ಪ್ರವಾಸದ ವೇಳೆ.. ಮದ್ಯ ಸಿಗದಿದ್ದಕ್ಕೆ ಸ್ಯಾನಿಟೈಸರ್‌ ಕುಡಿದು 10 ಮಂದಿ ಸಾವು, ಎಲ್ಲಿ?

ಆಂಧ್ರ ಪ್ರದೇಶ: ಕುಡಿಯಲು ಮಧ್ಯ ಸಿಗದಿದ್ದಕ್ಕೆ , ಸ್ಯಾನಿಟೈಸರ್ ಕುಡಿದು 10 ಜನ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡುನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಪ್ರವಾಸಿ ತಂಡದವರು ಎನ್ನಲಾಗಿದೆ. ಕುಡಿಯಲು ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದಿದ್ದಾರೆ ಎನ್ನಲಾದ 10 ಜನರಲ್ಲಿ 3 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ 7 ಜನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಪ್ರಕಾಶಂ ಜಿಲ್ಲಾ ಪೊಲೀಸರು ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ […]

ಪ್ರವಾಸದ ವೇಳೆ.. ಮದ್ಯ ಸಿಗದಿದ್ದಕ್ಕೆ ಸ್ಯಾನಿಟೈಸರ್‌ ಕುಡಿದು 10 ಮಂದಿ ಸಾವು, ಎಲ್ಲಿ?
ಸಾಧು ಶ್ರೀನಾಥ್​

Updated on: Jul 31, 2020 | 12:06 PM

ಆಂಧ್ರ ಪ್ರದೇಶ: ಕುಡಿಯಲು ಮಧ್ಯ ಸಿಗದಿದ್ದಕ್ಕೆ , ಸ್ಯಾನಿಟೈಸರ್ ಕುಡಿದು 10 ಜನ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡುನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಪ್ರವಾಸಿ ತಂಡದವರು ಎನ್ನಲಾಗಿದೆ. ಕುಡಿಯಲು ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದಿದ್ದಾರೆ ಎನ್ನಲಾದ 10 ಜನರಲ್ಲಿ 3 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ 7 ಜನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಈ ಘಟನೆಯ ಬಗ್ಗೆ ಪ್ರಕಾಶಂ ಜಿಲ್ಲಾ ಪೊಲೀಸರು ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ 10 ಜನ ಕಳಪೆ ನಾಟಿ ಸಾರಾಯಿ ಸೇವಿಸಿ ಸಾವನ್ನಪ್ಪಿದಾರೆಂಬುದು ಪೊಲೀಸರ ಅಭಿಪ್ರಾಯವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಪ್ರಕಾಶಂ‌ ಜಿಲ್ಲಾ‌ ಪೊಲೀಸರು ತಿಳಿಸಿದ್ದಾರೆ.

Published On - 10:42 am, Fri, 31 July 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us