ಆಟವಾಡುತ್ತಿದ್ದ 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್​ನಲ್ಲಿ ಮುಳುಗಿಸಿ ಕೊಂದಿದ್ದವ ಅರೆಸ್ಟ್​; 50 ರೂ.ಗಾಗಿ ನಡೆದಿತ್ತು ಕೊಲೆ

ಆಟವಾಡುತ್ತಿದ್ದ 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್​ನಲ್ಲಿ ಮುಳುಗಿಸಿ ಕೊಂದಿದ್ದವ ಅರೆಸ್ಟ್​; 50 ರೂ.ಗಾಗಿ ನಡೆದಿತ್ತು ಕೊಲೆ
ಪ್ರಾತಿನಿಧಿಕ ಚಿತ್ರ

ಘಟನೆ ನಡೆದದ್ದು ಫೆಬ್ರವರಿಯಲ್ಲಿ. ನರೇಶ್​ ಎಂಬ 22 ವರ್ಷದ ಯುವಕ ಆರೋಪಿ. ನಿರುದ್ಯೋಗಿ ಆಗಿರುವ ಈತ ಫರಿದಾಬಾದ್​​ನ ಸೆಕ್ಟರ್​ 56ರ ನಿವಾಸಿ ಹಾಗೂ ಆತನೊಬ್ಬ ಮಾದಕ ವ್ಯಸನಿ ಎಂದು ಪೊಲೀಸರು ತಿಳಿಸಿದ್ದಾರೆ.

TV9kannada Web Team

| Edited By: Lakshmi Hegde

Aug 16, 2021 | 10:29 PM

ಗುರುಗ್ರಾಮ: ಪಕ್ಕದ ಮನೆಯ, 18 ತಿಂಗಳ ಮಗುವನ್ನು ನೀರಿನ ಟ್ಯಾಂಕ್​​ನಲ್ಲಿ ಮುಳುಗಿಸಿ ಕೊಂದಿದ್ದ ವ್ಯಕ್ತಿಯೊಬ್ಬ ಈಗ ಅರೆಸ್ಟ್ ಆಗಿದ್ದಾನೆ. ಘಟನೆ ನಡೆದು ಆರು ತಿಂಗಳ ಬಳಿಕ ಈತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ತಾನೇ ಮಗುವನ್ನು ಕೊಂದಿದ್ದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಅಷ್ಟಕ್ಕೂ ಅಷ್ಟು ಪುಟ್ಟ ಮಗುವನ್ನು ಆ ವ್ಯಕ್ತಿ ಕೊಲ್ಲಲು ಕಾರಣ 50 ರೂಪಾಯಿ!

ಘಟನೆ ನಡೆದದ್ದು ಫೆಬ್ರವರಿಯಲ್ಲಿ. ನರೇಶ್​ ಎಂಬ 22 ವರ್ಷದ ಯುವಕ ಆರೋಪಿ. ನಿರುದ್ಯೋಗಿ ಆಗಿರುವ ಈತ ಫರಿದಾಬಾದ್​​ನ ಸೆಕ್ಟರ್​ 56ರ ನಿವಾಸಿ ಹಾಗೂ ಆತನೊಬ್ಬ ಮಾದಕ ವ್ಯಸನಿ ಎಂದು ಫರಿದಾಬಾದ್ ಪೊಲೀಸ್​ ಪಿಆರ್​ಒ ಸುಬೆ ಸಿಂಗ್​ ತಿಳಿಸಿದ್ದಾರೆ. ಆತನಿಗೆ ಮಗುವಿನ ಮೇಲೆ ಯಾವುದೇ ದ್ವೇಷ ಇರಲಿಲ್ಲ. ಆದರೆ ಆ ಮಗುವಿನ ತಂದೆಗೂ-ಈ ನರೇಶ್​ಗೂ ಪದೇಪದೆ ಜಗಳವಾಗುತ್ತಿತ್ತು. ಹಾಗೇ ಒಂದು ದಿನ ನರೇಶ್​ ತನ್ನ ಪಕ್ಕದ ಮನೆಯವರೊಬ್ಬರ 8ವರ್ಷದ ಮಗಳ ಕೈಯಿಂದ 50 ರೂಪಾಯಿ ಕಸಿದಿದ್ದ. ಅದನ್ನು ನೋಡಿದ್ದ 18 ತಿಂಗಳ ಮಗುವಿನ ತಂದೆ, ನರೇಶ್​ ಜತೆ ಜಗಳ ತೆಗೆದು, ಆತ ಮಾಡಿದ ಕೆಲಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಅದಾದ ಮೇಲೆ ನರೇಶ್​ ಹೇಗಾದರೂ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಎಂದು ಸುಬೆ ಸಿಂಗ್​ ವಿವರಿಸಿದ್ದಾರೆ.

ಫೆಬ್ರವರಿ 5ರಂದು ನರೇಶ್​ ಆ 18 ತಿಂಗಳ ಗಂಡು ಮಗು ಮನೆಯ ಬಳಿ ಒಬ್ಬನೇ ಆಡುತ್ತಿರುವುದು ಕಂಡು ಬಂತು. ಆತನನ್ನು ಎತ್ತಿಕೊಂಡು ತನ್ನ ಫ್ಲ್ಯಾಟ್​ಗೆ ಕರೆದುಕೊಂಡು ಹೋದ. ನಂತರ ಮಗುವನ್ನು ದೊಡ್ಡದಾದ ನೀರಿನ ಟ್ಯಾಂಕ್​​ನಲ್ಲಿ ಮುಳುಗಿಸಿ, ಯಾರಿಗೂ ಗೊತ್ತಾಗಬಾರದು ಎಂದು ಅದರ ಬಾಯಿಯನ್ನು ಮುಚ್ಚಿದ್ದ. ಮಗುವಿನ ಜೀವ ಹೋಯಿತು. ಇತ್ತ ಮಗುವಿನ ಪಾಲಕರು ಹುಡುಕಾಟ ಶುರು ಮಾಡಿದ್ದರು. ಅತ್ತ ನರೇಶ್​, ಮಗುವನ್ನು ಹತ್ಯೆ ಮಾಡಿದ ತಕ್ಷಣ ತನ್ನ ಸ್ಥಳ ಬದಲಾಯಿಸಿದ್ದ. ಆದರೆ ಆರು ತಿಂಗಳ ನಂತರ ಆತನನ್ನು ಹಿಡಿಯಲಾಗಿದೆ. ಮಗುವಿನ ಕುತ್ತಿಗೆಯಿಂದ ಆತ ಕದ್ದಿದ್ದ ತಾಯತವನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸ್ ಪಿಆರ್​ಒ ತಿಳಿಸಿದ್ದಾರೆ.

ಇದನ್ನೂ ಓದಿ: ‘ಉತ್ತರಾಖಂಡ ರಾಜ್ಯದ ಜನರಿಗಾಗಿ ನಾಳೆ ಬಹುದೊಡ್ಡ ಘೋಷಣೆ ಮಾಡಲಿದ್ದೇನೆ’ -ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಟ್ವೀಟ್​

ನಕಲಿ ನಾಗಕನ್ನಿಕೆಯ ಅನಾಚಾರ ಬಯಲು: ಮಹಿಳೆ ಆಸ್ಪತ್ರೆಗೆ ದಾಖಲು; ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

Follow us on

Related Stories

Most Read Stories

Click on your DTH Provider to Add TV9 Kannada