ಏರ್ ಮಾರ್ಷಲ್ ಆಗುವ ಮೂಲಕ ವಾಯುಪಡೆಯಲ್ಲಿ ಇತಿಹಾಸ ಸೃಷ್ಟಿಸಿದ ದಂಪತಿಗಳು

ಏರ್ ಮಾರ್ಷಲ್ ಸಾಧನಾ ಸಕ್ಸೇನಾ ಮತ್ತು ಏರ್ ಮಾರ್ಷಲ್ ಕೆಪಿ ನಾಯರ್ ಸೇನೆಯಲ್ಲಿ ಒಂದು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಸಾಧನಾ ಸಕ್ಸೇನಾ, ಸಶಸ್ತ್ರ ಪಡೆಗಳ ಆಸ್ಪತ್ರೆ ಸೇವೆಯ ಮಹಾನಿರ್ದೇಶಕರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಅವರ ಪತಿ ಕೆಪಿ ನಾಯರ್ ಅವರು ಫೈಟರ್ ಪೈಲಟ್ ಮತ್ತು ಏರ್ ಮಾರ್ಷಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಏರ್ ಮಾರ್ಷಲ್ ಸಾಧನಾ ಅವರು ವಾಯುಪಡೆಯಿಂದ ಏರ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಎರಡನೇ ಮಹಿಳೆ. ಇದಕ್ಕೂ ಮೊದಲು, ಸಾಧನಾ ನಾಯರ್ ಬೆಂಗಳೂರಿನ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್‌ನಲ್ಲಿ ಪ್ರಧಾನ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಏರ್ ಮಾರ್ಷಲ್ ಆಗುವ ಮೂಲಕ ವಾಯುಪಡೆಯಲ್ಲಿ ಇತಿಹಾಸ ಸೃಷ್ಟಿಸಿದ ದಂಪತಿಗಳು
ಏರ್ ಮಾರ್ಷಲ್ ಸಾಧನಾ ಸಕ್ಸೇನಾ ಮತ್ತು ಏರ್ ಮಾರ್ಷಲ್ ಕೆಪಿ ನಾಯರ್
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 24, 2023 | 4:01 PM

ನೀವು ಐಎಎಸ್ ಗಂಡ-ಹೆಂಡತಿ ಮತ್ತು ವೈದ್ಯ ದಂಪತಿಗಳ ಬಗ್ಗೆ ಕೇಳಿರಬಹುದು, ನೋಡಿರಬಹುದು, ಆದರೆ ಸೇನೆಯಲ್ಲಿ ದಂಪತಿಗಳಿಬ್ಬರು ಒಂದೇ ಹುದ್ದೆಗೆ ಹೋಗಿರುವುದನ್ನು ನೋಡಿದ್ದೀರಾ? ಇಲ್ಲಿದ್ದಾರೆ ನೋಡಿ. ಇಬ್ಬರು ದಂಪತಿಗಳು ಏರ್ ಮಾರ್ಷಲ್ (air marshal) ಆಗುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ. ಏರ್ ಮಾರ್ಷಲ್ ಸಾಧನಾ ಸಕ್ಸೇನಾ ಮತ್ತು ಏರ್ ಮಾರ್ಷಲ್ ಕೆಪಿ ನಾಯರ್ ಸೇನೆಯಲ್ಲಿ ಒಂದು ದೊಡ್ಡ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಸಾಧನಾ ಸಕ್ಸೇನಾ, ಸಶಸ್ತ್ರ ಪಡೆಗಳ ಆಸ್ಪತ್ರೆ ಸೇವೆಯ ಮಹಾನಿರ್ದೇಶಕರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಅವರ ಪತಿ ಕೆಪಿ ನಾಯರ್ ಅವರು ಫೈಟರ್ ಪೈಲಟ್ ಮತ್ತು ಏರ್ ಮಾರ್ಷಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

2015ರಲ್ಲಿ ಕೆಪಿ ನಾಯರ್ ಭಾರತೀಯ ವಾಯುಪಡೆಯ ಡೈರೆಕ್ಟರ್ ಜನರಲ್ ಹುದ್ದೆಯಿಂದ ನಿವೃತ್ತರಾದರು. ನಂತರ ಇಬ್ಬರೂ ಒಂದೇ ವಿಭಾಗದ ಹುದ್ದೆಗೆ ಏರುವ ಮೂಲಕ ದೇಶದ ಮೊದಲ ಏರ್ ಮಾರ್ಷಲ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಾಧನಾ ಸಕ್ಸೇನಾ ಅವರು ಕುಟುಂಬವು ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದರು. ಸಾಧನಾ ಸಕ್ಸೇನಾ ಕಳೆದ ಮೂರು ತಲೆಮಾರುಗಳು ಸೇನೆಯೊಂದಿಗೆ ಮಹತ್ವದ ಪಾತ್ರವಹಿಸಿದೆ. ಏರ್ ಮಾರ್ಷಲ್ ಸಾಧನಾ ನಾಯರ್ ಅವರ ಕುಟುಂಬದ ಮೂರು ತಲೆಮಾರಿನವರು ಈ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸಾಧನಾ ಸಕ್ಸೇನಾ ಅವರ ತಂದೆ ಮತ್ತು ಸಹೋದರ ಸೇನೆಯಲ್ಲಿ ವೈದ್ಯರಾಗಿದ್ದರು. ಇನ್ನು ಮೂರನೇ ತಲೆಮಾರು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದರೆ ಅವರ ಮಗ ಭಾರತೀಯ ವಾಯುಪಡೆಯಲ್ಲಿ ಫೈಟರ್ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರ ಕುಟುಂಬ ಕಳೆದ 7 ದಶಕಗಳಿಂದ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದೆ.

ಏರ್ ಮಾರ್ಷಲ್ ಸಾಧನಾ ಅವರು ವಾಯುಪಡೆಯಿಂದ ಏರ್ ಮಾರ್ಷಲ್ ಹುದ್ದೆಗೆ ಬಡ್ತಿ ಪಡೆದ ಎರಡನೇ ಮಹಿಳೆ. ಇದಕ್ಕೂ ಮೊದಲು, ಸಾಧನಾ ನಾಯರ್ ಬೆಂಗಳೂರಿನ ಭಾರತೀಯ ವಾಯುಪಡೆಯ ತರಬೇತಿ ಕಮಾಂಡ್‌ನಲ್ಲಿ ಪ್ರಧಾನ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ದೇಶದ ಮೊದಲ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ. ಅವರು ನಂತರ ಇದೀಗ 2 ಸ್ಥಾನ ಪಡೆದವರು ಸಾಧನಾ.

ಇದನ್ನೂ ಓದಿ: ಹಳೆಯ ನೇಮಕಾತಿ ನೀತಿ ರದ್ದು; ಅಗ್ನಿಪಥ್ ಯೋಜನೆ ಮೂಲಕ ಮಾತ್ರ ಸೇನೆ, ನೌಕಾಪಡೆ, ವಾಯಪಡೆಗೆ ನೇಮಕಾತಿ

ಏರ್ ಮಾರ್ಷಲ್ ಸಾಧನಾ ಅವರು ಪುಣೆಯ ವೈದ್ಯಕೀಯ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ನಂತರ ವೈದ್ಯಕೀಯದಲ್ಲಿ ಉನ್ನತ ಪದವಿಯನ್ನು ಪಡೆದು, 1995 ಡಿಸೆಂಬರ್​​ನಲ್ಲಿ ಭಾರತೀಯ ವಾಯುಪಡೆಗೆ ಸೇರಿದರು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅವರು AIIMS ನವದೆಹಲಿಯಲ್ಲಿ ವೈದ್ಯಕೀಯ ಮಾಹಿತಿ ವಿಭಾಗದಲ್ಲಿ 2 ವರ್ಷಗಳ ಕಾಲ ತರಬೇತಿಯನ್ನು ಪಡೆದರು. ನಂತರ ಸ್ವಿಟ್ಜರ್ಲೆಂಡ್‌ನಿಂದ CBRN (ಕೆಮಿಕಲ್, ಬಯೋಲಾಜಿಕಲ್, ರೇಡಿಯೊಲಾಜಿಕಲ್, ನ್ಯೂಕ್ಲಿಯರ್) ವಾರ್‌ಫೇರ್ ಮತ್ತು ಮಿಲಿಟರಿ ಮೆಡಿಕಲ್ ಎಥಿಕ್ಸ್‌ನಲ್ಲಿ ಕೋರ್ಸ್ ಕೂಡ ಮಾಡಿದ್ದಾರೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋ ವೈರಲ್​​ ಆಗಿದ್ದು, ಬಳಕೆದಾರರು ಗೌರವ ಸೂಚಕ ಕಮೆಂಟ್​​​ಗಳನ್ನು ಹಾಕಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ