Hindupur: ಕುಡಿದ ಮತ್ತಿನಲ್ಲಿ ಹಾಸಿಗೆ ಮೇಲೆ ಕುಳಿತೇ ಸಿಗರೇಟ್ ಹಚ್ಚಿದ ಕುಡುಕ, ಬೆಂಕಿ ವ್ಯಾಪಿಸಿ ಕ್ಷಣಾರ್ಧದಲ್ಲಿ ಭಸ್ಮಗೊಂಡ!
ಮದ್ಯದ ಮತ್ತಿನಲ್ಲಿ ಮಾಡಿದ ಸಣ್ಣ ಪೊರಪಾಟು ಪ್ರಾಣವನ್ನೇ ತೆಗೆದಿದೆ. ಮೈಮರೆತು ಮಾಡುವ ಕೆಲಸಗಳು ಹೀಗೆಯೇ ಪ್ರಾಣವನ್ನು ತೆಗೆದುಬಿಡುತ್ತವೆ.
ಮೊದಲೇ ಆಂಧ್ರ ಪ್ರದೇಶದಲ್ಲಿ ವಿಪರೀತ ಎನ್ನಿಸುವಷ್ಟು ಬಿಸಿಲು. ಅಂಥಾದ್ದರಲ್ಲಿ ಬೀಡಿ, ಸಿಗರೇಟು (Smoking) ಅಂತಾ ಸೇದುತ್ತಾ ಕುಳಿತರೆ ಹೇಗೆ? ಅದರಲ್ಲೂ ಧೂಮಪಾನ ಮಾಡುತ್ತಾ ಮೈಮರೆತರೆ ಆಗಬಾರದ ಅನಾಹುತವೇ ಆದೀತು. ಇದಕ್ಕೆ ತಾಜಾ ಇದಾಹರಣೆಯೊಂದು ಇಲ್ಲಿದೆ. ಪ್ರಾಣ ಕಳೆದುಕೊಳ್ಳಲು ಒಂದೇ ಒಂದು ಚಿಕ್ಕ ಅಚಾತುರ್ಯ, ನಿರ್ಲಕ್ಷ್ಯ ಸಾಕು. ಸ್ವಲ್ಪವೇ ಅಜಾಗರೂಕತೆ ತೋರಿದರೆ ಊಹಿಸದಂತಹ ನಷ್ಟವುಂಟಾಗುತ್ತದೆ. ಹಿಂದೂಪುರ ನಗರದ (Hindupur) ಬೋಯಪೇಟೆಯಲ್ಲಿ ಅಂತಹುದೇ ಘಟನೆ ನಡೆದಿದೆ. ಬೋಯಪೇಟೆ ನಿವಾಸಿ ಸುಧಾಕರ್ ಎಂಬಾತ ಭರ್ತಿ ಹೊಟ್ಟೆ ತುಂಬಾ ಮದ್ಯ ಸೇವಿಸಿದ್ದಾನೆ (Drunkard). ಮದ್ಯೆ ಮದ್ಯೆ ಸಿಗರೇಟು (Cigarette) ಸೇದಿದ್ದಾನೆ. ತನ್ನ ಮನೆಯಲ್ಲಿಯೇ ಬೆಡ್ ಮೇಲೆ ಕುಳಿತು ಮದ್ಯ-ಸಿಗರೇಟ್ ಸೇದಿ ಅವಾಂತರ ಮಾಡಿಕೊಂಡಿದ್ದಾನೆ.
ಆದರೆ ಮೈಮರೆತು ಹಾಗೆ ಹೊತ್ತಿಸಿದ ಸಿಗರೇಟ್ ತುಂಡು ತಾನು ಕುಳಿತಿದ್ದ ಬೆಡ್ ಮೇಲೆ ಬಿದ್ದು, ಬೆಂಕಿ (Fire) ವ್ಯಾಪಿಸಿದೆ. ಆದರೆ ಇದು ಸುಧಾಕರನ ಗಮನಕ್ಕೆ ಬಂದಿಲ್ಲ. ಹಾಗೆಯೇ ಮುದುಡಿ ಕುಳಿತಿದ್ದಾನೆ. ಅದರಿಂದ ಅವನಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿವೆ. ಸುಟ್ಟ ಗಾಯಾಗಳಿಂದ ಬಾಧಿತನಾದ ಸುಧಾಕರ್ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ:
ಸಿಗರೇಟ್ ತುಂಡುಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ: ದಂಡ ಕಟ್ಟಬೇಕಾದಿತು ಎಚ್ಚರ!
ಕುಡುಕನ ಅವಾಂತರ ಏನೆಲ್ಲ ಅನಾಹುತ ಸೃಷ್ಟಿಸಿದೆ ಎಂದು ಅರ್ಥವಾಯಿತಲ್ಲಾ. ಇನ್ನೂ ಏನೆಲ್ಲ ದುರಂತ ಸಂಭವಿಸಿದೆ ನೋಡಿ. ಮದ್ಯದ ಮತ್ತಿನಲ್ಲಿ ಮಾಡಿದ ಸಣ್ಣ ಪೊರಪಾಟು ಪ್ರಾಣವನ್ನೇ ತೆಗೆದಿದೆ. ಮೈಮರೆತು ಮಾಡುವ ಕೆಲಸಗಳು ಹೀಗೆಯೇ ಪ್ರಾಣವನ್ನು ತೆಗೆದುಬಿಡುತ್ತವೆ. ಕುಡಿತ ಮದ್ಯ ನಿಮ್ಮ ಆರೋಗ್ಯಕ್ಕಷ್ಟೇ ಹಾನಿಕಾರಕವಲ್ಲ. ಪ್ರಾಣ ಸಂಚಕಾರವಾಗಿಯೂ ಮಾರ್ಪಟ್ಟು ಇತರರಿಗೆ ಕೂಡ ಅಪಾಯದ ಗಂಟೆಯಾಗುತ್ತದೆ. ಸುಧಾಕರನ ಕುಟುಂಬ ಈಗ ರಸ್ತೆಯ ಮೇಲೆ ಬಿದ್ದಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:12 pm, Thu, 13 April 23