ಒಡಿಶಾದಲ್ಲಿ 6 ಬಾರಿ ಸಂಸದರಾಗಿದ್ದ ಭರ್ತೃಹರಿ ಮಹತಾಬ್ ಬಿಜೆಡಿ ತೊರೆದು ಬಿಜೆಪಿಗೆ ಸೇರ್ಪಡೆ
ಕಳೆದ ತಿಂಗಳುಗಳಲ್ಲಿ ಹಲವಾರು ಬಿಜೆಡಿ ನಾಯಕರು ಬಿಜೆಪಿ ಸೇರಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಬಿಜೆಡಿ ಸಂಘಟನಾ ಕಾರ್ಯದರ್ಶಿ ಪಿಪಿ ದಾಸ್ ಮತ್ತು ಜನಪ್ರಿಯ ಒಡಿಯಾ ನಟ ಅರಿಂದಮ್ ರಾಯ್ ಅವರ ನಿಕಟ ಸಂಬಂಧಿಯೂ ಸೇರಿದ್ದಾರೆ. ಕಳೆದ ಐದು ವರ್ಷಗಳಿಂದ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್‌ಗೆ ಸೇರಿದ ಹಿರಿಯ ಬುಡಕಟ್ಟು ಮುಖಂಡ ಮತ್ತು ಮಾಜಿ ಸಚಿವ ಬಲಭದ್ರ ಮಾಝಿ ಆರೋಪಿಸಿದ್ದಾರೆ.
ದೆಹಲಿ ಮಾರ್ಚ್ 28: ಕಟಕ್‌ನ ಆರು ಬಾರಿ ಸಂಸದರಾಗಿರುವ ಭರ್ತೃಹರಿ ಮಹತಾಬ್ (Bhartruhari Mahtab )ಅವರು ಆಡಳಿತಾರೂಢ ಬಿಜು ಜನತಾ ದಳ (Biju Janata Dal) ತೊರೆದು ಬಿಜೆಪಿ (BJP) ಸೇರಿದ್ದಾರೆ. ಪ್ರಮುಖ ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ 67 ವರ್ಷದ ನಾಯಕ ಲೋಕಸಭೆ ಚುನಾವಣೆಗೆ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.2019 ರ ಸಾರ್ವತ್ರಿಕ ಚುನಾವಣೆಯಲ್ಲಿ, ಮಹತಾಬ್ ಅವರು ಕಟಕ್ ಲೋಕಸಭಾ ಸ್ಥಾನ ಗೆದ್ದಿದ್ದು, ಅವರ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಪ್ರಕಾಶ್ ಮಿಶ್ರಾ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿದರು.
ಮಹತಾಬ್ ಅವರು 1998 ರಲ್ಲಿ ಕಟಕ್‌ನಿಂದ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದು ನಂತರ 1999, 2004, 2009, ಮತ್ತು 2014 ರಲ್ಲಿ ಲೋಕಸಭೆಗೆ ಮರು ಆಯ್ಕೆಯಾದರು. ಅವರು 2019 ರಲ್ಲಿ ಬಿಜೆಡಿ ಸ್ಥಾನವನ್ನು ಉಳಿಸಿಕೊಂಡರು. ಸಂಸತ್ತಿನಲ್ಲಿ ಚರ್ಚೆಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ 2017 ರಿಂದ 2020 ರವರೆಗೆ ಸತತ ನಾಲ್ಕು ವರ್ಷಗಳ ಕಾಲ ಅವರಿಗೆ “ಸಂಸದ್ ರತ್ನ” ಪ್ರಶಸ್ತಿಯನ್ನು ನೀಡಲಾಯಿತು. ಕೆಲವು ವಾರಗಳ ಹಿಂದೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಬಿಜೆಡಿಯನ್ನು ತೊರೆದ ಮಹತಾಬ್ ಭ್ರಷ್ಟಾಚಾರ ಮತ್ತು ಕಲ್ಯಾಣ ನೀತಿಗಳ ವಿರುದ್ಧದ ಹೋರಾಟದಿಂದ ಪಕ್ಷವು ವಿಮುಖವಾಗಿದೆ ಎಂದು ಆರೋಪಿಸಿದ್ದರು.
ಕಳೆದ ತಿಂಗಳುಗಳಲ್ಲಿ ಹಲವಾರು ಬಿಜೆಡಿ ನಾಯಕರು ಬಿಜೆಪಿ ಸೇರಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಬಿಜೆಡಿ ಸಂಘಟನಾ ಕಾರ್ಯದರ್ಶಿ ಪಿಪಿ ದಾಸ್ ಮತ್ತು ಜನಪ್ರಿಯ ಒಡಿಯಾ ನಟ ಅರಿಂದಮ್ ರಾಯ್ ಅವರ ನಿಕಟ ಸಂಬಂಧಿಯೂ ಸೇರಿದ್ದಾರೆ. ಕಳೆದ ಐದು ವರ್ಷಗಳಿಂದ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್‌ಗೆ ಸೇರಿದ ಹಿರಿಯ ಬುಡಕಟ್ಟು ಮುಖಂಡ ಮತ್ತು ಮಾಜಿ ಸಚಿವ ಬಲಭದ್ರ ಮಾಝಿ ಆರೋಪಿಸಿದ್ದಾರೆ. ಒಡಿಶಾ 21 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜು ಜನತಾ ದಳ (ಬಿಜೆಡಿ) ಗರಿಷ್ಠ ಸ್ಥಾನಗಳನ್ನು ಗಳಿಸಿತು.ಬಿಜೆಪಿ ಮತ್ತು ಕಾಂಗ್ರೆಸ್ ನಂತರದ ಸ್ಥಾನ ಗಳಿಸಿತು. ಬಿಜೆಡಿ 12 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಬಿಜೆಪಿ 8 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನ ಗಳಿಸಿತು. ಕಾಂಗ್ರೆಸ್ ಇಲ್ಲಿ ಗಳಿಸಿದ್ದು ಕೇವಲ ಒಂದೇ ಒಂದು ಸ್ಥಾನ.
ಇದನ್ನೂ ಓದಿ: ಬಲವಂತ ಮಾಡುವುದು,ಇತರರನ್ನು ಬೆದರಿಸುವುದೇ ಕಾಂಗ್ರೆಸ್ನ ಹಳೇ ಸಂಸ್ಕೃತಿ: ಪ್ರಧಾನಿ ಮೋದಿ
2019 ರ ಸಾರ್ವತ್ರಿಕ ಚುನಾವಣೆಯೊಂದಿಗೆ ಏಕಕಾಲದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಡಿ 147 ಸ್ಥಾನಗಳಲ್ಲಿ 113 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ 23 ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲಿದೆ, ಕಾಂಗ್ರೆಸ್ 9 ಸ್ಥಾನಗಳೊಂದಿಗೆ ನಂತರದ ಸ್ಥಾನದಲ್ಲಿದೆ. ಸಿಪಿಎಂ ಒಂದು ಸ್ಥಾನವನ್ನು ಗೆದ್ದಿದೆ ಮತ್ತು ಇನ್ನೊಂದು ಸ್ಥಾನವನ್ನು ಪಕ್ಷೇತರರು ಗೆದ್ದಿದ್ದಾರೆ.
ಈ ವರ್ಷ, ಬಿಜೆಪಿ-ಬಿಜೆಡಿ ಮೈತ್ರಿ ಮಾತುಕತೆಗಳು ನಡೆದಿದ್ದರೂ ಎರಡು ಪಕ್ಷಗಳು ಸೀಟು ಹಂಚಿಕೆಯ ಬಗ್ಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ