ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ 44 ಮಹಿಳೆಯರನ್ನು ತಡೆದು, ಅವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಏರ್ಪೋರ್ಟ್ ಅಧಿಕಾರಿಗಳು
ನಾವೀಗ 44 ಮಹಿಳೆಯರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಇವರಿಗೆ ವೀಸಾ ಮಾಡಿಸಿಕೊಟ್ಟ ಏಜೆಂಟ್ಗಳನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 44 ಮಹಿಳೆಯರನ್ನು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಅಧಿಕಾರಿಗಳು ತಡೆದಿದ್ದಾರೆ. ಇವರೆಲ್ಲ ಹೈದರಾಬಾದ್ನಿಂದ ಕುವೈತ್ಗೆ ಹೊರಟಿದ್ದರು. ಆದರೆ ವೀಸಾ ನಿಯಮ ಉಲ್ಲಂಘನೆ ಮಾಡಿದ್ದರು. ಈ 44 ಮಹಿಳೆಯರು ಎರಡು ವೀಸಾ ಹೊಂದಿದ್ದರು ಎಂದು ಏರ್ಪೋರ್ಟ್ ಅಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಎಎನ್ಐ ಜತೆ ಮಾತನಾಡಿದ ಅವರು, ಮಹಿಳೆಯರೆಲ್ಲರೂ ತಮಿಳುನಾಡು ಮತ್ತು ಗೋವಾದವರಾಗಿದ್ದಾರೆ. ಇವರ ಬಳಿಯಿದ್ದ ಎರಡು ವೀಸಾಗಳಲ್ಲಿ ಒಂದು ಉದ್ಯೋಗಿಗಳ ವೀಸಾವಾಗಿತ್ತು, ಇನ್ನೊಂದು ಸಂದರ್ಶಕ (Visiters)ರ ವೀಸಾವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ 44 ಮಹಿಳೆಯರ ವಿರುದ್ಧ ವಿಮಾನ ನಿಲ್ದಾಣ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗೆ ಎರಡು ವೀಸಾಗಳನ್ನು ಹೊಂದಿದ್ದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಂಥ ಪ್ರಕರಣಗಳು ಈಗೀಗ ಹೆಚ್ಚುತ್ತಿವೆ. ಮೊದಲು ವಿಸಿಟರ್ಟ್ ವೀಸಾವನ್ನು ಪಡೆಯಲು ಅರ್ಜಿ ಹಾಕಿ, ಅದನ್ನು ಹೊಂದುತ್ತಾರೆ. ಅದಾದ ಬಳಿಕ ವಲಸೆ ನಿಯಮದಡಿ ಉದ್ಯೋಗ ವೀಸಾ ಹೊಂದುತ್ತಾರೆ. ಇದು ವೀಸಾ ನಿಯಮ ಉಲ್ಲಂಘನೆಯಾಗಿದೆ. ನಾವೀಗ 44 ಮಹಿಳೆಯರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಇವರಿಗೆ ವೀಸಾ ಮಾಡಿಸಿಕೊಟ್ಟ ಏಜೆಂಟ್ಗಳನ್ನು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ಗೆ ಆಸ್ಟ್ರೇಲಿಯಾದಿಂದಲೂ ರಾಜತಾಂತ್ರಿಕ ಬಹಿಷ್ಕಾರ; ಕ್ರೀಡಾಪಟುಗಳಿಗೆ ಇಲ್ಲ ನಿರ್ಬಂಧ