ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು; ಉತ್ತರ ಪ್ರದೇಶದಲ್ಲಿ ಭಾರಿ ದುರಂತ

ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 4 ವರ್ಷದ ಬಾಲಕಿಯೊಬ್ಬಳು, ಆಕಸ್ಮಿಕವಾಗಿ ಕೆಮ್ಮಿನ ಸಿರಪ್‌ ಬಾಟಲಿಯ ಪೂರ್ತಿ ಔಷಧಿಯನ್ನು ಸೇವಿಸಿದ ಪರಿಣಾಮವಾಗಿ ಮೃತಪಟ್ಟಿದ್ದಾಳೆ. ಈ ದುರಂತ ಘಟನೆಯು ಪೆರಾಡಿ ಗ್ರಾಮದಲ್ಲಿರುವ ಸಂಬಂಧಿಕರೊಬ್ಬರ ಮನೆಯಲ್ಲಿ ನಡೆದಿದೆ. ಮಗು ತನ್ನ ಕುಟುಂಬದೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿತ್ತು. ಆಗ ಮನೆಯವರ ಗಮನಕ್ಕೆ ಬಾರದೆ ಮಗು ಸಿಹಿಯಾದ ರುಚಿಯ ಕೆಮ್ಮಿನ ಸಿರಪ್ ಬಾಟಲಿಯನ್ನು ಖಾಲಿ ಮಾಡಿದೆ. ಇದರಿಂದ ಮಗುವಿನ ಜೀವವೇ ಹೋಗಿದೆ.

ಅಜ್ಜಿಯ ಕೆಮ್ಮಿನ ಸಿರಪ್ ಕುಡಿದು 4 ವರ್ಷದ ಮಗು ಸಾವು; ಉತ್ತರ ಪ್ರದೇಶದಲ್ಲಿ ಭಾರಿ ದುರಂತ
Cough Syrup

Updated on: Nov 06, 2026 | 11:01 PM

ಲಕ್ನೋ, ನವೆಂಬರ್ 6: ಮನೆಯಲ್ಲಿ ಮಕ್ಕಳಿದ್ದರೆ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಕೆಲವೊಮ್ಮೆ ನಾವು ಮಾಡುವ ಸಣ್ಣ ಎಡವಟ್ಟು ಕೂಡ ಮಕ್ಕಳ ಜೀವಕ್ಕೇ ಆಪತ್ತು ತರಬಹುದು. ಉತ್ತರ ಪ್ರದೇಶದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದ್ದು, ಇಡೀ ಬಾಟಲಿ ಕೆಮ್ಮಿನ ಸಿರಪ್ ಸೇವಿಸಿದ 4 ವರ್ಷದ ಹೆಣ್ಣು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಮನೆಯಲ್ಲಿ ಪೋಷಕರ ಕಣ್ಣು ತಪ್ಪಿಸಿ ಮಗು ಕೆಮ್ಮಿನ ಸಿರಪ್ ಕುಡಿದಿದ್ದು, ಕುಟುಂಬಸ್ಥರಲ್ಲಿ ಶೋಕ ಉಂಟಾಗಿದೆ.

ಮನೆಯಲ್ಲಿಟ್ಟಿದ್ದ ಕೆಮ್ಮಿನ ಸಿರಪ್ ಬಾಟಲಿ ಜೊತೆ ಆಟವಾಡುತ್ತಿದ್ದ ಮಗು ಪೋಷಕರು ಬೇರೆ ಕೆಲಸದಲ್ಲಿದ್ದಾಗ ಆ ಬಾಟಲಿಯಲ್ಲಿದ್ದ ಪೂರ್ತಿ ಸಿರಪ್ ಅನ್ನು ಕುಡಿದಿದೆ. ಸ್ವಲ್ಪ ಸಮಯದ ನಂತರ ಮಗು ಅತಿಯಾದ ತೂಕಡಿಕೆ ಮತ್ತು ಅಸ್ವಸ್ಥತೆಗೆ ಒಳಗಾದಾಗ ಪೋಷಕರು ಗಾಬರಿಯಾಗಿದ್ದಾರೆ. ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Loading...

ಇದನ್ನೂ ಓದಿ: ‘ಗೆಳೆಯನ ದೆವ್ವ ಹೆದರಿಸುತ್ತದೆ’; ಕೊಲೆ ಮಾಡಿ 20 ದಿನದ ಬಳಿಕ ಪೊಲೀಸರಿಗೆ ಶರಣಾದ ಯುವಕ

ಆಗ ವೈದ್ಯರು ಸಿರಪ್‌ನಲ್ಲಿರುವ ರಾಸಾಯನಿಕಗಳ ಅತಿಯಾದ ಪ್ರಮಾಣವನ್ನು ಹೊರತೆಗೆಯಲು ಮತ್ತು ಮಗುವನ್ನು ರಕ್ಷಿಸಲು ತೀವ್ರ ಯತ್ನ ನಡೆಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಗು ಕೊನೆಯುಸಿರೆಳೆಯಿತು.

ನವೆಂಬರ್ 5ರಂದು ನಡೆಯಲಿದ್ದ ನಾಮಕರಣ ಸಮಾರಂಭದಲ್ಲಿ ಪಾಲ್ಗೊಳ್ಳಲು, ಬಾಲಕಿಯು ತನ್ನ ತಾಯಿ ರೆಹಾನಾ ಮತ್ತು ಅಜ್ಜಿ ಶಬೀನಾ ಬೇಗಂ ಅವರೊಂದಿಗೆ ಆ ಗ್ರಾಮಕ್ಕೆ ತೆರಳಿದ್ದಳು. ಕುಟುಂಬ ಸದಸ್ಯರ ಪ್ರಕಾರ, 70 ವರ್ಷದ ಸಂಬಂಧಿಕರೊಬ್ಬರು ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದರು. ಅವರು ಬುಧವಾರ ಸಂಜೆ ತಮ್ಮ ಕೋಣೆಯಲ್ಲಿದ್ದ ಬಾಟಲಿಯಿಂದ ಸಿರಪ್ ಸೇವಿಸಿದ್ದರು. ಆ ಬಾಟಲಿಯನ್ನು ಅಲ್ಲೇ ಇಡಲಾಗಿತ್ತು. ಮಾರನೇ ದಿನ ಮಗು ಆಟವಾಡುತ್ತಾ ಆ ಬಾಟಲಿ ತೆಗೆದು ನೆಕ್ಕಿದಾಗ ಸಿಹಿಯಾದ ರುಚಿ ಇಷ್ಟವಾಗಿ ಇಡೀ ಬಾಟಲಿ ಖಾಲಿ ಮಾಡಿದೆ.

ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ನೆರವಾದ ಪುರೋಹಿತನ ಕೊಲೆ: ಆರೋಪಿ ಪ್ಲ್ಯಾನ್​​ಗೆ ಪೊಲೀಸರೇ ದಂಗು!

ಹೀಗಾಗಿ, ಸಣ್ಣ ಮಕ್ಕಳಿರುವ ಮನೆಯಲ್ಲಿ ಯಾವುದೇ ರೀತಿಯ ಔಷಧಿಗಳು, ಸಿಹಿ ರುಚಿಯ ಸಿರಪ್‌ಗಳನ್ನು ಮಕ್ಕಳ ಕೈಗೆ ಎಟುಕದಂತೆ ಎತ್ತರದ ಹಾಗೂ ಸುರಕ್ಷಿತ ಜಾಗದಲ್ಲಿಡಬೇಕು. ಯಾವುದೇ ಕಾರಣಕ್ಕೂ ವೈದ್ಯರ ಚೀಟಿ ಮತ್ತು ನಿಗದಿತ ಪ್ರಮಾಣವಿಲ್ಲದೆ ಮಕ್ಕಳಿಗೆ ಸಿರಪ್ ಅಥವಾ ಮಾತ್ರೆಗಳನ್ನು ನೀಡಬಾರದು ಎಂದು ವೈದ್ಯಕೀಯ ತಜ್ಞರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Fri, 6 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us