ಬಿಹಾರದ ಗಂದಕ್ ನದಿಯಲ್ಲಿ ದೋಣಿ ಮುಳುಗಿ 5 ಜನ ಸಾವು, ಐವರು ನಾಪತ್ತೆ

| Updated By: ಸುಷ್ಮಾ ಚಕ್ರೆ

Updated on: Aug 17, 2021 | 5:00 PM

ಕುಚೈಕೋಟ್​ನ ರಾಮ್​ಜೀತಾದಿಂದ ವಾಪಾಸ್ ಬರುವಾಗ ಮಾರ್ಗಮಧ್ಯೆ ನದಿಯಲ್ಲಿ ದೋಣಿ ಮಗುಚಿದೆ. ದುರಂತ ನಡೆಯುವಾಗ ದೋಣಿಯಲ್ಲಿ 10 ಜನರಿದ್ದರು. ಅವರಲ್ಲಿ ಐವರ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಐವರು ಕೂಡ ಬದುಕಿರುವ ಸಾಧ್ಯತೆಯಿಲ್ಲ.

ಬಿಹಾರದ ಗಂದಕ್ ನದಿಯಲ್ಲಿ ದೋಣಿ ಮುಳುಗಿ 5 ಜನ ಸಾವು, ಐವರು ನಾಪತ್ತೆ
ಸಾಂದರ್ಭಿಕ ಚಿತ್ರ
Follow us on

ಪಾಟ್ನಾ: ಬಿಹಾರ ರಾಜ್ಯದ ಗೋಪಾಲ್​ಗಂಜ್ ಜಿಲ್ಲೆಯ ಗಂದಕ್ ನದಿಯಲ್ಲಿ ದೋಣಿ ಮುಳುಗಿ 5 ಜನರು ಸಾವನ್ನಪ್ಪಿದ್ದಾರೆ, ಐವರು ನಾಪತ್ತೆಯಾಗಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳು ಹಾಗೂ ಓರ್ವ ಮಹಿಳೆ ಕೂಡ ಸೇರಿದ್ದಾರೆ. ದುರಂತ ನಡೆಯುವಾಗ ದೋಣಿಯಲ್ಲಿ 10 ಜನರಿದ್ದರು. ಅವರಲ್ಲಿ ಐವರ ಶವ ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಐವರು ಕೂಡ ಬದುಕಿರುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಇನ್ನೂ ನಾಪತ್ತೆಯಾದವರ ಸುಳಿವು ಸಿಕ್ಕಿಲ್ಲ.

ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದವರನ್ನು ಆಕಾಶ್ (13), ಪವನ್ ಕುಮಾರ್ (10), ಬ್ರಜೇಶ್ ಗುಪ್ತಾ, ಪುಷ್ಪಾ ದೇವಿ ಎಂದು ಗುರುತಿಸಲಾಗಿದೆ. ಮತ್ತೊಬ್ಬರು ಅಪರಿಚಿತರು ಕೂಡ ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಕುಚೈಕೋಟ್​ನ ರಾಮ್​ಜೀತಾದಿಂದ ವಾಪಾಸ್ ಬರುವಾಗ ಮಾರ್ಗಮಧ್ಯೆ ನದಿಯಲ್ಲಿ ದೋಣಿ ಮಗುಚಿದೆ.

ನಿನ್ನೆ ಮಳೆಯಿಂದಾಗಿ ಬಿಹಾರದ ಗಂದಕ್ ನದಿಯಲ್ಲಿ ಅಲೆಗಳು ಹೆಚ್ಚಾಗಿದ್ದವು. ಹೀಗಾಗಿ, ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ಮಾಹಿತಿ ಲಭ್ಯವಾಗಿದೆ.

ಇದೇ ರೀತಿ ಬಿಹಾರದ ಮುಜಾಫರ್​ಪುರ ಜಿಲ್ಲೆಯಲ್ಲಿ ವಿದ್ಯುತ್ ತಗುಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವಿದ್ಯುತ್ ಸಂಸ್ಥೆಯ ನಿರ್ಲಕ್ಷ್ಯದಿಂದಲೇ ಈ ದುರ್ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:Afghanistan: ಅಫ್ಘಾನಿಸ್ತಾನದಲ್ಲಿ ಭೂಕಂಪ, ಕಾಬೂಲ್​ ಹಿಂದಿನ ಸರ್ಕಾರಕ್ಕಿಂತ ತಾಲೀಬಾನಿಗಳ ಕೈಯಲ್ಲಿ ಸುರಕ್ಷಿತವಾಗಿದೆ ಎಂದ ರಷ್ಯಾ! 

MEA Helpline Number: ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗೆ ಸಹಾಯವಾಣಿ ಆರಂಭ

(5 Dead 5 Missing After Boat Capsizes in Bihar Gandak River)