ದೆಹಲಿ: ನೀರಿನ ಹಣ ಕೇಳಿದಕ್ಕೆ ಹೋಟೆಲ್​​​​ ಮಾಲಿಕನ ಮೇಲೆ ಕಾರು ಹತ್ತಿಸಲು ಯತ್ನ, ವಿಡಿಯೋ ವೈರಲ್​

ಸೇತುವೆಯ ಬಳಿ ಸಣ್ಣ ಉಪಾಹಾರ ಗೃಹವನ್ನು ನಡೆಸುತ್ತಿರುವ 34 ವರ್ಷದ ರಾಮ್ ಚಂದ್ ಈ ದೂರುನ್ನು ನೀಡಿದ್ದಾರೆ. ಮಹೀಂದ್ರಾ ನುವೋಸ್ಪೋರ್ಟ್ ಎಸ್‌ಯುವಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಎರಡು ಲೋಟ ನೀರು ಕೇಳಿದರು. ಅವರಿಗೆ ನೀರು ನೀಡಿ 5 ರೂ. ಕೇಳಿದೆ. ಆದರೆ ಅವರು ಇದಕ್ಕೆ ನಿರಾಕರಿಸಿದರು, ನಂತರ ನನ್ನ ಮತ್ತು ಅವರ ನಡುವೆ ಜಗಳ ಶುರುವಾಗಿದೆ ಎಂದು ಹೇಳಿದ್ದಾರೆ.

ದೆಹಲಿ: ನೀರಿನ ಹಣ ಕೇಳಿದಕ್ಕೆ ಹೋಟೆಲ್​​​​ ಮಾಲಿಕನ ಮೇಲೆ ಕಾರು ಹತ್ತಿಸಲು ಯತ್ನ, ವಿಡಿಯೋ ವೈರಲ್​

Updated on: Jan 03, 2024 | 12:42 PM

ದೆಹಲಿ, ಜ.3: ದೆಹಲಿಯಲ್ಲಿ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ಈ ಬಗ್ಗೆ ಒಂದು ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ದೆಹಲಿಯ ರಸ್ತೆಯಲ್ಲಿ ಎಸ್‌ಯುವಿ ಕಾರಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪುಂಡಾಟಿಕೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಉತ್ತರ ದೆಹಲಿಯ ಸಿಗ್ನೇಚರ್ ಸೇತುವೆ ಬಳಿ ಮಂಗಳವಾರ (ಜ.3) ಈ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ.

ಸೇತುವೆಯ ಬಳಿ ಸಣ್ಣ ಉಪಾಹಾರ ಗೃಹವನ್ನು ನಡೆಸುತ್ತಿರುವ 34 ವರ್ಷದ ರಾಮ್ ಚಂದ್ ಈ ದೂರುನ್ನು ನೀಡಿದ್ದಾರೆ. ಮಹೀಂದ್ರಾ ನುವೋಸ್ಪೋರ್ಟ್ ಎಸ್‌ಯುವಿಯಲ್ಲಿ ಬಂದ ಇಬ್ಬರು ವ್ಯಕ್ತಿಗಳು ಎರಡು ಲೋಟ ನೀರು ಕೇಳಿದರು. ಅವರಿಗೆ ನೀರು ನೀಡಿ 5 ರೂ. ಕೇಳಿದೆ. ಆದರೆ ಅವರು ಇದಕ್ಕೆ ನಿರಾಕರಿಸಿದರು, ನಂತರ ನನ್ನ ಮತ್ತು ಅವರ ನಡುವೆ ಜಗಳ ಶುರುವಾಗಿದೆ ಎಂದು ಹೇಳಿದ್ದಾರೆ.

ಈ ಕಾರಣಕ್ಕೆ ನನಗೆ ಕಾರಿನಲ್ಲಿ ಬಂದ ಆ ಇಬ್ಬರು ಥಳಿಸಿದ್ದಾರೆ ಎಂದು ರಾಮ್ ಚಂದ್ ಹೇಳಿದ್ದಾರೆ. ಇನ್ನು ವೈರಲ್​​ ಆಗಿರುವ ವಿಡಿಯೋದಲ್ಲಿ ಎಸ್‌ಯುವಿ ಕಾರು ಯು-ಟರ್ನ್ ತೆಗೆದುಕೊಂಡು ರಾಂಗ್ ಸೈಡ್‌ನಲ್ಲಿ ಬಂದು ಅಲ್ಲಿರುವ ಜನರಿಗೆ ಡಿಕ್ಕಿ ಹೊಡೆಯಲು ಪ್ರಯತ್ನಿಸಿದ್ದಾರೆ. ಇನ್ನು ಅವರನ್ನು ಹಿಡಿಯಲು ಈ ರಸ್ತೆಯಲ್ಲಿ ನಿಂತ ಕೆಲವೊಂದು ಜನರು ಆ ಕಾರಿನ ಮೇಲೆ ಕಲ್ಲು , ದೋಣೆಗಳಿಂದ ದಾಳಿ ಮಾಡುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ: ಯುವತಿ ಮೇಲೆ ಅತ್ಯಾಚಾರವಾಗಿಲ್ಲ, ಮೆದುಳು ನಾಪತ್ತೆ: ಮರಣೋತ್ತರ ಪರೀಕ್ಷೆ ವರದಿಯ ಸ್ಪೋಟಕ ಮಾಹಿತಿ ಬಹಿರಂಗ

ಕಾರಿನ ಮಾಲೀಕರನ್ನು ಮೊಹಮ್ಮದ್ ಹಬೀಬ್ ಎಂದು ಗುರುತಿಸಲಾಗಿದೆ. ವಾಹನದಲ್ಲಿ ಬಂದ ಇಬ್ಬರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us