ಯುವಕರಿಗೆ ಸಂಗೀತದ ಮೂಲಕ ಶಿಕ್ಷಣ ನೀಡುವುದು ನನ್ನ ಕರ್ತವ್ಯ: ಶಂಕರ್ ಮಹಾದೇವನ್
ಯುವಕರಿಗೆ ಸಂಗೀತದ ಮೂಲಕ ಶಿಕ್ಷಣ ನೀಡುವುದು ನನ್ನ ಕರ್ತವ್ಯ ಎಂದು ಖ್ಯಾತ ಗಾಯಕ ಶಂಕರ್ ಮಹಾದೇವನ್ ಪಾಲ್ಗೊಂಡಿದ್ದರು. ವಿಜಯದಶಮಿ ಪ್ರಯುಕ್ತ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಹಾಗೂ ಹಾಡುಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರೆಗೆ ಕೊಂಡೊಯ್ಯುವುದು ನನ್ನ ಕರ್ತವ್ಯ ಎಂದರು.
ಯುವಕರಿಗೆ ಸಂಗೀತದ ಮೂಲಕ ಶಿಕ್ಷಣ ನೀಡುವುದು ನನ್ನ ಕರ್ತವ್ಯ ಎಂದು ಖ್ಯಾತ ಗಾಯಕ ಶಂಕರ್ ಮಹಾದೇವನ್(Shankar Mahadevan) ಪಾಲ್ಗೊಂಡಿದ್ದರು. ವಿಜಯದಶಮಿ ಪ್ರಯುಕ್ತ ನಾಗ್ಪುರದಲ್ಲಿ ಆರ್‌ಎಸ್‌ಎಸ್ ಆಯೋಜಿಸಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಹಾಗೂ ಹಾಡುಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರೆಗೆ ಕೊಂಡೊಯ್ಯುವುದು ನನ್ನ ಕರ್ತವ್ಯ ಎಂದರು.
ಯುವಕರು ಮತ್ತು ಮಕ್ಕಳೊಂದಿಗೆ ನನ್ನ ಸಂಭಾಷಣೆಯಲ್ಲಿ ಮತ್ತು ನನ್ನ ರಿಯಾಲಿಟಿ ಶೋ ಗಳಲ್ಲಿ, ಚಲನಚಿತ್ರ ಹಾಡುಗಳಲ್ಲಿಯೂ ಇದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಶಂಕರ್ ಮಹಾದೇವನ್ ಸರಸ್ವತಿ ದೇವಿಯ ಪ್ರಾರ್ಥನೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು.
ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ರಕ್ಷಿಸಲು ನಿಮ್ಮಷ್ಟು ಪ್ರಯತ್ನವನ್ನು ದೇಶದಲ್ಲಿ ಯಾರೂ ಮಾಡಿಲ್ಲ ಎಂಬುದಕ್ಕೆ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. ಇದು ವಿಶ್ವಶಾಂತಿಯ ಮಂತ್ರವಾಗಿದೆ ಎಂದು ಮಹಾದೇವನ್ ಹೇಳಿದರು.
ಪ್ರತಿ ವರ್ಷದಂತೆ ಈ ಬಾರಿಯೂ ವಿಜಯದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯರು ನಾಗ್ಪುರದಲ್ಲಿ ‘ಪಥ ಸಂಚಲನ’ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಕೂಡ ಉಪಸ್ಥಿತರಿದ್ದರು.
ನಮ್ಮ ನಾಯಕತ್ವದಿಂದಾಗಿ ಇಂದು ಜಗತ್ತಿನಲ್ಲಿ ನಮಗೆ ವಿಶಿಷ್ಟವಾದ ಸ್ಥಾನವಿದೆ. ಭಾರತದ ವಿಶಿಷ್ಟ ಚಿಂತನೆ ಮತ್ತು ದೂರದೃಷ್ಟಿಯಿಂದಾಗಿ ‘ವಸುಧೈವ ಕುಟುಂಬಕಂ’ ಎಂಬ ನಮ್ಮ ಮಾರ್ಗದರ್ಶಕ ತತ್ವವನ್ನು ಈಗ ಇಡೀ ವಿಶ್ವದ ತತ್ವಶಾಸ್ತ್ರದಲ್ಲಿ ಅಳವಡಿಸಲಾಗಿದೆ ಎಂದು ಭಾಗವತ್ ಹೇಳಿದರು.
ಮತ್ತಷ್ಟು ಓದಿ: ಪ್ರಕೃತಿಗೆ ವಿರುದ್ಧವಾದ ಜೀವನಶೈಲಿ, ಸ್ವಾರ್ಥದಿಂದ ಹೊಸ ಶಾರೀರಿಕ ಮತ್ತು ಮಾನಸಿಕ ಜಾಡ್ಯಗಳು ಹುಟ್ಟುತ್ತಿವೆ: ಮೋಹನ್ ಭಾಗವತ್
ಜಿ-20 ಅಧ್ಯಕ್ಷರಾಗಿ ಭಾರತವು ಆತಿಥೇಯ ಪಾತ್ರವನ್ನು ವಹಿಸಿದೆ ಎಂದು ಹೇಳಿದರು. ಜನರು ನೀಡಿದ ಬೆಚ್ಚಗಿನ ಆತಿಥ್ಯದ ಅನುಭವ, ಭಾರತದ ವೈಭವಯುತ ಗತಕಾಲ ಮತ್ತು ನಡೆಯುತ್ತಿರುವ ಅಭಿವೃದ್ಧಿ ಪ್ರಯಾಣವು ಎಲ್ಲಾ ದೇಶಗಳ ನಾಯಕರ ಮೇಲೆ ಆಳವಾದ ಪ್ರಭಾವ ಬೀರಿತು.
ಸುಮಾರು ಒಂದು ದಶಕದಿಂದ ಶಾಂತಿಯುತವಾಗಿದ್ದ ಮಣಿಪುರದಲ್ಲಿ ಈ ಪರಸ್ಪರ ವೈಷಮ್ಯ ಏಕಾಏಕಿ ಹೇಗೆ ಭುಗಿಲೆದ್ದಿತು? ಹಿಂಸಾಚಾರ ನಡೆಸಿದವರಲ್ಲಿ ಗಡಿಯಾಚೆಗಿನ ಉಗ್ರರೂ ಇದ್ದಾರಾ? ತಮ್ಮ ಅಸ್ತಿತ್ವದ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ಮಣಿಪುರಿ ಮೈಥಿ ಸಮುದಾಯ ಮತ್ತು ಕುಕಿ ಸಮುದಾಯದ ನಡುವಿನ ಈ ಪರಸ್ಪರ ಸಂಘರ್ಷಕ್ಕೆ ಕೋಮು ಸ್ವರೂಪವನ್ನು ನೀಡುವ ಪ್ರಯತ್ನ ಏಕೆ ಮತ್ತು ಯಾರಿಂದ ನಡೆಯಿತು? ವರ್ಷಾನುಗಟ್ಟಲೆ ಎಲ್ಲರಿಗೂ ಸಮಾನ ದೃಷ್ಟಿಯಿಂದ ಸೇವೆ ಸಲ್ಲಿಸುತ್ತಿರುವ ಸಂಘದಂತಹ ಸಂಸ್ಥೆಯನ್ನು ವಿನಾಕಾರಣ ಇದಕ್ಕೆ ಎಳೆದು ತರುವ ಪಟ್ಟಭದ್ರ ಹಿತಾಸಕ್ತಿ ಯಾರಿಗಿದೆ ಎಂದೆಲ್ಲಾ ಪ್ರಶ್ನೆ ಕೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ