ಬಲವಂತ ಮಾಡುವುದು,ಇತರರನ್ನು ಬೆದರಿಸುವುದೇ ಕಾಂಗ್ರೆಸ್ನ ಹಳೇ ಸಂಸ್ಕೃತಿ: ಪ್ರಧಾನಿ ಮೋದಿ
"ಇತರರನ್ನು ಬಲವಂತ ಮಾಡುವುದು ಮತ್ತು ಬೆದರಿಸುವುದು ಹಳೆಯ ಕಾಂಗ್ರೆಸ್ ಸಂಸ್ಕೃತಿ. ಐದು ದಶಕಗಳ ಹಿಂದೆ ಅವರೇ 'ಬದ್ಧ ನ್ಯಾಯಾಂಗ'ಕ್ಕೆ ಕರೆ ನೀಡಿದ್ದರು. ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಇತರರಿಂದ ಬದ್ಧತೆಯನ್ನು ಬಯಸುತ್ತಾರೆ. ಆದರೆ ರಾಷ್ಟ್ರದ ಬಗೆಗಿನ ಯಾವುದೇ ಬದ್ಧತೆಯನ್ನು ಅವರು ತೋರಿಸುವುದಿಲ್ಲ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿ ಮಾರ್ಚ್ 28: ರಾಜಕೀಯ ಮತ್ತು ವೃತ್ತಿಯ ಅಧಿಕಾರ ಬಳಸಿಕೊಂಡು ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುವ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ದೇಶದಾದ್ಯಂತ ನೂರಾರು ವಕೀಲರು ಮತ್ತು ಕೆಲವು ವಕೀಲರ ಸಂಘಗಳು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಕಾಂಗ್ರೆಸ್ (Congress) ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಇತರರನ್ನು ಬಲವಂತ ಮಾಡುವುದು ಮತ್ತು ಬೆದರಿಸುವುದು ಹಳೆಯ ಕಾಂಗ್ರೆಸ್ ಸಂಸ್ಕೃತಿ. ಐದು ದಶಕಗಳ ಹಿಂದೆ ಅವರೇ ‘ಬದ್ಧ ನ್ಯಾಯಾಂಗ’ಕ್ಕೆ ಕರೆ ನೀಡಿದ್ದರು. ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಇತರರಿಂದ ಬದ್ಧತೆಯನ್ನು ಬಯಸುತ್ತಾರೆ. ಆದರೆ ರಾಷ್ಟ್ರದ ಬಗೆಗಿನ ಯಾವುದೇ ಬದ್ಧತೆಯನ್ನು ಅವರು ತೋರಿಸುವುದಿಲ್ಲ .ಅಚ್ಚರಿಯೇನಿಲ್ಲ, 140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುತ್ತಿದ್ದಾರೆ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಮೋದಿ ಬರೆದಿದ್ದಾರೆ.
ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600 ಕ್ಕೂ ಹೆಚ್ಚು ವಕೀಲರು, ಪಟ್ಟಭದ್ರ ಹಿತಾಸಕ್ತಿ ಗುಂಪು” ವಿಶೇಷವಾಗಿ ರಾಜಕಾರಣಿಗಳು ಒಳಗೊಂಡಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದ ನಂತರ ಮೋದಿ ಪ್ರತಿಕ್ರಿಯಿಸಿದ್ದಾರೆ.
ಮೋದಿ ಟ್ವೀಟ್
To browbeat and bully others is vintage Congress culture.
5 decades ago itself they had called for a “committed judiciary” – they shamelessly want commitment from others for their selfish interests but desist from any commitment towards the nation.
No wonder 140 crore Indians… https://t.co/dgLjuYONHH
— Narendra Modi (@narendramodi) March 28, 2024
ನಿನ್ನೆ, ಅಖಿಲ ಮಣಿಪುರ ಬಾರ್ ಅಸೋಸಿಯೇಷನ್ ಸಹ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೆ ಪತ್ರ ಬರೆದು ನ್ಯಾಯಾಂಗದ ಮೇಲಿನ “ಕಡಿಮೆ ದಾಳಿಗಳ” ವಿರುದ್ಧ ಮಾತನಾಡುವ ಅಗತ್ಯವನ್ನು ಎತ್ತಿ ತೋರಿಸಿದೆ. ಪಟ್ಟಭದ್ರ ಹಿತಾಸಕ್ತಿ ಗುಂಪುಗಳು “ಕ್ಷುಲ್ಲಕ ತರ್ಕ” ಮತ್ತು “ಹಳಸಿದ ರಾಜಕೀಯ ಅಜೆಂಡಾಗಳಿಂದ” ನ್ಯಾಯಾಲಯಗಳನ್ನು ದೂಷಿಸಲು ಪ್ರಯತ್ನಿಸುತ್ತಿರುವ ಇತ್ತೀಚಿನ ಪ್ರವೃತ್ತಿಗಳ ಬಗ್ಗೆ ಪತ್ರದಲ್ಲಿ ವಕೀಲರ ಸಂಘವು ಅತ್ಯಂತ ಕಳವಳ ವ್ಯಕ್ತಪಡಿಸಿದೆ.
600 ಕ್ಕೂ ಹೆಚ್ಚು ವಕೀಲರು ಬರೆದ ಇನ್ನೊಂದು ಪತ್ರದಲ್ಲಿ, ಪಟ್ಟಭದ್ರ ಹಿತಾಸಕ್ತಿ ಗುಂಪು ಬಳಸಿದ ತಂತ್ರಗಳು “ನಮ್ಮ ನ್ಯಾಯಾಲಯಗಳಿಗೆ ಹಾನಿಯನ್ನುಂಟುಮಾಡುತ್ತವೆ ಮತ್ತು ನಮ್ಮ ಪ್ರಜಾಪ್ರಭುತ್ವದ ರಚನೆಗೆ ಬೆದರಿಕೆ ಹಾಕುತ್ತವೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಮೋದಿ ನಿವಾಸದಲ್ಲಿ ಬಿಲ್ ಗೇಟ್ಸ್; ಎಐನಿಂದ ಪರಿಸರದವರೆಗೆ ವಿವಿಧ ವಿಚಾರ ಚರ್ಚಿಸಿದ ಜಾಗತಿಕ ನಾಯಕರು
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ನಾಯಕತ್ವವು ಈ “ಕಠಿಣ ಕಾಲದಲ್ಲಿ” ನಿರ್ಣಾಯಕವಾಗಿದೆ ಸುಪ್ರೀಂಕೋರ್ಟ್ ದೃಢವಾಗಿ ನಿಲ್ಲಬೇಕು, ಜಾಣ ಮೌನವನ್ನು ಕಾಪಾಡಿಕೊಳ್ಳಲು ಇದು ಸಮಯವಲ್ಲ ಎಂದು ಪತ್ರದಲ್ಲಿ ಹೇಳಿದೆ ಪತ್ರವು ವಕೀಲರ ಒಂದು ವಿಭಾಗವನ್ನು ಹೆಸರಿಸದೆ ಗುರಿಯಾಗಿಸಿದ್ದು, ಅವರು ಹಗಲು ರಾಜಕಾರಣಿಗಳನ್ನು ಸಮರ್ಥಿಸುತ್ತಾರೆ ಮತ್ತು ನಂತರ ರಾತ್ರಿಯಲ್ಲಿ ಮಾಧ್ಯಮಗಳ ಮೂಲಕ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ