Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಣಿಪುರ ಹಿಂಸಾಚಾರಕ್ಕೆ ಹೆದರಿ ಮ್ಯಾನ್ಮಾರ್​ಗೆ ಹೋಗಿದ್ದ 212 ಮಂದಿಯನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ಸೇನೆ

ಮಣಿಪುರ(Manipur)ದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ(Violence) ಕ್ಕೆ ಹೆದರಿ  ಮ್ಯಾನ್ಮಾರ್​ಗೆ ಹೋಗಿ ನೆಲೆಸಿದ್ದ ಮೈಥಿ ಸಮುದಾಯದ 212 ಮಂದಿಯನ್ನು ಭಾರತೀಯ ಸೇನೆಯು ಸುರಕ್ಷಿತವಾಗಿ ಮಣಿಪುರಕ್ಕೆ ವಾಪಸ್ ಕರೆತಂದಿದೆ. ಮೇ 3 ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದ ಮೊರೆಹ್ ಪಟ್ಟಣದಿಂದ ನೆರೆಯ ಮ್ಯಾನ್ಮಾರ್‌ಗೆ ಹೋಗಿದ್ದ, 212 ಭಾರತೀಯರು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಮಣಿಪುರ ಹಿಂಸಾಚಾರಕ್ಕೆ ಹೆದರಿ ಮ್ಯಾನ್ಮಾರ್​ಗೆ ಹೋಗಿದ್ದ 212 ಮಂದಿಯನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ಸೇನೆ
ಭಾರತೀಯ ಸೇನೆImage Credit source: ABP Live
Follow us
ನಯನಾ ರಾಜೀವ್
|

Updated on:Aug 19, 2023 | 11:01 AM

ಮಣಿಪುರ(Manipur)ದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ(Violence) ಕ್ಕೆ ಹೆದರಿ  ಮ್ಯಾನ್ಮಾರ್​ಗೆ ಹೋಗಿ ನೆಲೆಸಿದ್ದ ಮೈಥಿ ಸಮುದಾಯದ 212 ಮಂದಿಯನ್ನು ಭಾರತೀಯ ಸೇನೆಯು ಸುರಕ್ಷಿತವಾಗಿ ಮಣಿಪುರಕ್ಕೆ ವಾಪಸ್ ಕರೆತಂದಿದೆ. ಮೇ 3 ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದ ಮೊರೆಹ್ ಪಟ್ಟಣದಿಂದ ನೆರೆಯ ಮ್ಯಾನ್ಮಾರ್‌ಗೆ ಹೋಗಿದ್ದ, 212 ಭಾರತೀಯರು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ ಎಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ಮಾಹಿತಿ ನೀಡಿದ್ದಾರೆ.

ಜನರನ್ನು ಸುರಕ್ಷಿತವಾಗಿ ಕರೆತಂದ ಭಾರತೀಯ ಸೇನೆಗೆ ಬಿರೇನ್ ಸಿಂಗ್ ಧನ್ಯವಾದ ಸಲ್ಲಿಸಿದರು. ಇವರೆಲ್ಲರೂ ಮೈಥಿ ಸಮುದಾಯಕ್ಕೆ ಸೇರಿದವರು, ಈ ಜನರನ್ನು ಮನೆಗೆ ಕರೆತಂದ ಭಾರತೀಯ ಸೇನೆಗೆ ಧನ್ಯವಾದಗಳು ಎಂದು ಸಿಎಂ ಹೇಳಿದರು.

GOC ಈಸ್ಟರ್ನ್ ಕಮಾಂಡ್, ಲೆಫ್ಟಿನೆಂಟ್ ಜನರಲ್ RP ಕಲಿತಾ, GOC 3 ಕಾರ್ಪ್, ಲೆಫ್ಟಿನೆಂಟ್ ಜನರಲ್ HS ಸಾಹಿ ಮತ್ತು 5 AR ನ CO, ಕರ್ನಲ್ ರಾಹುಲ್ ಜೈನ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಮಣಿಪುರದ ರಾಜಧಾನಿ ಇಂಫಾಲ್‌ನಿಂದ ಸುಮಾರು 110 ಕಿಮೀ ದೂರದಲ್ಲಿರುವ ಮೋರೆ ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ.

ಮತ್ತಷ್ಟು ಓದಿ: ಮಣಿಪುರದಲ್ಲಿ ದ್ವೇಷದ ಬೀಜವನ್ನು ಬಿತ್ತಿದ್ದು ಯಾರು? ಕಾಂಗ್ರೆಸ್ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ

ಮೊರೆಹ್ ಕುಕಿಗಳು, ಮೈಥಿ ಮತ್ತು ತಮಿಳರ ಮಿಶ್ರ ಜನಸಂಖ್ಯೆಯನ್ನು ಹೊಂದಿದೆ. ಇಲ್ಲಿ ಬೇರೆ ಸಮುದಾಯದವರೂ ಇದ್ದಾರೆ. ಜಾತಿ-ಸಂಘರ್ಷದಿಂದ ನಲುಗಿರುವ ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ಮರುಸ್ಥಾಪಿಸುವುದು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಹೇಳಿದರು.

ಬಿರೇನ್ ಸಿಂಗ್ ಟ್ವೀಟ್​

ಗಮನಾರ್ಹವಾಗಿ, ಮೇ 3 ರಂದು, ಮೈಥಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನದ ಬೇಡಿಕೆಯನ್ನು ಪ್ರತಿಭಟಿಸಲು ಆಯೋಜಿಸಲಾದ ಬುಡಕಟ್ಟು ಮೆರವಣಿಗೆಯಲ್ಲಿ ಹಿಂಸಾಚಾರ ನಡೆಯಿತು. ಹಿಂಸಾಚಾರದಲ್ಲಿ ಇದುವರೆಗೆ 160 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ನಿರಾಶ್ರಿತರಾಗಿದ್ದಾರೆ.

ಮಣಿಪುರದ ಒಟ್ಟು ಜನಸಂಖ್ಯೆಯಲ್ಲಿ, ಇಂಫಾಲ್ ಕಣಿವೆಯಲ್ಲಿ ವಾಸಿಸುವ ಮೈಥಿ ಸಮುದಾಯದ ಜನರ ಸಂಖ್ಯೆ ಸುಮಾರು 53 ಪ್ರತಿಶತದಷ್ಟಿದೆ, ಬುಡಕಟ್ಟು ನಾಗಾ ಮತ್ತು ಕುಕಿ ಸಮುದಾಯವು ಶೇಕಡಾ 40 ರಷ್ಟಿದೆ ಮತ್ತು ಅವರು ಹೆಚ್ಚಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವವರಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:57 am, Sat, 19 August 23

Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ