ನೈಜ ನಿಯಂತ್ರಣ ರೇಖೆ ಬಳಿ ಕುರಿ ಮೇಯಿಸುವುದಕ್ಕೆ ಅಡ್ಡಿಪಡಿಸಿದ ಚೀನಾ ಸೇನೆಯನ್ನು ಹಿಮ್ಮೆಟ್ಟಿದ ಭಾರತದ ಕುರಿಗಾಹಿಗಳು
ನೈಜ ನಿಯಂತ್ರಣ ರೇಖೆ ಬಳಿ ಭಾರತದ ಕುರಿಗಾಹಿಗಳು ಚೀನಾ ಪಡೆಯನ್ನು ಧೈರ್ಯದಿಂದ ಎದುರಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಎಲ್ಎಸಿ ಬಳಿ ಕುರಿಗಳನ್ನು ಮೇಯಿಸುವುದಕ್ಕೆ ಚೀನಾ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದಾಗ, ಕೆಚ್ಚೆದೆಯ ಕುರಿಗಾಹಿಗಳು ಇದು ನಮ್ಮ ನೆಲ. ಇಲ್ಲಿ ನಮ್ಮ ಕುರಿಗಳನ್ನು ಮೇಯಿಸುವುದನ್ನು ನೀವು ತಡೆಯುವಂತಿಲ್ಲ ಎಂದು ಪಿಎಎಲ್ಎ ಜತೆ ಜಗಳವಾಡಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ.
ಶ್ರೀನಗರ ಜನವರಿ 31: ನೈಜ ನಿಯಂತ್ರಣ ರೇಖೆ(LAC) ಬಳಿ ಕುರಿ ಮೇಯಿಸುವುದನ್ನು ತಡೆಯಲು ಯತ್ನಿಸಿದ ಚೀನಾ(China) ಸೈನಿಕರನ್ನು ಲಡಾಖ್ (Ladakh) ಕುರಿಗಾಹಿಗಳು ಧೈರ್ಯದಿಂದ ಎದುರಿಸಿದ್ದಾರೆ. 2020 ರ ಗಾಲ್ವಾನ್ ಘರ್ಷಣೆಯ ನಂತರ ಸ್ಥಳೀಯ ಕುರುಬರು ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದರು. ಕುರಿಗಳನ್ನು ಮೇಯಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಿಎಲ್‌ಎ ಪಡೆಗಳೊಂದಿಗೆ ಕುರಿಗಾಹಿಗಳು ಜಗಳವಾಡುತ್ತಿರುವ ಮತ್ತು ತಾವು ಭಾರತದ ಭೂಪ್ರದೇಶದಲ್ಲಿದ್ದೇವೆ ಎಂದು ಪ್ರತಿಪಾದಿಸುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರತಲ್ ಆಗಿದೆ.
ಕಳೆದ ಮೂರು ವರ್ಷಗಳಲ್ಲಿ, ಪೂರ್ವ ಲಡಾಖ್‌ನಲ್ಲಿ ಸ್ಥಳೀಯರು ಎಲ್ಎಸಿ ಬಳಿಯ ಹಲವಾರು ಪ್ರದೇಶಗಳಲ್ಲಿ ಪ್ರಾಣಿಗಳನ್ನು ಮೇಯಿಸುವುದನ್ನು ನಿಲ್ಲಿಸಿದ್ದರು. ಇದೇ ಮೊದಲ ಬಾರಿಗೆ ಅವರು ಈ ಪ್ರದೇಶದಲ್ಲಿ ಪ್ರಾಣಿಗಳನ್ನು ಮೇಯಿಸುವ ಹಕ್ಕುಗಳನ್ನು ಪ್ರತಿಪಾದಿಸಿದ್ದು, ಪಿಎಲ್ಎ ಸೈನಿಕರನ್ನು ಹಿಮ್ಮೆಟ್ಟುವಂತೆ ಮಾಡಿದ್ದಾರೆ. ಎಲ್ಎಸಿ ಭಾರತೀಯ ಮತ್ತು ಚೀನಾದ ಪ್ರದೇಶಗಳನ್ನು ಪ್ರತ್ಯೇಕಿಸುವ ಒಂದು ಗಡಿರೇಖೆಯಾಗಿದೆ. ವಿಭಿನ್ನ ಗ್ರಹಿಕೆಗಳು ಎರಡೂ ಕಡೆಯ ಪಡೆಗಳ ನಡುವಿನ ವಿವಾದಗಳಿಗೆ ಕಾರಣವಾಗಿವೆ, ಕೆಲವು ಸಂದರ್ಭಗಳಲ್ಲಿ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಗಿವೆ. ಆದಾಗ್ಯೂ, ಈ ಸಂದರ್ಭದಲ್ಲಿ, ಹಿಂಸಾಚಾರವನ್ನು ತಪ್ಪಿಸಲಾಯಿತು.
ಕೊಂಚೋಕ್ ಸ್ಟಾಂಜಿನ್ ಟ್ವೀಟ್
It is heartening to see the positive impact made by @firefurycorps_IA in Border areas of Eastern Ladakh in facilitating the graziers & nomads to assert their rights in traditional grazing grounds along the north bank of Pangong. I would like to thank #IndianArmy for such strong… pic.twitter.com/yNIBatPRKE
— Konchok Stanzin (@kstanzinladakh) January 30, 2024
ಚುಶುಲ್ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಅವರು ಸ್ಥಳೀಯ ಕುರಿಗಾಹಿಗಳು ತೋರಿದ ಪ್ರತಿರೋಧವನ್ನು ಪ್ರಶಂಸಿಸಿದ್ದು, ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ಭಾರತೀಯ ಸೇನೆಯನ್ನು ಶ್ಲಾಘಿಸಿದರು. “ಪೂರ್ವ ಲಡಾಖ್‌ನ ಗಡಿ ಪ್ರದೇಶಗಳಲ್ಲಿ ಭಾರತೀಯ ಸೇನೆಯ ಫೈರ್ ಆಂಡ್ ಫ್ಯೂರಿ ಕಾರ್ಪ್ಸ್ ಮಾಡಿದ ಧನಾತ್ಮಕ ಪ್ರಭಾವವನ್ನು ನೋಡುವುದು ಖುಷಿಯಾಗಿದೆ. ಪ್ಯಾಂಗಾಂಗ್‌ನ ಉತ್ತರ ದಂಡೆಯಲ್ಲಿರುವ ಸಾಂಪ್ರದಾಯಿಕ ಹುಲ್ಲುಗಾವಲುಗಳಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಕುರಿಗಾಹಿಗಳಿಗೆ ಅನುಕೂಲವಾಗುತ್ತದೆ.ಇಂತಹ ಬಲವಾದ ನಾಗರಿಕ-ಮಿಲಿಟರಿ ಸಂಬಂಧಗಳು ಮತ್ತು ಗಡಿ ಪ್ರದೇಶದ ಜನಸಂಖ್ಯೆಯ ಹಿತಾಸಕ್ತಿಗಳನ್ನು ನೋಡಿಕೊಳ್ಳುವುದಕ್ಕಾಗಿ ನಾನು ಭಾರತೀಯ ಸೇನೆಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಸ್ಟಾಂಜಿನ್ ಘಟನೆಯ ಇನ್‌ಸ್ಟಾಗ್ರಾಮ್ ವಿಡಿಯೊ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ, ಇದು ಈ ತಿಂಗಳ ಆರಂಭದಲ್ಲಿ ನಡೆದಿದೆ ಎಂದು ವರದಿಗಳು ಹೇಳುತ್ತವೆ.
ನಮ್ಮ ಸ್ಥಳೀಯರು ಇದು ನಮ್ಮ ಪ್ರದೇಶ ಎಂದು ಹಕ್ಕು ಸಾಧಿಸಲು ಬಂದ ಪಿಎಲ್‌ಎ ಮುಂದೆ ಹೇಗೆ ಧೈರ್ಯದಿಂದ ಎದುರಿಸುತ್ತಿದ್ದಾರೆ ನೋಡಿ. ಪಿಎಲ್ಎ ನಮ್ಮ ಕುರಿಗಾಹಿಗಳು ನಮ್ಮ ಪ್ರದೇಶದಲ್ಲಿ ಕುರಿ ಮೇಯುವುದನ್ನು ತಡೆಯುತ್ತಿದೆ. ವಿಭಿನ್ನ ಗ್ರಹಿಕೆಗಳಿಂದಾಗಿ ಇದು ಎಂದಿಗೂ ಮುಗಿಯದ ಪ್ರಕ್ರಿಯೆ ಎಂದು ತೋರುತ್ತದೆ. ಆದರೆ ನಮ್ಮ ಭೂಮಿಯನ್ನು ರಕ್ಷಿಸಲು ಮತ್ತು ರಾಷ್ಟ್ರದ ಎರಡನೇ ರಕ್ಷಕ ಶಕ್ತಿಯಾಗಿ ನಿಲ್ಲುವ ನಮ್ಮ ಕುರಿಗಾಹಿಗಳಿಗೆ ನಾನು ನಮಸ್ಕರಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ : Budget Session 2024: ಹೊಸ ಸಂಸತ್ತಿನಲ್ಲಿ ರಾಷ್ಟ್ರಪತಿ ಮುರ್ಮು ಮೊದಲ ಭಾಷಣ, ಆರ್ಥಿಕತೆ, ರಾಮಮಂದಿರ, ಚಂದ್ರಯಾನ ಕುರಿತ ವಿಷಯ ಪ್ರಸ್ತಾಪ
ಆ ಪ್ರದೇಶದಲ್ಲಿ ಕನಿಷ್ಠ ಮೂರು ಚೀನೀ ಶಸ್ತ್ರಸಜ್ಜಿತ ವಾಹನಗಳು ಮತ್ತು ಸ್ಥಳದಲ್ಲೇ ಹಲವಾರು ಸೈನಿಕರನ್ನು ತೋರಿಸುತ್ತದೆ. ವಾಹನಗಳು ಎಚ್ಚರಿಕೆ ಗಂಟೆ ಮೊಳಗಿಸಿ, ಕುರಿಗಾಹಿಗಳು ಅಲ್ಲಿಂದ ಹೊರಡುವಂತೆ ಸೂಚಿಸುತ್ತಿರುವುದು ವಿಡಿಯೊದಲ್ಲಿದೆ. ಆದರೆ ಈ ಕುರಿಗಾಹಿಗಳು ಆ ಪಡೆಗಳೊಂದಿಗೆ ವಾದ ಮಾಡುವುದನ್ನು ಕಾಣಬಹುದು. ಒಂದೆರಡು ಸಂದರ್ಭಗಳಲ್ಲಿ, ವಾಗ್ವಾದವು ಉಲ್ಬಣಗೊಂಡಾಗ, ಕೆಲವು ಕುರಿಗಾಹಿಗಳು ಕಲ್ಲುಗಳನ್ನು ಎತ್ತಿಕೊಳ್ಳುತ್ತಾರೆ. ಆದರೆ ಇಲ್ಲಿ ಹಿಂಸಾಚಾರ ನಡೆದಿದೆಯೇ ಎಂಬುದು ವಿಡಿಯೊದಲ್ಲಿಲ್ಲ. ವಿಡಿಯೊದಲ್ಲಿ ಕಾಣುವ ಚೀನಾ ಸೈನಿಕರು ಶಸ್ತ್ರಸಜ್ಜಿತರಾಗಿಲ್ಲ.
ಚೀನಾ ಪಡೆಯನ್ನು ಎದುರಿಸುತ್ತಿರುವ ಕುರಿಗಾಹಿಗಳ ವಿಡಿಯೊ ಹಂಚಿಕೊಂಡ ಚುಶುಲ್ ಕೌನ್ಸಿಲರ್
See how our local people are showing their bravery in front of the PLA claiming that the area they are stopping is our nomad’s grazing land. PLA stopping our nomads from grazing in our territory. Seems it is never a never-ending process due to different lines of perceptions. But…
— Konchok Stanzin (@kstanzinladakh) January 30, 2024
ಭಾರತೀಯ ಪಡೆಗಳ ಬೆಂಬಲದಿಂದಾಗಿ ಕುರಿಗಾಹಿಗಳು ಪಿಎಲ್ಎ ಪಡೆಗಳನ್ನು ಧೈರ್ಯದಿಂದ ಎದುರಿಸಬಹುದು ಎಂದು ಚುಶುಲ್ ಕೌನ್ಸಿಲರ್ ಹೇಳಿದರು. ನಮ್ಮ ಪಡೆಗಳು ಯಾವಾಗಲೂ ಪಿಎಲ್ಎಯನ್ನು ಎದುರಿಸುವ ನಾಗರಿಕರೊಂದಿಗೆ ಇರುತ್ತಾರೆ. ಅವರ ಬೆಂಬಲದಿಂದಾಗಿ ನಮ್ಮ ಕುರಿಗಾಹಿಗಳು ಪಿಎಲ್ಎಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಯಿತು ಎಂದಿದ್ದಾರೆ ಅವರು.
ಭಾರತ ಮತ್ತು ಚೀನಾ ನಡುವೆ ಗಡಿ ವಿವಾದವಿದ್ದು ಆಗಾಗ್ಗೆ ಎಲ್ಎಸಿ ಉದ್ದಕ್ಕೂ ಚಕಮಕಿಗಳಿಗೆ ಕಾರಣವಾಗಿದೆ. 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದ ದೊಡ್ಡ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. 4 ಸೈನಿಕರನ್ನು ಕಳೆದುಕೊಂಡಿದ್ದೇವೆ ಎಂದು ಚೀನಾ ಹೇಳಿಕೊಂಡರೆ, ಈ ಸಂಖ್ಯೆ ಹೆಚ್ಚು ಎಂದು ವರದಿಗಳು ಹೇಳುತ್ತವೆ. ಉಲ್ಬಣಗೊಂಡ ನಂತರ, ಶಾಂತಿಯನ್ನು ಕಾಪಾಡಿಕೊಳ್ಳಲು ಎರಡೂ ಕಡೆಯವರು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಅನೇಕ ಸಭೆಗಳನ್ನು ನಡೆಸಿದ್ದಾರೆ.
ಎಲ್ಎಸಿ ಉದ್ದಕ್ಕೂ ಪರಿಸ್ಥಿತಿಯು “ಸ್ಥಿರವಾಗಿದೆ ಆದರೆ ಸೂಕ್ಷ್ಮವಾಗಿದೆ” ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಇತ್ತೀಚೆಗೆ ಹೇಳಿದ್ದರು. ಕಳೆದ ಒಂದು ವರ್ಷದಲ್ಲಿ ಅಥವಾ ಅದರ ನಂತರ, ನಾವು ಇದರಲ್ಲಿ ಯಾವುದೇ ಹೆಚ್ಚಿನ ಘರ್ಷಣೆಯ ಪ್ರದೇಶಗಳನ್ನು ಹೊಂದಿಲ್ಲ. ಪರಿಹಾರಕ್ಕಾಗಿ ನಮ್ಮ ಪ್ರಯತ್ನಗಳ ವಿಷಯದಲ್ಲಿ, ಮಿಲಿಟರಿ ಮಟ್ಟದಲ್ಲಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ನಮ್ಮ ಮಾತುಕತೆಗಳು ಮತ್ತು ಸಂವಾದಗಳು ಮುಂದುವರಿಯುತ್ತವೆ ಜನರಲ್ ಪಾಂಡೆ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ