ಉತ್ತರಾಖಂಡ: ಹರಿದ್ವಾರ ಜಿಲ್ಲಾ ಕಾರಾಗೃಹದಲ್ಲಿರುವ 43 ಕೈದಿಗಳಿಗೆ ಕೋವಿಡ್
ಸೋಮವಾರ ಉತ್ತರಾಖಂಡದಲ್ಲಿ ಕೋವಿಡ್ನಿಂದಾಗಿ ಮೂವರು ಸಾವಿಗೀಡಾಗಿದ್ದರು. ಕಳೆದ ವಾರ ಉತ್ತರಾಖಂಡ ಆರೋಗ್ಯ ಇಲಾಖೆ ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಮೆಜಿಸ್ಟ್ರೇಟ್ಗಳಿಗೆ ಸಲಹೆ ಸೂಚನೆ ನೀಡಿತ್ತು.
ಹರಿದ್ವಾರ್: ದೇಶದಲ್ಲಿ ಮತ್ತೆ ಕೋವಿಡ್-19 (Covid 19) ಪ್ರಕರಣ ಏರಿಕೆಯಾಗುತ್ತಿದೆ. ಉತ್ತರಾಖಂಡದ ಹರಿದ್ವಾರದಲ್ಲಿರುವ (Haridwar) ಜಿಲ್ಲಾ ಕಾರಾಗೃಹದಲ್ಲಿ 43 ಕೈದಿಗಳಿಗೆ ಕೋವಿಡ್ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೋವಿಡ್ ಪರೀಕ್ಷೆಗಾಗಿ 425 ಕೈದಿಗಳ ಮಾದರಿ ಸಂಗ್ರಹಿಸಲಾಗಿದ್ದು, ಅದರಲ್ಲಿ 43 ಮಂದಿಗೆ ಕೋವಿಡ್ ಸೋಂಕು ಇರುವುದಾಗಿ ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಖಾಗೇಂದ್ರ ಸಿಂಗ್ ಬುಧವಾರ ಹೇಳಿದ್ದಾರೆ. ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜುಲೈ 28-29 ಕ್ಕೆ ಜೈಲಿನಲ್ಲಿರುವ ಕೈದಿಗಳಿಗೆ ಹೆಪಟೈಟಿಸ್ ಮತ್ತು ಇತರ ಸೋಂಕು ಇದೆಯೇ ಎಂದು ಪರೀಕ್ಷೆ ನಡೆಸಲಾಗಿತ್ತು ಎಂದು ಅಧಿಕಾರಿ ಹೇಳಿದ್ದಾರೆ. ಸೋಮವಾರ ಉತ್ತರಾಖಂಡದಲ್ಲಿ ಕೋವಿಡ್ನಿಂದಾಗಿ ಮೂವರು ಸಾವಿಗೀಡಾಗಿದ್ದರು. ಕಳೆದ ವಾರ ಉತ್ತರಾಖಂಡ ಆರೋಗ್ಯ ಇಲಾಖೆ ರಾಜ್ಯದಲ್ಲಿ ಸೋಂಕು ಹರಡುವಿಕೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಮೆಜಿಸ್ಟ್ರೇಟ್ಗಳಿಗೆ ಸಲಹೆ ಸೂಚನೆ ನೀಡಿತ್ತು.
ರಾಷ್ಟ್ರೀಯ ಆರೋಗ್ಯ ಮಿಷನ್ ಹೊರಡಿಸಿದ ಸಲಹೆಯಲ್ಲಿ ರೋಗ ನಿಯಂತ್ರಣಕ್ಕಾಗಿ ಪರೀಕ್ಷೆ, ನಿಗಾ, ಚಿಕಿತ್ಸೆ, ಲಸಿಕೆ ಮತ್ತು ಕೋವಿಡ್ ನಿಯಂತ್ರಿಸಲು ಇರುವ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದೆ. ರಾಜ್ಯ ಸರ್ಕಾರವು ಕೋವಿಡ್ ನಿಯಂಕ್ರಣಕ್ಕೆ ಸೂಕ್ತ ನಡವಳಿಕೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಲಸಿಕೆ ವ್ಯಾಪ್ತಿ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ.