ಜಮ್ಮು: ಇಂದು ಮುಂಜಾನೆ ಜಮ್ಮು-ಕಾಶ್ಮಿರ (Jammu-Kashmir)ದ ಕತ್ರಾದಲ್ಲಿ ಭೂಕಂಪ (Earthquake) ಉಂಟಾಗಿದ್ದು, ಸ್ಥಳೀಯರನ್ನು ದಿಗಿಲುಗೊಳಿಸಿತ್ತು. ಅದೃಷ್ಟವಶಾತ್ ಭಾರಿ ಪ್ರಮಾಣದ ಭೂಕಂಪನ ಆಗಲಿಲ್ಲ. ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದೆ ಎಂದು ಭೂಕಂಪನ ಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Centre For Seismology -NCS) ಹೇಳಿದೆ. ಜಮ್ಮು-ಕಾಶ್ಮೀರದ ಆಗ್ನೇಯ ದಿಕ್ಕಿನಿಂದ 54 ಕಿಮೀ ದೂರದಲ್ಲಿ, ಭೂಮಿಯಿಂದ 5 ಕಿಮೀ ಆಳದಲ್ಲಿ ಭೂಮಿ ನಡುಗಿದೆ ಎಂದೂ ಹೇಳಲಾಗಿದೆ.
Earthquake of Magnitude:3.6, Occurred on 19-08-2021, 05:08:34 IST, Lat: 32.70 & Long: 75.40, Depth: 5 Km ,Location: 54km SE of Katra, Jammu and Kashmir, India for more information download the BhooKamp App https://t.co/5ENuwPU3hf pic.twitter.com/ryCA0AjGqb
— National Center for Seismology (@NCS_Earthquake) August 19, 2021
ತ್ರಿಶೂರ್ನಲ್ಲಿಯೂ ಭೂಕಂಪ
ಇನ್ನು ಕೇರಳದ ತ್ರಿಶೂರ್ ಜಿಲ್ಲೆಯ ಪೀಚಿ-ವಜನಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಬಧವಾರ ಸ್ವಲ್ಪ ಮಟ್ಟಿಗೆ ಭೂಕಂಪ ಸಂಭವಿಸಿದೆ. ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.3ರಷ್ಟು ದಾಖಲಾಗಿದೆ. ಭೂಮಿ ಕೆಲವು ಸೆಕೆಂಡ್ಗಳ ಕಾಲ ನಡುಗಿದ್ದು, ಅನುಭವಕ್ಕೆ ಬಂತು. ಈ ವೇಳೆ ಶಬ್ದವಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಅನೇಕರು ಹೆದರಿ ಮನೆಯಿಂದ ಹೊರಕ್ಕೆ ಓಡಿದ್ದಾರೆ. ಪೀಚಿ, ಪಟ್ಟಿಕಾಡ್, ವನಿಯಂಪಾರಗಳಲ್ಲಿ ಭೂಮಿ ನಡುಗಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಆ ಕಾಲದಲ್ಲೇ ಶಂಕರ್ ನಾಗ್ ಲ್ಯಾಪ್ಟಾಪ್ ಬಳಸುತ್ತಿದ್ರು’; ಅಚ್ಚರಿ ವಿಚಾರ ಹಂಚಿಕೊಂಡ ಬಿರಾದಾರ್
ವರಮಹಾಲಕ್ಷ್ಮೀ ಹಬ್ಬಕ್ಕೆ ಖರೀದಿಗೆ ಮುಗಿಬಿದ್ದ ಜನ; ಕೆ.ಆರ್.ಪುರಂನಲ್ಲಿ 2 ಕಿಲೋಮೀಟರ್ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್
(3.6 magnitude earthquake hit in Jammu and Kashmir)
Published On - 9:58 am, Thu, 19 August 21