Goods Train Derail ಬಿಹಾರದಲ್ಲಿ ಹಳಿತಪ್ಪಿದ ಗೂಡ್ಸ್ ರೈಲಿನ ವ್ಯಾಗನ್​​ನ್ನು ಎಳೆದೊಯ್ದ ಎಂಜಿನ್

ಧನಬಾದ್ ವಿಭಾಗದ ಕೊಡೆರ್ಮಾ ಮತ್ತು ಮನ್ಪುರ್ ರೈಲು ನಿಲ್ದಾಣಗಳ ನಡುವೆ ಬೆಳಿಗ್ಗೆ 6.24 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೂರ್ವ ಕೇಂದ್ರ ರೈಲ್ವೆ (ಇಸಿಆರ್) ಹೇಳಿಕೆಯಲ್ಲಿ ತಿಳಿಸಿದೆ.

Goods Train Derail ಬಿಹಾರದಲ್ಲಿ ಹಳಿತಪ್ಪಿದ ಗೂಡ್ಸ್ ರೈಲಿನ ವ್ಯಾಗನ್​​ನ್ನು ಎಳೆದೊಯ್ದ ಎಂಜಿನ್
ವ್ಯಾಗನ್ ನ್ನು ಎಳೆದೊಯ್ದ ಇಂಜಿನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 27, 2022 | 3:13 PM

ಪೂರ್ವ ಕೇಂದ್ರ ರೈಲ್ವೆಯ (ECR) ಧನ್‌ಬಾದ್ ವಿಭಾಗದ ಗಯಾ-ಕೊಡೆರ್ಮಾ ವಿಭಾಗದ ಗುರ್ಪಾ ರೈಲು ನಿಲ್ದಾಣದ ಬಳಿ ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ  53 ವ್ಯಾಗನ್‌ಗಳು ಬುಧವಾರ ಬೆಳಗ್ಗೆ ಹಳಿತಪ್ಪಿದ ನಂತರ ರೈಲು ಸಂಚಾರ ಸ್ಥಗಿತಗೊಂಡಿದೆ. ಗಯಾ-ಕೊಡೆರ್ಮಾ ರೈಲುಮಾರ್ಗದ ಗುರ್ಪಾ ನಿಲ್ದಾಣದ ಬಳಿ 53 ವ್ಯಾಗನ್‌ಗಳ ಗೂಡ್ಸ್ ರೈಲು ಹಳಿತಪ್ಪಿದ ನಂತರ, ಹಳಿತಪ್ಪಿದ ಗೂಡ್ಸ್ ರೈಲಿನ ವ್ಯಾಗನ್ ಅನ್ನು ಎಂಜಿನ್ ಎಳೆದುಕೊಂಡು ಹೋಗಿದೆ. ರೈಲು ಈ ರೀತಿ ಎಳೆದುಕೊಂಡು ಹೋಗುತ್ತಿದ್ದುದನ್ನು ಕಂಡು ಜನರು ಅಲ್ಲಿಂದ ಓಡಿ ಹೋಗುವುದನ್ನು ವಿಡಿಯೊದಲ್ಲಿ ಕಾಣಬಹುದು. ಧನಬಾದ್ ವಿಭಾಗದ ಕೊಡೆರ್ಮಾ ಮತ್ತು ಮನ್ಪುರ್ ರೈಲು ನಿಲ್ದಾಣಗಳ ನಡುವೆ ಬೆಳಿಗ್ಗೆ 6.24 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೂರ್ವ ಕೇಂದ್ರ ರೈಲ್ವೆ (ಇಸಿಆರ್) ಹೇಳಿಕೆಯಲ್ಲಿ ತಿಳಿಸಿದೆ. ಹಳಿತಪ್ಪಿದ್ದರಿಂದ ವಿಭಾಗದ ಅಪ್ ಮತ್ತು ಡೌನ್ ಲೈನ್‌ಗಳಲ್ಲಿ ರೈಲು ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಪೂರ್ವ ಕೇಂದ್ರ ರೈಲ್ವೆ ತಿಳಿಸಿದೆ.

ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆ ರೈಲು ನಿಲ್ದಾಣದ ಬಳಿ ಆತಂಕ ಮೂಡಿಸಿದೆ. 26.10.2022 ರಂದು, ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ 53 ವ್ಯಾಗನ್‌ಗಳು ಇಂದು ಬೆಳಿಗ್ಗೆ 06.24 ಕ್ಕೆ ಧನ್‌ಬಾದ್ ವಿಭಾಗದ ಕೊಡೆರ್ಮಾ ಮತ್ತು ಮನ್‌ಪುರ್ ರೈಲ್ವೆ ವಿಭಾಗದ ನಡುವಿನ ಗುರ್ಪಾ ನಿಲ್ದಾಣದಲ್ಲಿ ಹಳಿತಪ್ಪಿದವು ಇದರ ಪರಿಣಾಮವಾಗಿ ಅಪ್ ಮತ್ತು ಡೌನ್ ಲೈನ್‌ಗಳಲ್ಲಿ ರೈಲು ಸಂಚಾರ ಸ್ಥಗಿತಗೊಂಡಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪೂರ್ವ ಕೇಂದ್ರ ರೈಲ್ವೇ ಟ್ವೀಟ್ ಮಾಡಿದೆ

ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ರೈಲ್ವೆ ತಂಡಗಳು ಮಾರ್ಗಗಳನ್ನು ಪುನಃಸ್ಥಾಪಿಸುವ ಕೆಲಸವನ್ನು ಪ್ರಾರಂಭಿಸಿವೆ” ಎಂದು ಇಸಿಆರ್ ವಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ  ಪಿಟಿಐ ಉಲ್ಲೇಖಿಸಿದೆ ರೈಲು ಹಳಿ ತಪ್ಪಿದ್ದರಿಂದ  ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು ಹೇಳಿದ್ದಾರೆ

ಘಟನೆಯ ನಂತರ ಹತ್ತು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ. ನಾಲ್ಕು ರೈಲುಗಳನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಧನ್‌ಬಾದ್ ವಿಭಾಗದ ಅಡಿಯಲ್ಲಿ ಗುರ್ಪಾದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಿದೆ.

ಧನ್‌ಬಾದ್‌ನಿಂದ ಹೊರಡುವ13305 ಧನ್‌ಬಾದ್-ದೇಹ್ರಿ ಸೋನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌, ಅಸನ್-ಸೋಲ್‌ನಿಂದ ಹೊರಡುವ 13553 ಅಸನ್ಸೋಲ್-ವಾರಣಾಸಿ ಎಕ್ಸ್‌ಪ್ರೆಸ್,  ಗಯಾದಿಂದ ಹೊರಡುವ 13546 ಗಯಾ-ಅಸನ್ಸೋಲ್ ಎಕ್ಸ್‌ಪ್ರೆಸ್ ಮತ್ತು ಅಸನ್ಸೋಲ್‌ನಿಂದ ಹೊರಡುವ 13545 ಅಸನ್ಸೋಲ್-ಗಯಾ ಎಕ್ಸ್‌ಪ್ರೆಸ್ ಅನ್ನು ಭಾಗಶಃ ನಿಲ್ಲಿಸಲಾಗಿದೆ ಎಂದು ಪೂರ್ವ ಸೆಂಟ್ರಲ್ ರೈಲ್ವೆ ಹೇಳಿದೆ.

Published On - 2:34 pm, Thu, 27 October 22