. 15ರಷ್ಟು ಸರ್ಕಾರಿ ಕಾಲೇಜುಗಳಲ್ಲಿ ಅಲ್ಪಸಂಖ್ಯಾತರ ಕೋಟಾ ಇಲ್ಲ. ಅಲ್ಪಸಂಖ್ಯಾತರ ಕೋಟಾವು ರಾಜ್ಯ ಕೌನ್ಸೆಲಿಂಗ್ ಮತ್ತು ಕಾಲೇಜು ಆಧಾರಿತ ಕೌನ್ಸೆಲಿಂಗ್‌ನಲ್ಲಿ ಮಾತ್ರ ಅನ್ವಯಿಸುತ್ತದೆ.

ರಾಜ್ಯ- ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಅಲ್ಪಸಂಖ್ಯಾತ ಕೋಟಾ ಪ್ರವೇಶಕ್ಕಾಗಿ, ರಾಜ್ಯ ಕೌನ್ಸೆಲಿಂಗ್ ಸಮಿತಿಯು NEET ಅಂಕಗಳು, ಇತರ ಅರ್ಹತಾ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಪ್ರತ್ಯೇಕ ಮೆರಿಟ್ ಪಟ್ಟಿಯನ್ನು ರಚಿಸಿದೆ. ಅಭ್ಯರ್ಥಿಗಳು ಅಲ್ಪಸಂಖ್ಯಾತರ ಸ್ಥಿತಿ ಪ್ರಮಾಣಪತ್ರಗಳು, ಶೈಕ್ಷಣಿಕ ಪ್ರಮಾಣಪತ್ರಗಳು, NEET ಅಂಕಪಟ್ಟಿಗಳ ಸಂಬಂಧಿತ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಇದನ್ನೂ ಓದಿ: ಮೀಸಲಾತಿ ಕುರಿತು ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಬಿಜೆಪಿ

ಕಾಲೇಜು- ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಮೊದಲು ರಾಜ್ಯ ಸರ್ಕಾರವು ಗೊತ್ತುಪಡಿಸಿದ ಅಲ್ಪಸಂಖ್ಯಾತ ಸ್ಥಿತಿ ಪ್ರಮಾಣಪತ್ರವನ್ನು (MSC) ಸಲ್ಲಿಸಬೇಕು. ಅದನ್ನು ಅನುಸರಿಸಿ ಅವರು ನಿವಾಸ ಪ್ರಮಾಣಪತ್ರಗಳು, NEET ಅಂಕಪಟ್ಟಿ, ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಒಟ್ಟು ಶೇ. 85ರಷ್ಟು ಸೀಟುಗಳನ್ನು NEET UG ರಾಜ್ಯ ಕೋಟಾಕ್ಕೆ ಮೀಸಲಿಡಲಾಗಿದೆ. ಆದರೆ ಶೇ. 15ರಷ್ಟನ್ನು ಅಖಿಲ ಭಾರತ ಕೋಟಾಕ್ಕೆ ಮೀಸಲಿಡಲಾಗಿದೆ. ವರ್ಗವಾರು, ಒಟ್ಟು ಶೇ. 15ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ (SC) ವರ್ಗಗಳಿಗೆ ಮೀಸಲಿಡಲಾಗಿದೆ. ಶೇ. 7.5ರಷ್ಟು ಎಸ್‌ಟಿ, ಶೇ. 27ರಷ್ಟು OBC-NCL, ಶೇ. 10ರಷ್ಟು GEN- EWS, ಶೇ. 5ರಷ್ಟು ಅಂಗವೈಕಲ್ಯ (PwBD) ಮೀಸಲಾತಿ ನೀಡಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ