ಗಂಡನ ಜತೆ ಖುಷಿಯಾಗಿರಬೇಕು ಎಂದು ಮಗುವನ್ನು ಹೊತ್ತು ಬಾಂಗ್ಲಾದಿಂದ ಭಾರತಕ್ಕೆ ಬಂದ ಮಹಿಳೆ, ಆದರೆ ನಡೆದಿದ್ದೇ ಬೇರೆ
ಬಾಂಗ್ಲಾದೇಶದ ಮಹಿಳೆಯೊಬ್ಬಳು ತನ್ನ ಗಂಡನ ನೋಡಬೇಕೆನ್ನುವ ಖುಷಿಯಲ್ಲಿ ಒಂದು ವರ್ಷದ ಮಗುವನ್ನು ಎತ್ತುಕೊಂಡು ಭಾರತಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಬಂದಾಗ ನಡೆದಿದ್ದೇ ಬೇರೆ. ಆಕೆಯ ಗಂಡನಿಗೆ ಈಗಾಗಲೇ ಮದುವೆಯಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಸಾನ್ಯಾ ಅಖ್ತರ್ ಎಂದು ಗುರುತಿಸಲಾದ ಮಹಿಳೆ, ಸೌರಭ್ ಕಾಂತ್ ತಿವಾರಿ ಅವರನ್ನು 2017 ಮತ್ತು 2021 ರ ನಡುವೆ ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ವಿವಾಹವಾದರು. ಇದರ ನಂತರ ಭಾರತಕ್ಕೆ ಬಂದು ನೆಲೆಸಿದ್ದರು.

ತನ್ನ ಪತಿಯನ್ನು ನೋಡಲು ಆಕೆ ಭಾರತಕ್ಕೆ ಬಂದಾಗ ಆತನಿಗೆ ಬೇರೆ ಮದುವೆಯಾಗಿರುವ ವಿಚಾರ ತಿಳಿದುಬಂದಿದೆ. ಈ ಸಂಬಂಧವನ್ನು ಮುಂದುವರೆಸಲು ತಾನು ಬಯಸುವುದಿಲ್ಲ ಎಂದು ತಿಳಿಸಿದ್ದಾನೆ.
ಮತ್ತಷ್ಟು ಓದಿ: Seema Haider: ಉತ್ತಮ ಪ್ರಜೆಯಾಗುತ್ತೇನೆ, ದೇಶಕ್ಕೆ ಎಂದೂ ದ್ರೋಹ ಮಾಡುವುದಿಲ್ಲ, ಭಾರತದ ಪೌರತ್ವ ನೀಡುವಂತೆ ರಾಷ್ಟ್ರಪತಿಗೆ ಸೀಮಾ ಮನವಿ
ಈ ಕುರಿತು ಸಾನ್ಯಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ