ಸುಭಾಷ್​ಚಂದ್ರ ಭೋಸ್​ ಆಪದಾ ಪ್ರಬಂಧನ್ ಪುರಸ್ಕಾರ 2024: ಉತ್ತರ ಪ್ರದೇಶದ ’60 ಪ್ಯಾರಾಚೂಟ್​ ಫೀಲ್ಡ್​‘ ಆಸ್ಪತ್ರೆ ಆಯ್ಕೆ

ವಿಪತ್ತು ನಿರ್ವಹಣೆಯಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಕೇಂದ್ರ ಸರ್ಕಾರವು ಉತ್ತರ ಪ್ರದೇಶ ಮೂಲದ 60 ಪ್ಯಾರಾಚೂಟ್​ ಫೀಲ್ಡ್​ ಆಸ್ಪತ್ರೆಯನ್ನು ಸುಭಾಷ್​ಚಂದ್ರ ಬೋಸ್​ ಆಪದಾ ಪ್ರಬಂಧನ್ ಪುರಸ್ಕಾರ 2024ಕ್ಕಾಗಿ ಆಯ್ಕೆ ಮಾಡಿದೆ. ಸಾಂಸ್ಥಿಕ ವಿಭಾಗದಲ್ಲಿ ಈ ವರ್ಷ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ 60 ಪ್ಯಾರಾಚೂಟ್​ ಫೀಲ್ಡ್​ ಆಸ್ಪತ್ರೆಯನ್ನು 1942ರಲ್ಲಿ ಸ್ಥಾಪಿಸಲಾಯಿತು. ಇದು ಭಾರತೀಯ ಸಶಸ್ತ್ರ ಪಡೆಗಳ ಏಕೈಕ ವಾಯುಗಾಮಿ ವೈದ್ಯಕೀಯ ಸಂಸ್ಥೆಯಾಗಿದ್ದು, ವಿವಿಧ ಜಾಗತಿಕ ಬಿಕ್ಕಟ್ಟುಗಳಲ್ಲಿ ತನ್ನ ಅಸಾಧಾರಣ ಸೇವೆಯಿಂದ ಪ್ರಖ್ಯಾತವಾಗಿದೆ.

ಸುಭಾಷ್​ಚಂದ್ರ ಭೋಸ್​ ಆಪದಾ ಪ್ರಬಂಧನ್ ಪುರಸ್ಕಾರ 2024: ಉತ್ತರ ಪ್ರದೇಶದ ’60 ಪ್ಯಾರಾಚೂಟ್​ ಫೀಲ್ಡ್​‘ ಆಸ್ಪತ್ರೆ ಆಯ್ಕೆ
ಆಸ್ಪತ್ರೆ
Follow us
ನಯನಾ ರಾಜೀವ್
|

Updated on:Jan 23, 2024 | 12:19 PM

ವಿಪತ್ತು ನಿರ್ವಹಣೆಯಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಕೇಂದ್ರ ಸರ್ಕಾರವು ಉತ್ತರ ಪ್ರದೇಶ ಮೂಲದ 60 ಪ್ಯಾರಾಚೂಟ್​ ಫೀಲ್ಡ್​ ಆಸ್ಪತ್ರೆಯನ್ನು ಸುಭಾಷ್​ಚಂದ್ರ ಬೋಸ್​ ಆಪದಾ ಪ್ರಬಂಧನ್ ಪುರಸ್ಕಾರ 2024(Subhash Chandra Bose Aapda Prabandhan Puraskar-2024)ಕ್ಕಾಗಿ ಆಯ್ಕೆ ಮಾಡಿದೆ. ಸಾಂಸ್ಥಿಕ ವಿಭಾಗದಲ್ಲಿ ಈ ವರ್ಷ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿರುವ 60 ಪ್ಯಾರಾಚೂಟ್​ ಫೀಲ್ಡ್​ ಆಸ್ಪತ್ರೆಯನ್ನು 1942ರಲ್ಲಿ ಸ್ಥಾಪಿಸಲಾಯಿತು. ಇದು ಭಾರತೀಯ ಸಶಸ್ತ್ರ ಪಡೆಗಳ ಏಕೈಕ ವಾಯುಗಾಮಿ ವೈದ್ಯಕೀಯ ಸಂಸ್ಥೆಯಾಗಿದ್ದು, ವಿವಿಧ ಜಾಗತಿಕ ಬಿಕ್ಕಟ್ಟುಗಳಲ್ಲಿ ತನ್ನ ಅಸಾಧಾರಣ ಸೇವೆಯಿಂದ ಪ್ರಖ್ಯಾತವಾಗಿದೆ.

ಗೃಹ ವ್ಯವಹಾರಗಳ ಸಚಿವಾಲಯವು ಈ ಪ್ರಕಟಣೆ ಹೊರಡಿಸಿದ್ದು, ಆಸ್ಪತ್ರೆಯ ಪ್ರಾಥಮಿಕ ಧ್ಯೇಯವು ಶಾಂತಿ ಮತ್ತು ಯುದ್ಧದ ಸಮಯದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ನೈಸರ್ಗಿಕ ವಿಕೋಪದ ಸಮಯದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ಒಳಗೊಂಡಿದೆ.

ಇದು ಉತ್ತರಾಖಂಡ ಪ್ರವಾಹ(2013), ನೇಪಾಳ ಭೂಕಂಪ ಕಾರ್ಯಾಚರಣೆ ಮೈತ್ರಿ(2015) ಇಂಡೋನೇಷ್ಯಾದ ಸುನಾಮಿ ಕಾರ್ಯಾಚರಣೆಯ ಸಮುದ್ರ ಮೈತ್ರಿ(2018)ರ ಭಾಗವಾಗಿ ವೈದ್ಯಕೀಯ ನೆರವು ನೀಡಿತ್ತು.

ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತದ ಜನರು ಹಾಗೂ ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಸರ್ಕಾರವು ಸುಭಾಷ್​ಚಂದ್ರ ಬೋಸ್​ ಆಪದಾ ಪ್ರಬಂಧನ್ ಪುರಸ್ಕಾರವನ್ನು ಸ್ಥಾಪಿಸಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರತಿ ವರ್ಷ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.

ಮತ್ತಷ್ಟು ಓದಿ: ಇಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮದಿನ : ಈ ದಿನ ಪರಾಕ್ರಮ ದಿನವನ್ನಾಗಿ ಆಚರಿಸುವುದರ ಹಿಂದಿನ ಮಹತ್ವವೇನು?

ಸಂಸ್ಥೆಯಾಗಿದ್ದರೆ 51 ಲಕ್ಷ ರೂ. ವೈಯಕ್ತಿಕವಾಗಿ ಕೆಲಸ ಮಾಡಿದ್ದರೆ ಅವರಿಗೆ 5 ಲಕ್ಷ ರೂ ನೀಡಲಾಗುತ್ತದೆ. ಈ ಪ್ರಶಸ್ತಿಗಾಗಿ 2023ರ ಜುಲೈ 1 ರಂದು ಆನ್​ಲೈನ್ ನಾಮನಿರ್ದೇಶನಗಳನ್ನು ಕೋರಲಾಗಿತ್ತು. ಸಂಸ್ಥೆಯು ಪ್ರತಿಯಾಗಿ 245 ನಾಮನಿರ್ದೇಶನಗಳನ್ನು ಸ್ವೀಕರಿಸಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಒರಿಸ್ಸಾದ ಕಟಕ್‌ನಲ್ಲಿ ಬಂಗಾಳಿ ಕುಟುಂಬದಲ್ಲಿ 23 ಜನವರಿ 1897 ರಂದು ಜನಿಸಿದರು. ಭಾರತವನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸುವಲ್ಲಿ ಅವರ ಕೊಡುಗೆ ಅಪಾರ. ಜೈ ಹಿಂದ್-ಜೈ ಭಾರತ್’ ಮತ್ತು ‘ದಿಲ್ಲಿ ಚಲೋ’ ಎಂಬ ಘೋಷಣೆಗಳೊಂದಿಗೆ ದೇಶದ ಯುವಕರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದರು.

ಆರಂಭದಲ್ಲಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಇದ್ದರು, ಆದರೆ ನಂತರ ಅವರು ಬೇರ್ಪಟ್ಟರು ಮತ್ತು ಬ್ರಿಟಿಷರ ವಿರುದ್ಧ ಹೋರಾಡಲು ಯೋಜಿಸಿದರು. ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಜನವರಿ 23 ರಂದು ಆಚರಿಸಲಾಗುತ್ತದೆ. ಈ ದಿನವನ್ನು ಪರಾಕ್ರಮ್ ದಿವಸ್ ಎಂದೂ ಕರೆಯಲಾಗುತ್ತದೆ .

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:18 pm, Tue, 23 January 24

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್