AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್​​ಮೆಂಟ್​ನ ಲಿಫ್ಟ್​​ ಒಳಗೆ ಸಿಲುಕಿ 5 ವರ್ಷದ ಬಾಲಕ ಸಾವು

ಅಪಾರ್ಟ್​​ಮೆಂಟ್​​ನ ಲಿಫ್ಟ್​​ನಲ್ಲಿ ಸಿಲುಕಿ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ನವಸಾರಿ ಜಿಲ್ಲೆಯ ವಿಜಲ್ಪುರ್ ಪ್ರದೇಶದಲ್ಲಿ ನಡೆದಿದೆ. ಪಡೆದ ಮಾಹಿತಿಯ ಪ್ರಕಾರ, ನೀರವ್ ಸ್ಕ್ವೇರ್ ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಮಹಡಿಯಿಂದ ಕೆಳಗೆ ಹೋಗುವಾಗ ಬಾಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ. ನಂತರ ಲಿಫ್ಟ್ ಅನ್ನು ಕಟ್ಟರ್‌ನಿಂದ ಕತ್ತರಿಸಿ ಬಾಲಕನನ್ನು ಹೊರ ತೆಗೆಯಲಾಯಿತು.

ಅಪಾರ್ಟ್​​ಮೆಂಟ್​ನ ಲಿಫ್ಟ್​​ ಒಳಗೆ ಸಿಲುಕಿ 5 ವರ್ಷದ ಬಾಲಕ ಸಾವು
ಮೃತ ಬಾಲಕ
ನಯನಾ ರಾಜೀವ್
|

Updated on: Aug 25, 2025 | 2:00 PM

Share

ನವ್ಸಾರಿ, ಆಗಸ್ಟ್​ 25: ಸದಾ ತಾಯಿಯ ಜತೆಗೆ ಎಲ್ಲಾ ಕಡೆಯೂ ಸುತ್ತಾಡುವ ಬಾಲಕ ಇಂದು ಒಬ್ಬನೇ ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಅಪಾರ್ಟ್​​ಮೆಂಟ್​​ನ ಲಿಫ್ಟ್(Lift)​​ನಲ್ಲಿ ಸಿಲುಕಿ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ  ನವ್ಸಾರಿ ಜಿಲ್ಲೆಯ ವಿಜಲ್ಪುರ್ ಪ್ರದೇಶದಲ್ಲಿ ನಡೆದಿದೆ. ಪಡೆದ ಮಾಹಿತಿಯ ಪ್ರಕಾರ, ನೀರವ್ ಸ್ಕ್ವೇರ್ ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಮಹಡಿಯಿಂದ ಕೆಳಗೆ ಹೋಗುವಾಗ ಬಾಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ. ನಂತರ ಲಿಫ್ಟ್ ಅನ್ನು ಕಟ್ಟರ್‌ನಿಂದ ಕತ್ತರಿಸಿ ಬಾಲಕನನ್ನು ಹೊರ ತೆಗೆಯಲಾಯಿತು.

ತಾಯಿ ಮನೆಗೆ ಬೀಗ ಹಾಕುತ್ತಿರುವಾಗ, ಬಾಲಕ ಲಿಫ್ಟ್​ ಒಳಗೆ ಪ್ರವೇಶಿಸಿದ್ದ, ಆ ಸಮಯದಲ್ಲಿ ಲಿಫ್ಟ್ ಸ್ಟಾರ್ಟ್ ಆಗಿ ಬಾಲಕ ಅದರಲ್ಲಿ ಸಿಲುಕಿಕೊಂಡಿದ್ದ.ತಾಯಿ ಕೂಡ ಲಿಫ್ಟ್ ನಲ್ಲಿ ಅವರನ್ನು ಹಿಂಬಾಲಿಸುತ್ತಿದ್ದರು, ಆದರೆ ಬಾಲಕ ಮೊದಲು ಒಳಗೆ ಪ್ರವೇಶಿಸಿದ್ದ ಕೂಡಲೇ ಲಿಫ್ಟ್​ ಸ್ಟಾರ್ಟ್​ ಆಗಿತ್ತು.

ಘಟನೆಯ ಸಮಯದಲ್ಲಿ, ಲಿಫ್ಟ್ ಎರಡನೇ ಮಹಡಿಯಿಂದ ಕೆಳಗೆ ಇಳಿಯುತ್ತಿತ್ತು ಮತ್ತು ಬಾಲಕನ ದೇಹದ ಒಂದು ಭಾಗ ಲಿಫ್ಟ್‌ನಲ್ಲಿ ಸಿಲುಕಿಕೊಂಡಿತ್ತು.ಘಟನೆಯ ನಂತರ ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಒಂದು ಗಂಟೆ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ, ಅಗ್ನಿಶಾಮಕ ಸಿಬ್ಬಂದಿ ಕಟ್ಟರ್ ಯಂತ್ರದ ಮೂಲಕ ಲಿಫ್ಟ್ ಅನ್ನು ಮುರಿದು ಬಾಲಕನನ್ನು ಹೊರತೆಗೆದರು.

ಮತ್ತಷ್ಟು ಓದಿ: Video: ಅಪಾರ್ಟ್​​ಮೆಂಟ್​ನ ಮೆಟ್ಟಿಲು ಕುಸಿತ, ಲಿಫ್ಟ್​ ಇಲ್ಲ, ಫ್ಲಾಟ್​ನಲ್ಲೇ ಸಿಲುಕಿದ 6 ಕುಟುಂಬ

ಚಿಕಿತ್ಸೆಗಾಗಿ ನಾಗರಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ವೈದ್ಯರು ಅವನನ್ನು ಮೃತಪಟ್ಟಿರುವುದಾಗಿ ಘೋಷಿಸಿದರು.ಈ ಘಟನೆ ಕೇವಲ ಅಪಘಾತವಲ್ಲ, ಬದಲಾಗಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಲಿಫ್ಟ್ ನಿರ್ವಹಣೆಯ ಕೊರತೆ ಮತ್ತು ಭದ್ರತಾ ನಿರ್ಲಕ್ಷ್ಯಕ್ಕೆ ಜೀವಂತ ಉದಾಹರಣೆಯಾಗಿದೆ.

ನವಸಾರಿ ಅಗ್ನಿಶಾಮಕ ಇಲಾಖೆಯ ಕಟ್ಟರ್ ಯಂತ್ರದಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಸ್ಥಳೀಯ ನಿವಾಸಿಗಳು ಮತ್ತು ಸಂಬಂಧಿತ ಅಧಿಕಾರಿಗಳು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಲಿಫ್ಟ್‌ನ ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ