AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ನಾಗಕನ್ನಿಕೆಯ ಅನಾಚಾರ ಬಯಲು: ಮಹಿಳೆ ಆಸ್ಪತ್ರೆಗೆ ದಾಖಲು; ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ನಾಗದೇವತೆ ಹೆಸರಲ್ಲಿ ವಂಚನೆ ಬಗ್ಗೆ ಟಿವಿ9ನಲ್ಲಿ ಸುದ್ದಿಪ್ರಸಾರ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಎಸ್‌ಪಿ ಸೈದುಲ್ಲಾ ಅಡಾವತ್ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ನಕಲಿ ನಾಗಕನ್ನಿಕೆಯ ಅನಾಚಾರ ಬಯಲು: ಮಹಿಳೆ ಆಸ್ಪತ್ರೆಗೆ ದಾಖಲು; ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು
ಭಕ್ತಿಯ ಹೆಸರಲ್ಲಿ ಮೋಸ
TV9 Web
| Updated By: ganapathi bhat|

Updated on:Aug 16, 2021 | 9:39 PM

Share

ಬಳ್ಳಾರಿ: ಹೊಸಪೇಟೆಯಲ್ಲಿ ಸಮಸ್ಯೆ, ಕಷ್ಟ ಎಂದು ಬರುವ ಅಮಾಯಕರನ್ನು ಭಕ್ತಿಯ ಹೆಸರಿನಲ್ಲಿ ವಂಚಿಸುತ್ತಿದ್ದ ನಕಲಿ ನಾಗಕನ್ನಿಕೆಯ ಬಗ್ಗೆ ಟಿವಿ9 ಕನ್ನಡ ವಾಹಿನಿ ಸುದ್ದಿ ಪ್ರಸಾರ ಮಾಡಿತ್ತು. ಆಕೆ 9 ವರ್ಷಗಳಿಂದ ಬೆಡ್‌ನಿಂದ ಎದ್ದಿಲ್ಲ. ಹಾಗೇ ಇರುತ್ತಾಳೆ ಎಂದು ಹೇಳಲಾಗಿತ್ತು. ಇದೀಗ ಆಕೆ ಬೆಡ್​ನಿಂದ ಮೇಲೆದ್ದಿದ್ದಾಳೆ. ಹಾಗೂ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾಳೆ ಎಂಬ ಕಾರಣಕ್ಕೆ ನಕಲಿ ನಾಗಕನ್ನಿಕೆಯನ್ನು ವೈದ್ಯರು ಹೊಸಪೇಟೆ ತಾಲೂಕು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ಆ್ಯಂಬುಲೆನ್ಸ್‌ ಮೂಲಕ ತಾಲೂಕು ಆಸ್ಪತ್ರೆಗೆ ನಾಗಕನ್ನಿಕೆ ಸ್ಥಳಾಂತರಿಸಲಾಗಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡದಂತೆ ಆಕೆಯ ಪತಿ ಶಂಕರ್‌ ಹಾಗೂ 2ನೇ ಪತ್ನಿ ಹೈಡ್ರಾಮಾ ನಡೆಸಿದ್ದಾರೆ. ವೈದ್ಯಾಧಿಕಾರಿಗಳ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ. ಆದರೆ, ಪೊಲೀಸರ ಸಮ್ಮುಖದಲ್ಲಿ ಆಕೆಯನ್ನು ವೈದ್ಯ ಬಸವರಾಜ್‌ ನೇತೃತ್ವದ ತಂಡದ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೀಗಾಗಿ, ಶಂಕರ್‌ನ 2ನೇ ಪತ್ನಿ ಮತ್ತು ಮಕ್ಕಳು ಕೂಡ ಆಸ್ಪತ್ರೆಗೆ ತೆರಳಿದ್ದಾರೆ.

ನಾಗದೇವತೆ ಹೆಸರಲ್ಲಿ ವಂಚನೆ ಬಗ್ಗೆ ಟಿವಿ9ನಲ್ಲಿ ಸುದ್ದಿಪ್ರಸಾರ ಆಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಳ್ಳಾರಿ ಎಸ್‌ಪಿ ಸೈದುಲ್ಲಾ ಅಡಾವತ್ ತಕ್ಷಣವೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬೆದರಿಕೆ ಹಾಕಿದ್ದರೆ ಆ ಬಗ್ಗೆಯೂ ಕ್ರಮಕೈಗೊಳ್ಳುತ್ತೇವೆ. ಮೋಸ ಹೋಗುವವರು ಇರುವವರೆಗೂ ಮೋಸ ಮಾಡ್ತಾರೆ. ಇದನ್ನು ತಡೆಯುತ್ತೇವೆ ಎಂದು ಹೇಳಿದ್ದಾರೆ.

ನಾಗಕನ್ನಿಕೆಯ ಅನಾಚಾರ ಬಯಲು ದೇವರ ಹೆಸರಿನಲ್ಲಿ ವಿಚಿತ್ರಗಳನ್ನ ಸೃಷ್ಟಿಸುತ್ತಾ, ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ವಂಚನೆ ಮಾಡೋ ಕೆಲಸ ಹೊಸಪೇಟೆಯಲ್ಲಿ ನಡೀತಿದೆ. ನಾಗಕನ್ನಿಕೆ, 9 ವರ್ಷದಿಂದ ಹಾಸಿಗೆಯಿಂದ ಎದ್ದೇ ಇಲ್ಲ ಎಂದು ಹೇಳುತ್ತಾ ಪಾರ್ವತಿ ಹಾಗೂ ಶಂಕರ ಎಂಬ ದಂಪತಿಗಳು ಅನಾಚಾರ ನಡೆಸುತ್ತಿದ್ದಾರೆ. ಅಮಾಯಕರನ್ನು ವಂಚಿಸುತ್ತಿದ್ದಾರೆ. ಈಕೆಯ ಮಗ ಕೂಡ ಈ ದುಷ್ಕೃತ್ಯಗಳ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಈ ಹೀನ ಕೆಲಸವನ್ನು ಟಿವಿ9 ಕನ್ನಡ ವಾಹಿನಿ ಬಯಲಿಗೆಳೆದಿದೆ.

ಇದನ್ನೂ ಓದಿ: ಮೂಢನಂಬಿಕೆಗೆ ಪೈಶಾಚಿಕ ಕೃತ್ಯ.. ಹೆಣ್ಣು ಮಕ್ಕಳ ದಿನದಂದೆ ದೇವರ ಹೆಸರಿನಲ್ಲಿ ಹೆತ್ತ ಮಕ್ಕಳನ್ನೇ ಕೊಂದ ತಂದೆ-ತಾಯಿ

ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್​ ವೈರಲ್​

Published On - 9:28 pm, Mon, 16 August 21

ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಅವನ ತಂದೆ-ತಾಯಿ ತಮಿಳುನಾಡಿಂದ ಬಂದು ನಮ್ಮೂರಲ್ಲಿ ನೆಲೆಸಿದ್ದರು: ಗ್ರಾಮಸ್ಥರು
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ
ಮಾಸ್ಕ್​​​ಮ್ಯಾನ್​​ ಚಿನ್ನಯ್ಯ ಎಸ್​ಐಟಿ ವಶಕ್ಕೆ, ಬೆಳ್ತಂಗಡಿ ಕೋರ್ಟ್ ಆದೇಶ