Zika Virus: ಕೇರಳದಲ್ಲಿ ಇಂದು ಮತ್ತೆ 5 ಝಿಕಾ ವೈರಸ್​ ಪ್ರಕರಣಗಳು ಪತ್ತೆ; ಏಪ್ರಿಲ್​​ನಲ್ಲೇ ಈ ಜ್ವರ ಪ್ರಾರಂಭವಾಗಿದೆಯೆಂದ ವೈದ್ಯರು

ತಿರುವನಂತಪುರಂನಲ್ಲಿ ಝಿಕಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಒಂದು ನಿಯಂತ್ರಣಾ ಕೊಠಡಿ ತೆರೆಯಲಾಗಿದೆ. ಅದರ ಮೂಲಕ ಸೊಳ್ಳೆಗಳ ಮೊಟ್ಟೆ ನಾಶ ಮಾಡುವ, ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

Zika Virus: ಕೇರಳದಲ್ಲಿ ಇಂದು ಮತ್ತೆ 5 ಝಿಕಾ ವೈರಸ್​ ಪ್ರಕರಣಗಳು ಪತ್ತೆ; ಏಪ್ರಿಲ್​​ನಲ್ಲೇ ಈ ಜ್ವರ ಪ್ರಾರಂಭವಾಗಿದೆಯೆಂದ ವೈದ್ಯರು
ರೋಗ ಹರಡುವ ಸೊಳ್ಳೆ
Follow us
TV9 Web
| Updated By: Lakshmi Hegde

Updated on: Jul 15, 2021 | 3:19 PM

ಕೇರಳ: ರಾಜ್ಯದಲ್ಲಿ ಮತ್ತೆ 5 ಝಿಕಾ ವೈರಸ್​ (Zika Virus) ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಇದೀಗ ಝಿಕಾ ಸೋಂಕು ಕಾಣಿಸಿಕೊಂಡ ಎಲ್ಲರೂ ತಿರುವನಂತಪುರದವರೇ ಆಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​, ಇಂದು ಮತ್ತೆ ಐವರಲ್ಲಿ ಝಿಕಾ ವೈರಸ್ ಕಾಣಿಸಿಕೊಂಡಿದೆ. ಅದರಲ್ಲಿ ತಿರುವನಂತಪುರ (Thiruvananthapuram)ದ ಅನಾಯಾರದ ಇಬ್ಬರು, ಕುನ್ನುಕುಜಿ, ಪಾಟ್ಟೋಮ್ ಮತ್ತು ಈಸ್ಟ್ ಫೋರ್ಟ್​ನ ತಲಾ ಒಬ್ಬರು ಇದ್ದಾರೆ. ಇದರೊಂದಿಗೆ ಕೇರಳದಲ್ಲಿ ಜಿಕಾ ವೈರಸ್ ಸೋಂಕಿತರ ಒಟ್ಟೂ ಸಂಖ್ಯೆ 28ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಅನಾಯಾರದ ಮೂರು ಕಿಮಿ ಸುತ್ತಲಿನ ಪ್ರದೇಶದಲ್ಲೇ ಜಿಕಾ ವೈರಸ್​ ಕಾಣಿಸಿಕೊಂಡಿದ್ದು, ಅದು ಬೇರೆ ಹೆಚ್ಚು ಪ್ರದೇಶಗಳಿಗೆ ಹರಡದಂತೆ ತಡೆಯಲು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸೊಳ್ಳೆಗಳನ್ನು ನಾಶ ಮಾಡಲು ಸ್ವಚ್ಛತಾ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ವೀಣಾ ಹೇಳಿದ್ದಾರೆ.

ತಿರುವನಂತಪುರಂನಲ್ಲಿ ಝಿಕಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಒಂದು ನಿಯಂತ್ರಣಾ ಕೊಠಡಿ ತೆರೆಯಲಾಗಿದೆ. ಅದರ ಮೂಲಕ ಸೊಳ್ಳೆಗಳ ಮೊಟ್ಟೆ ನಾಶ ಮಾಡುವ, ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರೊದಿಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಏಪ್ರಿಲ್​​ನಲ್ಲೇ ಕಾಣಿಸಿಕೊಂಡಿರಬಹುದು ಕೇರಳದಲ್ಲಿ ಈಗೀಗ ಝಿಕಾ ವೈರಸ್​​ನ ಪ್ರಕರಣಗಳು ಪತ್ತೆಯಾಗುತ್ತಿದ್ದರೂ ಅದು ಏಪ್ರಿಲ್​​ನಲ್ಲೇ ಶುರುವಾಗಿದೆ ಎಂದು ರಾಜ್ಯದ ಕೆಲವು ಆಸ್ಪತ್ರೆಗಳ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಏಪ್ರಿಲ್​ನಲ್ಲಿ ಕೊರೊನಾ ಲಾಕ್​ಡೌನ್​ ಇದ್ದಿದ್ದರಿಂದ ಝಿಕಾ ವೈರಸ್​ ತಪಾಸಣೆ ಸರಿಯಾಗಿ ಆಗಲಿಲ್ಲ. ವೈರಸ್​ನ ಸೌಮ್ಯ ಲಕ್ಷಣಗಳು ಆಗಲೇ ಕಂಡುಬಂದಿದ್ದವು. ಜ್ವರ, ಕಣ್ಣು ಕೆಂಪಾಗುವುದು, ಮೈಮೇಲೆ ದದ್ದು ಏಳುವಂತ ಲಕ್ಷಣಗಳುಳ್ಳ ಜ್ವರ ಏಪ್ರಿಲ್​ನಲ್ಲಿ ಹಲವರಿಗೆ ಬಂದಿದೆ. ಇದೆಲ್ಲ ಜಿಕಾದ ಲಕ್ಷಣಗಳೇ ಆಗಿವೆ ಎಂದು ಕಿಮ್ಸ್​ಹೆಲ್ತ್​​ನ ಹಿರಿಯ ವೈದ್ಯ ಡಾ. ರಾಜಲಕ್ಷ್ಮೀ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಒಂದಾದ ಹಾವು-ಮುಂಗುಸಿ; ಮಂಜುಗೆ ಪ್ರೀತಿಯಿಂದ ಕೈ ತುತ್ತು ತಿನ್ನಿಸಿದ ಪ್ರಶಾಂತ್​

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ